Advertisement

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

12:07 PM Nov 03, 2015 | mahesh |

ಹೊಸದಿಲ್ಲಿ: ರಾಜಸ್ಥಾನ ಥಾರ್‌ ಮರುಭೂಮಿಯಲ್ಲಿ ನದಿಯೊಂದು ಹರಿಯುತ್ತಿತ್ತು. ಯಾವಾಗ? ಕಳೆದ ವರ್ಷವೋ ಅಥವಾ ಅದಕ್ಕಿಂತ ಹಿಂದಿನ ವರ್ಷವೋ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಬೇಡಿ. 1,72,000 ವರ್ಷಗಳ ಹಿಂದೆ ಶಿಲಾಯುಗದಲ್ಲಿ ನದಿ ಹರಿಯುತ್ತಿತ್ತು ಮತ್ತು ಅದು ಜನರ ಜೀವನಾಡಿಯಾಗಿತ್ತು ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌, ಎಜುಕೇಶನ್‌ ಆ್ಯಂಡ್‌ ರಿಸರ್ಚ್‌, ಚೆನ್ನೈನ ಅಣ್ಣಾ ವಿವಿ ಮತ್ತು ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ದ ಸೈನ್ಸ್‌ ಆಫ್ ಹ್ಯೂಮನ್‌ ಹಿಸ್ಟರಿ (ಎಂಪಿಐ-ಎಸ್‌ಎಚ್‌ಎಚ್‌) ನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಅಂಶ ಉಲ್ಲೇಖಗೊಂಡಿದೆ.

Advertisement

ಆ ವರ್ಷಗಳಲ್ಲಿ ಹಲವಾರು ಬಾರಿ ನಾಗರಿಕತೆಗೆ ಇದು ಜೀವ ಸೆಲೆಯಾಗಿದ್ದಿರಬಹುದು ಎಂದು “ಕ್ವಾರ್ಟರ್ಲಿ ಸೈನ್ಸ್‌ ರಿವ್ಯೂ’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧ ಹೇಳಿದೆ. ಬಿಕಾನೇರ್‌ ವ್ಯಾಪ್ತಿಯಲ್ಲಿ ಈ ನದಿ ಇತ್ತು. 80 ಸಾವಿರ ವರ್ಷಗಳ ಹಿಂದೆ ಥಾರ್‌ ಮರುಭೂಮಿ ವ್ಯಾಪ್ತಿಯಲ್ಲಿ ನದಿ ಸಕ್ರಿಯವಾಗಿತ್ತು. ಬಿಕಾನೇರ್‌ ಸಮೀಪದ ನಲ್‌ ಎಂಬ ಗ್ರಾಮದಲ್ಲಿ 2014ರಿಂದ 2019ರ ವರೆಗೆ ನಡೆಸಲಾಗಿರುವ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ.

ಜರ್ಮನಿಯ ಎಂಪಿಐ-ಎಸ್‌ಎಚ್‌ಎಚ್‌ನ ವಿಜ್ಞಾನಿ ಜೇಮ್ಸ್‌ ಬ್ಲಿಂಕಾರ್ನ್ ಹೊಸ ಶೋಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, “ನದಿ ಇತ್ತು ಎಂಬುದನ್ನು ಶಾಖವಿಲ್ಲದೆ ಉತ್ಪತ್ತಿಯಾಗಿರುವ ಬೆಳಕಿನ ತಂತ್ರಜ್ಞಾನದ ಮೂಲಕ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಥಾರ್‌ ವ್ಯಾಪ್ತಿಯಲ್ಲಿ 80 ಸಾವಿರ ವರ್ಷಗಳ ಹಿಂದೆ ನದಿ ಇತ್ತು ಎಂಬ ಬಗ್ಗೆ ರಾಜಸ್ಥಾನದ ಲುನಿ ನದಿ ತೀರ ಪ್ರದೇಶದಲ್ಲಿ ಅಧ್ಯಯನ ನಡೆಸಲಾಗಿತ್ತು. ಮಹಿ, ಸಬರಮತಿ, ಒರ್ಸಾಂಗ್‌ ನದಿ ಕಣಿವೆ ವ್ಯಾಪ್ತಿಯಲ್ಲಿಯೂ ಈ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಥಾರ್‌ ವ್ಯಾಪ್ತಿಯಲ್ಲಿ ನದಿ ಇದ್ದದ್ದು ದೃಢಪಟ್ಟಿದೆ ಎಂದು ಬ್ಲಿಂಕಾರ್ನ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next