Advertisement

“ಮಹಿಳೆ ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿರಲಿ’

01:33 PM Feb 12, 2021 | Team Udayavani |

ಬಾದಾಮಿ: ಮಹಿಳೆಯರಲ್ಲಿ ಜಾಗೃತಿ ಮೂಡಬೇಕು.ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಅನೇಕ  ಕಾರ್ಯಕ್ರಮ ಜಾರಿ ಮಾಡಲಾಗಿದೆ. ಮಹಿಳೆಯರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬಲವರ್ಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ಹೆಣ್ಣೊಂದು ಕಲಿತರೆ ಇಡೀ ಕುಟುಂಬವೇ ಕಲಿತಂತೆ. ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಮುಂದೆ ಬರಬೇಕು. ಗಗನಯಾತ್ರಿ, ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಬರುತ್ತಾರೆ. ನಮ್ಮ ತಪ್ಪಿನಿಂದಾಗಿ ಭ್ರೂಣಹತ್ಯೆಯಿಂದ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಿಲ್ಲಬೇಕು. ಸಮಾನತೆ ಬರಬೇಕಾದರೆ ಮಹಿಳಾ ಚುನಾಯಿತ ಪ್ರತಿನಿಧಿ  ಗಳೇ ಭಾಗವಹಿಸಬೇಕು. ಹೆಣ್ಣನ್ನು ನೋಡುವ ದೃಷ್ಟಿ ಬದಲಾವಣೆಯಾಗಬೇಕು. ಎಲ್ಲರೂ  ಜಾಗೃತಿಯಾಗಬೇಕು. ತಾರತಮ್ಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ :ಸಮಾಜ-ಭಕ್ತರ ದಾರಿ ತಪ್ಪಿಸ್ತಿದೆ ಕೆಎಲ್‌ಇ : ಶ್ರೀ 

ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಬಾಂಡ್‌ ವಿತರಿಸಿದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ವಿಧಾನ್‌ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ, ಜಿಪಂ ಸದಸ್ಯರಾದ ಆಸೆಂಗೆಪ್ಪ ನಕ್ಕರಗುಂದಿ, ಶರಣಬಸಪ್ಪ ಹಂಚಿನಮನಿ, ಶಶಿಕಲಾ ಯಡಹಳ್ಳಿ, ಇಂದ್ರವ್ವ ನಾಯ್ಕರ, ತಾಪಂ ಅಧ್ಯಕ್ಷೆ ರೇಖಾ ತಿರಕಪ್ಪನ್ನವರ, ಮುಖಂಡರಾದ ರಾಜಮಹ್ಮದ ಬಾಗವಾನ, ಮಹೇಶ ಹೊಸಗೌಡ್ರ, ಹೊಳಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಎಂ.ಡಿ.ಯಲಿಗಾರ, ತಹಶೀಲ್ದಾರ್‌ ಸುಹಾಸ ಇಂಗಳೆ, ತಾಪಂ ಇಒ ಡಾ| ಪುನೀತ ಹಾಜರಿದ್ದರು. ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ ಸ್ವಾಗತಿಸಿದರು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಶೋಕ ಬಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸಮ್ಮ ನರಸಾಪುರ, ರವಿ ಕಂಗಳ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next