Advertisement

ನನ್ನ ವಜಾಕ್ಕೆ ಸಚಿವೆ ಇರಾನಿಯೇ ಕಾರಣ: ನಿಹಲಾನಿ

09:10 AM Aug 22, 2017 | Karthik A |

ಹೊಸದಿಲ್ಲಿ: ಸೆನ್ಸಾರ್‌ ಬೋರ್ಡ್‌ನಲ್ಲಿ ಸಂಸ್ಕಾರಿ ಎಂದೇ ಟೀಕೆಗೊಳಗಾಗಿದ್ದ ಮಾಜಿ ಮುಖ್ಯಸ್ಥ ಪಹ್ಲಾಜ್‌ ನಿಹಲಾನಿ, ಈಗ ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧ ಹರಿಹಾಯ್ದಿದ್ದು, ತಾವು ವಜಾಗೊಳ್ಳಲು ಇರಾನಿ ಅಹಂಕಾರವೇ ಕಾರಣ ಎಂದು ಆರೋಪಿಸಿದ್ದಾರೆೆ. ಸಿಬಿಎಫ್ಸಿ (ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಅಧ್ಯಕ್ಷರಾಗಿದ್ದ ತಮ್ಮ ಸೇವಾವಧಿ ಕಡಿತವ‌ನ್ನು ಮಾಧ್ಯಮದಿಂದಲೇ ಅರಿತಿದ್ದೇನೆ. ವಜಾಗೊಳಿಸುವಾಗಲೂ ಮಾಹಿತಿ ನೀಡಿರಲಿಲ್ಲ. ‘ಇಂದು ಸರ್ಕಾರ್‌’ ಸಿನಿಮಾಕ್ಕೆ ಕತ್ತರಿಗೆ ಸೂಚಿಸಿದ್ದೇ ತಮ್ಮನ್ನು ವಜಾಗೊಳಿಸಲು ನೆಪವಾಯಿತು ಎಂದು ನಿಹಲಾನಿ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next