Advertisement

ಇವಿಎಂ ಹ್ಯಾಕ್‌ ಅಸಾಧ್ಯ ಮತ್ತೂಮ್ಮೆ ಸಾಬೀತು

09:26 PM Jun 03, 2021 | Team Udayavani |

ನವದೆಹಲಿ: ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿದೆ ಎನ್ನುವುದು ಪ್ರತಿಪಕ್ಷಗಳು ಆಗಾಗ ಆರೋಪ ಮಾಡುತ್ತಿವೆ. ಆದರೆ, ಈ ಆರೋಪಗಳು ಸುಳ್ಳು ಎಂದು ಮತ್ತೂಮ್ಮೆ ಸಾಬೀತಾಗಿದೆ.

Advertisement

ಇತ್ತೀಚೆಗೆ ಮುಕ್ತಾಯಗೊಂಡ ಕೇರಳ, ತಮಿಳುನಾಡು, ಪುದುಚ್ಚೇರಿ, ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಯಲ್ಲಿ ಬಳಕೆ ಮಾಡಿದ್ದು ಇವಿಎಂಗಳನ್ನೇ. ಅಷ್ಟೂ ರಾಜ್ಯಗಳ 822 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಕೆಯಾಗಿದ್ದ ಇವಿಎಂಗಳಲ್ಲಿದ್ದ ಮತದಾನ ದೃಢ ಚೀಟಿ (ವಿವಿಪ್ಯಾಟ್‌) ಅನ್ನು ಸಮಗ್ರವಾಗಿ ಪರಿಶೀಲಿಸಿದ ಸಂದರ್ಭದಲ್ಲಿ ಮತದಾರರು ಚಲಾಯಿಸಿದ ಮತ ಮತ್ತು ವಿವಿಪ್ಯಾಟ್‌ನಲ್ಲಿ ಮುದ್ರಿತವಾಗಿರುವ ವಿವರವೂ ಶೇ.100 ಸರಿಯಾಗಿದೆ ಎಂದು ದೃಢಪಟ್ಟಿದೆ.

ಈ ಬಗ್ಗೆ ಬಗ್ಗೆ ಭಾರತದ ಚುನಾವಣಾ ಆಯೋಗಕ್ಕೆ ಮತ ಚೀಟಿಯ ವಿಶ್ಲೇಷಣೆಯ ಅಂತಿಮ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಈ ಬಗ್ಗೆ “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಆಯೋಗದ ಅಧಿಕಾರಿ “ಇವಿಎಂಗಳ ಮೇಲೆ ಇದ್ದ ಆರೋಪಗಳು ಸುಳ್ಳು ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಹೀಗಾಗಿ, ಇವಿಎಂಗಳು ಸುರಕ್ಷಿತ’ ಎಂದು ಪ್ರತಿಪಾದಿಸಿದ್ದಾರೆ.

ವಿಧಾನಸಭೆ ಚುನಾವಣೆ ನಡೆದ ರಾಜ್ಯಗಳ 4,210 ವಿವಿಪ್ಯಾಟ್‌ ಮತ್ತು ಉಪಚುನಾವಣೆ ನಡೆದ ಕ್ಷೇತ್ರಗಳ 202 ಕ್ಷೇತ್ರಗಳ ವಿವರಗಳನ್ನು ಪರಿಶೀಲಿಸಲಾಗಿದೆ. ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪಿನ ಅನ್ವಯ ತಾಳೆ ಹಾಕಿ ಅಧ್ಯಯನ ನಡೆಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಐದು ಮತಕೇಂದ್ರಗಳಲ್ಲಿನ ಇವಿಎಂಗಳನ್ನು ಆಯ್ದುಕೊಂಡು ಈ ವಿಶ್ಲೇಷಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next