Advertisement

ಇ-ವಿಭಾ, ಮಹಿಳೆಯರ ಆನ್‌ಲೈನ್‌ ವ್ಯವಹಾರ

08:10 AM Jul 24, 2017 | Harsha Rao |

ಆನ್‌ಲೈನ್‌ ವ್ಯವಹಾರ ಅಂದರೆ ಎಲ್ಲರಿಗೂ ತಕ್ಷಣವೇ ಫ್ಲಿಪ್‌ಕಾರ್ಟ್‌, ಅಮೇಜಾನ್‌ ಜ್ಞಾಪಕಕ್ಕೆ ಬರುತ್ತದೆ ಅಲ್ವೇ? ಆದರೆ ಇಲ್ಲಿ ನೋಡಿ. ಮಹಿಳೆಯರಿಂದ , ಮಹಿಳೆಯರಿಗಾಗಿಯೇ ಒಂದು ಆನ್‌ಲೈನ್‌ ವ್ಯವಹಾರದ ಅಟ್ಟವಿದೆ.  ನಮ್ಮ ಎಲ್ಲಾ ಮಹಿಳೆಯರು ಇಲ್ಲಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮಾಡಬಹುದು. ಸದಸ್ಯರಾಗಬಹುದು.  ಇದು ದೇಶದ ಏಕೈಕ ಮಹಿಳಾ ಆನ್‌ಲೈನ್‌ ಮಳಿಗೆ. 

Advertisement

 “ವಿಶ್ವ ಒಂದು ಗ್ರಾಮ’ ಎನ್ನುವ ಮಾತು ಈಗ ಎಲ್ಲಡೆಯೂ ಸಾಮಾನ್ಯ ಎಂಬಂತೆ ಕೇಳಿಬರುತ್ತಿದೆ. ಅಂಗೈಯಲ್ಲಿರುವ ಒಂದು ಪುಟ್ಟ ಮೊಬೈಲ… ಮೂಲಕ ನಾವು ವಿಶ್ವದ ಬಗ್ಗೆ ತಿಳಿದು ಕೊಳ್ಳಬಹುದು.  ಹಾಗೇ ವಿಶ್ವಕ್ಕೆ ನಮ್ಮ ಬಗ್ಗೆ ತಿಳಿಸಿಯೂ ಕೊಡಬಹುದು.ಇಂದಿನ ವ್ಯಾಪಾರ  ಉದ್ದಿಮೆಗಳು ಆನ್‌-ಲೈನ್‌ ಮಾರುಕಟ್ಟೆಗಳಿಂದ ವಿಶ್ವವ್ಯಾಪಿ ಆಗುತ್ತಿವೆ. ಇದುವರೆಗೂ ಪುರುಷ ಪ್ರಧಾನವಾಗಿ ಕಂಡು ಬರುತ್ತಿದ್ದ ಆನ್‌-ಲೈನ್‌ ಮಾರುಕಟ್ಟೆ ತಾಣಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದರೇ ಹೊರತು ಮಹಿಳೆಯರೇ ಸೇರಿ ಯಾವುದೇ ಆನ್‌-ಲೈನ್‌ಮಾರುಕಟ್ಟೆ ತಾಣವನ್ನು ಪ್ರಾರಂಭ ಮಾಡಿರಲಿಲ್ಲ. 

ಆದರೆ ಇಂದು ಮಹಿಳೆಯರಿಂದ, ಮಹಿಳೆಯರಿಗಾಗಿ,  ಮಹಿಳಾ ಉದ್ಯಮಿಗಳಿಂದ ಅಭಿವೃದ್ಧಿಪಡಿಸಿದ  ಉತ್ಪಾದನೆಗಳು/ ಸೇವೆಗಳು ಮತ್ತು ಮಾರಾಟವನ್ನು ಪ್ರದರ್ಶಿಸುವ ವ್ಯವಸ್ಥೆಯುಳ್ಳ ಭಾರತದಲ್ಲಿರುವ ಏಕಮಾತ್ರ ಆನ್‌ಲೈನ್‌ ಮಾರುಕಟ್ಟೆ ತಾಣ ಒಂದಿದೆ. ಅದುವೇ ಇವಿಭಾ.ಕಾಂ.  ಇದನ್ನು ಪ್ರಾರಂಭಿಸಿದ್ದು ನಮ್ಮ ಬೆಂಗಳೂರಿನ  ಅಪ್ಪಟ  ಕನ್ನಡತಿಯರೇ.

 2005ರಲ್ಲಿ  ಪ್ರಾರಂಭವಾದ ಈ ಆನ್‌ಲೈನ್‌ ಮಾರುಕಟ್ಟೆ ತಾಣವು ಮಹಿಳೆಯರ ಮಾಲೀಕತ್ವದ ವ್ಯಾಪಾರ  ಅಥವಾ ಸೇವೆಗಳನ್ನು ಒದಗಿಸುವ ಏಕೈಕ  ಇ-ವಾಣಿಜ್ಯ ವೇದಿಕೆಯಾಗಿದೆ. 

ಆನ್‌ಲೈನ್‌ ಮಾರಾಟ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಮಾರಾಟಗಾರರು ತಮ್ಮ ಉತ್ಪಾದನೆಗಳ  ವಿವರ ಮತ್ತು ಬೆಲೆಗಳ ಬಗ್ಗೆ ನಮ್ಮ ಪೋರ್ಟಲ್‌ಗೆ ಉಚಿತವಾಗಿ ಅಪ್‌ಲೋಡ್‌ ಮಾಡುತ್ತಾರೆ. ಅವರ ಉತ್ಪಾದನೆಯು ಮಾರಾಟವಾದ ನಂತರ ಅಲ್ಪ ಕಮೀಷನ್‌ ಪಡೆಯುತ್ತಾರೆ. ಅದನ್ನು ಮಾರಾಟ ಮಾಡಿದ ವಸ್ತುಗಳಿಂದ ಉತ್ಪಾದಕರಿಗೆ ಕೊಡಬೇಕಾದ ಮೊತ್ತದಲ್ಲಿ ಕಡಿತ ಮಾಡಿಕೊಂಡು ಉಳಿಕೆ ಹಣವನ್ನು  ಎರಡು ವಾರದೊಳಗೆ ಅವರ ಸೆಲ್ಲರ್‌ ಖಾತೆಗೆ ಸಂದಾಯ ಮಾಡಲಾಗುತ್ತದೆ. 
ಖರೀದಿ ಮಾಡುವವರು ತಮ್ಮ ಆರ್ಡರ… ಸಲ್ಲಿಸಿ, ಇ-ವಿಭಾಗೆ  ನಿರ್ದಿಷ್ಟವಾದ ಎಂದರೆ ತಮಗೆ ಅಗತ್ಯವಾದ ಉತ್ಪಾದನೆಗೆ ಪಾವತಿ ಮಾಡಿದಾಗ  ಈ  ಆರ್ಡರಿನ ಪ್ರತಿಯು ಮೊದಲು ಮಾರಾಟಗಾರರಿಗೆ, ಬಳಿಕ ಸಂಚಾಲನಾದಾರ ಪಾಲುದಾರರಿಗೆ ತಲುಪುತ್ತದೆ. ಖರೀದಿದಾರರಿಗೆ ಎಸ್‌ಎಂಎಸ್‌ ಅಥವಾ ಇ-ಮೇಲ… ಮೂಲಕ ಹಣ ಪಾವತಿಯಾದ ಖಾತರಿ ಸಂದೇಶ ಸಿಗುತ್ತದೆ.  ಇ-ವಿಭಾ ಸಂಸ್ಥೆಯು  ಖರೀದಿದಾರರಿಗೆ ನೀಡುವ ಇನ್‌ವಾಯ್ಸ… ಇರಿಸಿ, ಪಾರ್ಸೆಲ್‌ನ ಜೊತೆಯಲ್ಲಿ ರವಾನೆ ಮಾಡುತ್ತಾರೆ. 
  ಎನ್ನುತ್ತಾರೆ ಇ ವಿಭಾದ ಸಹ ಸಂಸ್ಥಾಪಕಿ, ನಿರ್ದೇಶಕಿಯೂ ಆದ ಆರತಿ ಶಣೈ
ವಿಭಾದಿಂದ ಮಾರಾಟಗಾರರಿಗೆ ಕರೆ ಮಾಡಿ ಪಾರ್ಸೆಲನ್ನು ಸಿದ್ಧಪಡಿಸುವಂತೆ ಸೂಚನೆ ನೀಡುತ್ತಾರೆ. ನಂತರ ಅದನ್ನು ಅವರಿಂದ ಒಯ್ದು ಖರೀದಿದಾರರಿಗೆ ಮುಟ್ಟಿಸುತ್ತಾರೆ.  ನಮ್ಮ ಕಮೀಷನ್‌ ದರ ಬೇರೆ ಬೇರೆ ವರ್ಗದ ಉತ್ಪನ್ನಗಳಿಗೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಕ್ಲೋಥಿಂಗ್‌, ಅಕ್ಸೆಸರೀಸ… ಮತ್ತು ಕರಕುಶಲ ವಸ್ತುಗಳಿಗೆ ಈ ದರದಲ್ಲಿ ವ್ಯತ್ಯಾಸವಿರುತ್ತದೆ.  ಸೇವಾ ತೆರಿಗೆ ಹಾಗೂ  ಕೊರಿಯರ್‌ ಖರ್ಚನ್ನೂ ಇದರಲ್ಲಿ ಸೇರಿಸುತ್ತೇವೆ.  ಖರೀದಿದಾರರಿಗೆ ಕೊಂಡ ಸರಕನ್ನು ಹಿಂದಿರುಗಿಸಲು ಮೂರು ದಿವಸ ಕಾಲ ಮಿತಿ ಇರುತ್ತದೆ. ವಾಪಸ್ಸು ಮಾಡಿದರೆ ಈ ಮೊತ್ತವನ್ನು ಅವರಿಗೆ  ಎರಡು ವಾರಗಳೊಳಗೆ ಹಿಂದಿರುಗಿಸಲಾಗುತ್ತದೆ ಎನ್ನುತ್ತಾರೆ ಇ ವಿಭಾದ ಸಂಸ್ಥಾಪಕಿ ಮತ್ತು ಸಿ.ಇ.ಒ ಜಯಂತಿ ಕೆ. ರಾವ್‌.
ಇ ವಿಭಾದ ಗುರಿ
ಮಹಿಳಾ ಮಾಲೀಕತ್ವವಿರುವ ಎÇÉಾ ವ್ಯವಹಾರಗಳಿಗೂ ಆನ್‌ ಲೈನ್‌ ವಾಣಿಜ್ಯ ಸಂಗಾತಿಯಾಗಿ ಕೆಲಸ ಮಾಡುತ್ತದೆ.
ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆ, ಕೌಶಲಗಳನ್ನು  ಅಭಿವೃದ್ಧಿಪಡಿಸಿ  ಅವರು ಆರ್ಥಿಕವಾಗಿ  ಸ್ವತಂತ್ರರಾಗುವಂತೆ  ಮಾಡಿ, ಸದುಪಯೋಗ ಪಡಿಸಿಕೊಳ್ಳುವುದು,  ತಮ್ಮ ವೈಯಕ್ತಿಕ ಆಯ್ಕೆ, ಆಧ್ಯತೆಗಳನ್ನು ಬಲ್ಲ ಸದಸ್ಯರ ನಡುವೆ ಪರಸ್ಪರ ವ್ಯಾಪಾರ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಏರ್ಪಡಿಸುವುದು  ಇ ವಿಭಾದ ಪ್ರಮುಖ ಗುರಿ.
ಮಹಿಳೆಯರನ್ನು ಅವರ ಪ್ರಾದೇಶಿಕ ಮಟ್ಟದ ಆರ್ಥಿಕ ಚೌಕಟ್ಟಿನಲ್ಲಿ ಸಬಲೀಕರಣಗೊಳಿಸಿ,  ಸಣ್ಣ ಉದ್ಯಮದಿಂದ ಮಧ್ಯಮ ಸ್ತರದ ಉದ್ಯಮದ ಮಟ್ಟಕ್ಕೆ ಏರಲು ಸಹಕರಿಸುವುದು ವೆಬ್‌ನ ಉದ್ದೇಶವೂ ಆಗಿದೆ. 
ನಮ್ಮದು ಮಹಿಳೆಯರೇ ಪಾಲ್ಗೊಳ್ಳುವ ಏಕಮಾತ್ರ ಆನ… ಲೈನ… ಮಾರಾಟ ಸಂಸ್ಥೆ.  ಈ ಮೂಲಕ ಮಹಿಳೆಯು ತನ್ನ ಮನೆಯಿಂದಲೇ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡಿ ಆರ್ಥಿಕ ಸ್ವಾವಲಂಬನೆ ಪಡೆಯಬಹುದು. ನಾವು ಆಯೋಜಿಸುವ ವಸ್ತು ಪ್ರದರ್ಶನಗಳು/ ಮಾರಾಟ, ಸಂಪರ್ಕಜಾಲ ಏರ್ಪಡಿಸುವ ಸಮಾರಂಭಗಳ ಮೂಲಕ  ಉತ್ಪನ್ನ/ಸೇವೆಗಳನ್ನು ಮಾರಾಟ ಮಾಡಲು ಅವಕಾಶವಿದೆ.  ಗ್ರಾಮೀಣ ಪ್ರದೇಶಗಳ ಮಹಿಳಾ ಉದ್ಯಮಿಗಳು ಬೆಂಗಳೂರು ಮತ್ತು ಭಾರತದ ಇತರ ಮಹಾನಗರಗಳಲ್ಲಿನ ಇ- ವಿಭಾ ಮಳಿಗೆಗಳ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಇ-ವಿಭಾ,  ತಮ್ಮ ಸೇವೆಗಳನ್ನು ಆನ್‌ಲೈನ್‌ ಮೂಲಕ ಪ್ರದರ್ಶಿಸುವ ಅವಕಾಶವನ್ನು ವಿಶೇಷವಾಗಿ ಮಹಿಳೆಯರಿಗೇ ನೀಡಿದೆ.   ಅವರು ತಮ್ಮ ಲಭ್ಯ ಗ್ರಾಹಕರನ್ನು ಹೆಚ್ಚು ಸಮಯ, ಹಣದ ವ್ಯಯವಿಲ್ಲದೆ ಶೀಘ್ರವಾಗಿ ತಲಪಲು ಸಾಧ್ಯವಾಗುತ್ತದೆ.  “ನಾವು ನಮ್ಮ ಸಂಪರ್ಕಜಾಲತಾಣಗಳ ಮೂಲಕ ನಮ್ಮ ನೋಂದಾಯಿತ ಸದಸ್ಯರಿಗೆ ನೆಟÌರ್ಕಿಂಗ… ಇತ್ಯಾದಿ ಹಾಗೂ ಸಂಪರ್ಕಗಳನ್ನು ಒದಗಿಸಿ ಕೊಡುತ್ತೇವೆ ಎನ್ನುತ್ತಾರೆ ಸಂಸ್ಥೆಯ ಆರತಿ ಶೆಣೈ.
ನಿರ್ವಹಣಾ ತಂಡ
ಇವಿಭಾದ ಸಿಇಒ ಜಯಂತಿ ಕೆ. ರಾವ್‌ ಅವರಿಗೆ  ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಈ ಸಂಸ್ಥೆಯ ಇವತ್ತು ಇವಿಭಾದ ಯಶಸ್ಸಿಗೆ  ಈಕೆಯ ಯೋಚನೆ, ಯೋಜನೆಗಳೇ ಕಾರಣ. 
ಈ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕಿಯಾಗಿ  ಆರತಿ ಶೆಣೈ ಇದ್ದಾರೆ.  ಇ.ವಿಭಾದ ನಿರ್ವಹಣೆ, ಆಡಳಿತ ಮಂಡಳಿಯ ನಿರ್ವಹಣೆಯ ಜವಾಬ್ದಾರಿ ಇವರ ಹೆಗಲಮೇಲಿದೆ. ಇವರಿಬ್ಬರು ಹೊಸ ಬಗೆಯ ಅನ್ವೇಷಣೆ, ಹೊಸ ವಸ್ತುಗಳನ್ನು ಆಯ್ಕೆ ಮಾಡುವ ರೀತಿ, ಮೆಚ್ಚುಗೆ ಗಳಿಸುವ ಕೊಡುಗೆ ನೀಡುವ ಮಿತಿಮೀರಿ ಕಾರ್ಯ ನಿರ್ವಹಿಸುವ ಪ್ರವೃತ್ತಿಯವರಾದ್ದರಿಂದ ಇವಿಭಾದ ವೇಗ ಹೆಚ್ಚು. 
ಇಲ್ಲಿ ಒದಗಿಸಲಾಗುವ ಸೇವೆಗಳು
ಇ ವಿಭಾದಲ್ಲಿ ನೇರ ಮಾರಾಟ ಮಾಡಬಹುದು. ಅದಕ್ಕೂ ಮೊದಲು ಉತ್ಪಾದಕರು ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಆನ್‌ಲೈನ್‌ನಲ್ಲಿರುವ ಗ್ರಾಹಕರ ಮೂಲಕ ಮಾರಾಟಮಾಡಬಹುದು. 
 ಬ್ಯಾನರ್‌ಗಳಂತೆ ವೆಬ… ಪುಟದಲ್ಲಿ ಆನ್‌ಲೈನ್‌ ಜಾಹೀರಾತು ಪ್ರದರ್ಶನಕ್ಕೆ ಅವಕಾಶವಿದೆ. ಹೀಗೆ ಮಾಡುವುದರಿಂದಾಗಿ, ಇತರೆ ಜಾಹೀರಾತುದಾರರ ಜಾಲತಾಣದೊಡನೆ ಕೊಂಡಿ ಕಲ್ಪಿಸಿ, ವೆಬ… ಅಸ್ತಿತ್ವವನ್ನು ಉತ್ತಮಪಡಿಸಿ ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯ.   ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದು, ಹೊಸ ಗ್ರಾಹಕರಿಗೆ ಕೊಂಡಿಯಾಗುವುದು, ತಂತ್ರಜ್ಞಾನ ತರಬೇತಿಗಳನ್ನು ನಡೆ ಸುವುದು.  ಸದಸ್ಯರಾದವರಿಗೆ ಹೊಸ ವ್ಯಾಪಾರ ವಿಧಾನದ ಬಗೆಗಿನ ಮಾಹಿತಿ ಕೊಡುವುದು.  ಮುಂದೆ ಮಹಾನಗರದಲ್ಲಿ ಇ-ವಿಭಾ ಮೆಟ್ರೋ ಮಳಿಗೆ ಆರಂಭಿಸುವುದು… ಇಂಥ ಹಲವು ಉದ್ದೇಶಗಳನ್ನು ಇ. ವಿಭಾ ಸಂಸ್ಥೆ ಹೊಂದಿದೆ. 
 ಮುಂದೇನು?
ಎÇÉಾ ಮೆಟ್ರೋ ಮಹಾನಗರಗಳಲ್ಲಿ 2018 ರ ವೇಳೆಗೆ ತನ್ನ ಸ್ವಂತ ಶಾಖೆಗಳನ್ನು  ದೇಶದಾದ್ಯಂತ
ವಿಭಾ ಸಂಸ್ಥೆಯು  ಆರಂಭಿಸುವ ಯೋಚನೆಗಳಿವೆ.  ಇದಲ್ಲದೇ ಇವಿಭಾ ಮಳಿಗೆಗಳನ್ನು ಸ್ಥಾಪಿಸಿ  ಗ್ರಾಮೀಣ ಮಾರುಕಟ್ಟೆಗ ಳನ್ನೂ ತಲಪಲು ಯೋಜನೆ ಸಿದ್ಧವಾಗಿದೆ. 
ಇವಿಷ್ಟೇ ಅಲ್ಲ, ಇ-ವಿಭಾ  ವೆಂಚರ್‌ ಕ್ಯಾಪಿಟಲ… ಫ‌ಂಡನ್ನು ರೂಪಿಸಿ, ಮಹಿಳೆಯರಿಗಾಗಿ ಅವರಲ್ಲಿರುವ ಅರಳು ಪ್ರತಿಭೆ, ಅನ್ವೇಷಣಾ ಸಾಮರ್ಥ್ಯವನ್ನು ಪ್ರೋತ್ಸಾಹಿಸುವ ಯೋಜನೆಯನ್ನೂ ಹೊಂದಿದೆ.  ವಿದೇಶೀ ಮಾರುಕಟ್ಟೆಯಲ್ಲಿ ಭಾರತೀಯ ಮಹಿಳೆಯರು ಸಿದ್ದಪಡಿಸಿರುವ  ಸ್ವದೇಶಿ ವಸ್ತುಗಳಿಗೆ ಪ್ರವೇಶ ಗಳಿಸುವುದು ನಮ್ಮ ಮುಖ್ಯ ಗುರಿಗಳಲ್ಲಿ ಒಂದು ಎನ್ನುತ್ತಾರೆ ಆರತಿ ಶಣೈ.
ಏನೇನು ಸಿಗುತ್ತಿದೆ?
 ಬಟ್ಟೆಗಳು ಗಾರ್ಮೆಂಟ್‌ ವಸ್ತುಗಳು, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ಮನೆಯನ್ನು ಸುಂದರ ಗೊಳಿಸುವ ಪರಿಕರಗಳು, ಫ್ಯಾಷನ್‌, ಜ್ಯೂವೆಲರಿ, ಇತರೆ…
 ಏನೇನು ಕಲಿಸುತ್ತಾರೆ?
 ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ, ಮನೆಯಲ್ಲಿ ಮಾಡುವ ಕಸೂತಿ, ಬ್ಯೂಟಿಪಾರ್ಲರ್‌ ತರಬೇತಿ, ಟ್ಯುಟೋರಿಯಲ್‌ ಕೋಚಿಂಗ್‌, ಕಾನೂನಿಗೆ ಸಂಬಂಧಿಸಿದ ಮಾಹಿತಿ ಇತ್ಯಾದಿ ಇತ್ಯಾದಿ.
ಜಠಿಠಿಟs://ಡಿಡಿಡಿ.ಛಿvಜಿಚಿಜಚ.cಟಞ/

Advertisement

ಡಾ.ಗೀತಾ ತೆಕ್ಕೆವಾರಿ 
 

Advertisement

Udayavani is now on Telegram. Click here to join our channel and stay updated with the latest news.

Next