Advertisement

ಇವಿಎಂ ಹ್ಯಾಕಿಂಗ್‌: ಸೈಬರ್‌ ಎಕ್ಸ್‌ಪರ್ಟ್‌ ವಿರುದ್ಧ ಎಫ್ಐಆರ್‌ ದಾಖಲು

12:00 PM Jan 23, 2019 | udayavani editorial |

ಹೊಸದಿಲ್ಲಿ : ವಿದ್ಯುನ್ಮಾನ ಮತ ಯಂತ್ರಗಳನ್ನು  ಹ್ಯಾಕ್‌ ಮಾಡಬಹುದು ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಮತಯಂತ್ರಗಳನ್ನು ಹ್ಯಾಕ್‌ ಮಾಡಲಾಗಿತ್ತು ಎಂಬ ಸ್ಫೋಟಕ ಆರೋಪ ಮಾಡಿರುವ ಲಂಡನ್‌ ನಲ್ಲಿನ ಭಾರತೀಯ ಮೂಲದ ಸ್ವಘೋಷಿತ ಸೈಬರ್‌ ಎಕ್ಸ್‌ಪರ್ಟ್‌ ಸೈಯದ್‌ ಶೂಜಾ ವಿರುದ್ಧ ದಿಲ್ಲಿ ಪೊಲೀಸರು ಚುನಾವಣಾ ಆಯೋಗ ಕೊಟ್ಟಿರುವ ದೂರಿನ ಕೇಸು ದಾಖಲಿಸಿದ್ದಾರೆ.

Advertisement

ಐಪಿಸಿ ಸೆಕ್ಷನ್‌ 505 (ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದು ಮತ್ತು ಕಿಡಿಗೇಡಿತನ ತೋರುವುದು) ಪ್ರಕಾರ ಶೂಜಾ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ  ಎಂದು ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ ಅಧಿಕಾರಿ ತಿಳಿಸಿದ್ದಾರೆ. 

ಆರೋಪಿ ಶೂಜಾ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next