ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಬಿಲಿಯನೇರ್ ಟೆಕ್ ಮ್ಯಾಗ್ನೇಟ್ ಎಲಾನ್ ಮಸ್ಕ್ ಅವರ ಟೀಕೆಗಳ ಕುರಿತು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಕೂಡ ತಿರುಗೇಟು ನೀಡಿದೆ.
”ಭಾರತದಲ್ಲಿನ ಇವಿಎಂಗಳು “ಕಪ್ಪು ಪೆಟ್ಟಿಗೆ”, ಮತ್ತು ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ. ನಮ್ಮ ಚುನಾವಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಸಂಸ್ಥೆಗಳು ಹೊಣೆಗಾರಿಕೆಯ ಕೊರತೆಯಿರುವಾಗ ಪ್ರಜಾಪ್ರಭುತ್ವವು ನೆಪವಾಗಿ ಪರಿಣಮಿಸುತ್ತದೆ ಮತ್ತು ವಂಚನೆಗೆ ಗುರಿಯಾಗುತ್ತದೆ” ಎಂದು ರಾಹುಲ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ತೀವ್ರ ಚರ್ಚೆಯ ನಡುವೆ, ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಟೆಸ್ಲಾ ಸಿಇಒಗೆ ಮತ್ತು ರಾಹುಲ್ ಗಾಂಧಿಗೆ ಅವರಿಗೆ ಸವಾಲು ಹಾಕಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ”ಎಲಾನ್ ಮಸ್ಕ್ ಅಥವಾ ಬೇರೆಯವರು ಇವಿಎಂ ಹ್ಯಾಕ್ ಮಾಡಬಹುದೆಂದು ಭಾವಿಸುವವರು ಭಾರತದ ಚುನಾವಣ ಆಯೋಗವನ್ನು ಸಂಪರ್ಕಿಸಿ ಅದರ ಮೇಲೆ ಗುಂಡು ಹಾರಿಸಬೇಕು. ಆದರೆ ರಾಹುಲ್ ಗಾಂಧಿ ಏಕೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ದೂರು ನೀಡುತ್ತಿದ್ದಾರೆ? ಜಗತ್ತಿನ ಮುಂದೆ ಅಳುವುದು ಮತ್ತು ಭಾರತವನ್ನು ಕೀಳಾಗಿ ಕಾಣುವುದು ಕಾಂಗ್ರೆಸ್‌ನ ಡಿಎನ್‌ಎ ಭಾಗವೇ? ನಾವು ಈಗಷ್ಟೇ ಚುನಾವಣೆಯನ್ನು ಮುಗಿಸಿದ್ದೇವೆ ಮತ್ತು ಭಾರತದ ಜನರು ಸತತ ಮೂರನೇ ಬಾರಿಗೆ ಈ ರಾಜವಂಶವನ್ನು ತಿರಸ್ಕರಿಸಿದ್ದಾರೆ. ಆದರೆ ಅವರಿಗೆ ಇನ್ನೂ ಅದು ಗೊತ್ತಾಗಿಲ್ಲ” ಎಂದು ಮಾಳವಿಯಾ ಎಕ್ಸ್ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.