Advertisement

EVM; ಒಮರ್‌ ಅಬ್ದುಲ್ಲಾ, ಕಾಂಗ್ರೆಸ್‌, ಬಿಜೆಪಿ ನಡುವೆ ಜಟಾಪಟಿ

12:54 AM Dec 17, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷವು ಇವಿಎಂಗಳನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದ ಜಮ್ಮು-ಕಾಶ್ಮೀರ ಸಿಎಂ ಒಮರ್‌ ಅಬ್ದುಲ್ಲಾ ವಿರುದ್ಧ ಮಿತ್ರಪಕ್ಷ ಕಾಂಗ್ರೆಸ್‌ ಗರಂ ಆಗಿದೆ. ಇನ್ನೊಂದೆಡೆ, ಇಂಡಿಯಾ ಒಕ್ಕೂಟದ ಪಕ್ಷಗಳ ನಡುವೆಯೇ ಬಿರುಕು ಮೂಡಿರುವುದಕ್ಕೆ ಬಿಜೆಪಿ ಲೇವಡಿ ಮಾಡಿದೆ.

Advertisement

ಒಮರ್‌ ಹೇಳಿಕೆಗೆ ಸೋಮವಾರ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಸಿಎಂ ಆದ ಬಳಿಕ ನಿಮ್ಮ ನಿಲುವು ಬದಲಾಯಿತೇ? ಎಂದು ಪ್ರಶ್ನಿಸಿದ್ದು, ಇವಿಎಂ ವಿರುದ್ಧ ಆರೋಪ ಹೊರಿಸಿದ್ದು ಎಸ್‌ಪಿ, ಶಿವಸೇನೆ (ಉದ್ಧವ್‌) ಮತ್ತು ಎನ್‌ಸಿಪಿ (ಶರದ್‌). ಕಾಂಗ್ರೆಸ್‌ ಪ್ರಶ್ನಿಸಿರುವುದು ಚುನಾವಣ ಆಯೋಗದ ಪಕ್ಷಪಾತವನ್ನಷ್ಟೇ ಎಂದಿದೆ. ಇದೇ ವೇಳೆ, ಒಮರ್‌ ಹೇಳಿಕೆಗೆ ಧ್ವನಿಗೂಡಿಸಿರುವ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ, “ಇವಿಎಂ ಬಗ್ಗೆ ಪ್ರಶ್ನೆ ಮಾಡುವವರು ಅದನ್ನು ಹೇಗೆ ಹ್ಯಾಕ್‌ ಮಾಡಬಹುದು ಎಂದು ಸಾಬೀತುಪಡಿಸಬೇಕು’ ಎಂದು ಸವಾಲು ಹಾಕಿದ್ದಾರೆ. ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ, “ಈ ವಿಚಾರದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗುತ್ತಿರುವುದು ಸ್ಪಷ್ಟ’ ಎಂದಿದೆ.

ಇವಿಎಂಗಳನ್ನು ದೂಷಿಸುವುದರಿಂದ ಪ್ರಯೋಜನ ಇಲ್ಲ ಎಂದು ಇನ್ನಾದರೂ ಕಾಂಗ್ರೆಸ್‌ ಅರಿತುಕೊಳ್ಳಲಿ. ತಪ್ಪುಗಳನ್ನು ತಿದ್ದಿಕೊಂಡು ರಚನಾತ್ಮಕ ವಿಪಕ್ಷವಾಗಿ ಕಾರ್ಯನಿರ್ವಹಿಸಲಿ.
ಪ್ರಹ್ಲಾದ್‌ ಜೋಶಿ,ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next