Advertisement

ಇವಿಎಂ ತಿರುಚಲು ಸಾಧ್ಯವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

10:51 AM Apr 10, 2017 | Harsha Rao |

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು ತಯಾರಕರಿಂದಲೂ ತಿರುಚಲು ಸಾಧ್ಯವಿಲ್ಲ. ಒಮ್ಮೆ ತಯಾರಿಸಿ ಹಸ್ತಾಂ ತರಿಸಿದ ಬಳಿಕ ಯಾವುದೇ ಬದಲಾವಣೆಗೂ ಅವಕಾಶವೇ ಇರುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಉತ್ತರಪ್ರದೇಶ ಚುನಾವಣೆ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಪ್ರತಿಪಕ್ಷಗಳ ಟೀಕೆಗಳಿಗೆ ಆಯೋಗ ಸ್ಪಷ್ಟ ಉತ್ತರ ನೀಡಿದ್ದು, ಇವಿಎಂಗಳನ್ನು ಅಷ್ಟು ಸುಲಭವಾಗಿ ಒಡೆಯಲೂ ಸಾಧ್ಯವಾಗದ ಮಟ್ಟಿಗೆ ದೃಢಕಾಯವಾಗಿವೆ. ಬದಲಾವಣೆ ಕೂಡ ಮಾಡಲಾಗದಂತೆ ಸಂಯೋಜಿಸಲಾಗಿದೆ ಎಂದಿದೆ.

Advertisement

ತಪ್ಪು ವಿಳಾಸ ನೀಡಿ ಮತಯಂತ್ರದಿಂದ ಡೇಟಾಗಳನ್ನು ಕದಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಚುನಾವಣೆ ಆಯೋಗ ಸಾಧ್ಯವೇ ಇಲ್ಲ. ಮತಯಂತ್ರದೊಳಗಿನ ಎಲ್ಲಾ ಮಾಹಿತಿಗಳೂ ಭದ್ರವಾಗಿರಲಿವೆ. ತಿದ್ದುಪಡಿಗೂ ಅವಕಾಶವೇ ಇರುವುದಿಲ್ಲ ಎಂದು ಹೇಳಿದೆ. ದೇಶದಲ್ಲಿ ಎಲ್ಲಾ ಭಾಗಗಳಲ್ಲಿ ನಡೆಯುವ ಚುನಾವಣೆಗಳಿಗೆ ಹೈದರಾಬಾದ್‌ನ ಇಸಿಐಎಲ್‌ ಹಾಗೂ ಬೆಂಗಳೂರಿನ ಬಿಇಎಲ್‌ ಕಂಪನಿಗಳು ತಯಾರಿಸಿದ ಇವಿಎಂಗಳನ್ನೇ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next