Advertisement

ಗ್ರಾಮಸ್ಥರ ಕುಂದುಕೊರತೆ ಆಲಿಸಿದ ಸಿದ್ದರಾಮಯ್ಯ

05:22 PM May 29, 2021 | Team Udayavani |

ಕುಳಗೇರಿ ಕ್ರಾಸ್‌: ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಖಾನಾಪುರ ಎಸ್‌ಕೆ ಗ್ರಾಮ ಸೇರಿದಂತೆ ಹಲವು ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು.

Advertisement

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರ ಜತೆಗೂಡಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಖಾನಾಪುರ ಎಸ್‌ಕೆ ಗ್ರಾಮದ ಗ್ರಾಪಂ ಸದಸ್ಯ ಶೇಖಪ್ಪ ಪವಾಡಿನಾಯ್ಕರ್‌ ಮನವಿ ಸಲ್ಲಿಸಿ ಸಮಸ್ಯೆ ವಿವರಿಸಿದರು. ಮನವಿಗೆ ಸ್ಪಂದಿಸಿದ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್‌ ವೈದ್ಯಾಧಿಕಾರಿ ಡಾ| ವೈ.ಜೆ. ಮನಿಯಾರ ಅವರನ್ನು ಕರೆದು ಸಮಸ್ಯೆಗಳ ಕುರಿತು ವಿಚಾರಿಸಿದರು.

ಸುಮಾರು ಏಳೆಂಟು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್‌ ವೈದ್ಯರಿಲ್ಲ ಎಂಬ ಸುದ್ದಿ ತಿಳಿದು ಶಾಸಕರು ಗರಂ ಆದರು. ನಂತರ ಮಾಹಿತಿ ಕಲೆಹಾಕಿದರು. ಕಾಯಂ ವೈದ್ಯರ ನೇಮಕ ಮಾಡಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ ಕೊಟ್ಟು, ಸದ್ಯದಲ್ಲೇ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಗ್ರಾಮೀಣ ಜನರ ಆರೋಗ್ಯ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಗ್ರಾಮದ ಎಪಿಎಂಸಿ ಆವರಣದಲ್ಲಿ ವಾಸವಾಗಿರುವ 80ಕ್ಕೂ ಹೆಚ್ಚು ಸುಡುಗಾಡ ಸಿದ್ದರ ಕುಟುಂಬದವರು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು. ಮನವಿ ಆಲಿಸಿದ ಶಾಸಕ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೂ ನೆರವಿನ ಭರವಸೆ ನೀಡಿದರು. ಮುಖಂಡರಾದ ಸಣ್ಣಬೀರಪ್ಪ ಪೂಜಾರ, ನಾಗಪ್ಪ ಅಡಪಟ್ಟಿ, ಹನಮಂತ ಯಕ್ಕಪ್ಪನವರ, ಗ್ರಾಪಂ ಅಧ್ಯಕ್ಷ ಬಸು ಕಟ್ಟಿಕಾರ, ಸದಸ್ಯರಾದ ಶೇಖಪ್ಪ ಪವಾಡಿನಾಯ್ಕರ, ಲಕ್ಷ್ಮಣ್ಣ ದಾದನಟ್ಟಿ, ವೆಂಕಣ್ಣ ಹೊರಕೇರಿ, ಹನಮಂತ ನರಗುಂದ, ಮಾರುತಿ ತಳವಾರ, ಬೀರಪ್ಪ ಪೆಂಟಿ, ಶಿವಾನಂದ ಚೋಳನ್ನವರ, ರಾಮನಗೌಡ ದ್ಯಾವನಗೌಡ್ರ, ಯಮನಪ್ಪ ಪೂಜಾರ, ಶ್ರೀಕಾಂತ ಪೂಜಾರ, ಅಡಿವೆಪ್ಪ ಹಿರಗನ್ನವರ, ಬಸಪ್ಪ ಪೂಜಾರ, ಕರಿಗೌಡ ಮುಷ್ಟಿಗೇರಿ, ಹನಮಂತ ಹುಳ್ಳಿ, ಪುಂಡಲಿಕ ಪಾಟೀಲ ಇತರರು ಇದ್ದರು.’

Advertisement

Udayavani is now on Telegram. Click here to join our channel and stay updated with the latest news.

Next