Advertisement

ಏರ್‌ ಇಂಡಿಯಾಗೆ ಅಲೆಕ್ಸ್‌ ಕ್ರುಝ್ ಮುಖ್ಯಸ್ಥ?

11:26 PM Feb 03, 2022 | Team Udayavani |

ಹೊಸದಿಲ್ಲಿ: ಟಾಟಾ ಸಮೂಹದ ವ್ಯಾಪ್ತಿಗೆ ಬಂದಿರುವ ಏರ್‌ ಇಂಡಿಯಾಕ್ಕೆ ಬ್ರಿಟಿಷ್‌ ಏರ್‌ವೆàಸ್‌ನ ಮಾಜಿ ಮುಖ್ಯಸ್ಥ ಅಲೆಕ್ಸ್‌ ಕ್ರುಝ್ ಸಿಇಒ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

Advertisement

ಈ ಬಗ್ಗೆ ಟಾಟಾ ಸನ್ಸ್‌ ಯಾವುದೇ ಮಾಹಿತಿ ನೀಡಿಲ್ಲ. 55 ವರ್ಷದ ಅವರು 2020, ಅಕ್ಟೋಬರ್‌ವರೆಗೆ ಬ್ರಿಟಿಷ್‌ ಏರ್‌ವೇಸ್‌ ಮುಖ್ಯಸ್ಥ ಮತ್ತು ಸಿಇಒ ಆಗಿದ್ದರು.  ಅದಕ್ಕೂ ಮುನ್ನ ಸ್ಪೇನಿನ ವ್ಯೂಲಿಂಗ್‌ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸಿದ್ದರು. ಕಳೆದ ತಿಂಗಳು ಕೇಂದ್ರ ಸರಕಾರ ಏರ್‌ ಇಂಡಿಯಾ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next