Advertisement

ಜಬರ್‌ದಸ್ತ್ ಫೋರ್ಸ್‌ ಗೂರ್ಖಾ ; ಈ ವಾಹನಕ್ಕೆ ರಸ್ತೆಯೇ ಬೇಕಿಲ್ಲ!

09:19 AM Apr 23, 2019 | Hari Prasad |

ಆಫ್ ರೋಡ್ ವಾಹನ ಹುಡುಕುವವರಿಗೆ ಅತ್ಯುತ್ತಮ ಆಯ್ಕೆ ಈ ಗೂರ್ಖಾ. ಗಡಸು ವಾಹನವಿದು. ಆದರೆ ಸಾಮಾನ್ಯ ರಸ್ತೆಯಲ್ಲೂ ಸಂಚರಿಸುವ ಅನುಕೂಲವೂ ಇದೆ. ದುರ್ಗಮ ಹಾದಿಯಲ್ಲಿ ಸುಲಭವಾಗಿ ಸಾಗಬಹುದು. ಇಂಥ ವಾಹನಗಳು ನಿಗದಿತ ನಿರ್ವಹಣೆಯನ್ನೂ ಬೇಡುತ್ತವೆ. ರಸ್ತೆಯೇ ಇಲ್ಲದ ಕೊರಕಲು ಪ್ರದೇಶಗಳು, ಎಸ್ಟೇಟ್‌ ಹೊಂದಿರುವವರು, ಪ್ರತ್ಯೇಕ ವ್ಯಾಗನ್‌ (ಹಿಂಭಾಗದ ಗಾಡಿ) ಬಳಕೆ ಮಾಡುವವರಿಗೆ ಇದು ಸೂಕ್ತವಾಗಿದೆ.

Advertisement

ಫೋರ್ಸ್‌ ಗೂರ್ಖಾ! ಇದು, ಆಫ್ರೋಡಿಂಗ್‌ ಹುಚ್ಚಿದ್ದವರ ಕನಸಿನ ವಾಹನ. ಮಹೀಂದ್ರಾ ಥಾರ್‌ ರೀತಿ ಗುಡ್ಡಗಾಡುಗಳಲ್ಲಿ ಚಲಿಸಲು ಇಷ್ಟಪಡುವವರ ಇನ್ನೊಂದು ವಾಹನ. ಮಹೀಂದ್ರಾ ಥಾರ್‌ನಷ್ಟು ಇದು ಹೆಸರು ಮಾಡದಿದ್ದರೂ, ಭಾರತದಲ್ಲಿ ನಡೆದ ಅನೇಕ ಸ್ಪರ್ಧೆಗಳಲ್ಲಿ ಫೋರ್ಸ್‌ ಗೂರ್ಖಾ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿದೆ. ಆದ ಕಾರಣ, ಇದು ವಿಶ್ವದರ್ಜೆಯ ಆಫ್ರೋಡಿಂಗ್‌ ಅನುಕೂಲ ಹೊಂದಿದ ಏಕೈಕ ಭಾರತೀಯ ವಾಹನ ಎಂಬ ಹೆಸರು ಪಡೆದುಕೊಂಡಿದೆ.

ಫೋರ್ಸ್‌ ಗೂರ್ಖಾ ಗ್ರಾಹಕರ ಹಲವು ಕಾಲದ ಬೇಡಿಕೆಯ ಕಾರಣದಿಂದ, ಸುಧಾರಿತ ಆವೃತ್ತಿಯನ್ನು ಕಳೆದ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತೀಯ ಆಫ್ರೋಡಿಂಗ್‌ ವಾಹನಗಳಲ್ಲಿ ಸದ್ಯ ಅತ್ಯಧಿಕ ಎಂಜಿನ್‌ ಸಾಮರ್ಥ್ಯ ಮತ್ತು ಆಫ್ರೋಡಿಂಗ್‌ ಸೌಕರ್ಯಗಳನ್ನು ಇದು ಹೊಂದಿದೆ. 140ಎಚ್‌ಪಿಯ ಬೆನ್ಜ್ ಎಂಜಿನ್‌, ಡಿಫ‌ರೆನ್ಷಿಯಲ್‌ ವೀಲ್‌ ಲಾಕ್‌ಗಳು ಪ್ರತಿ ಸಸ್ಪೆನ್ಷನ್‌ಗೆ ಕಾಯಿಲ್‌ ಸ್ಪ್ರಿಂಗ್‌ ಹೊಸ ಚಾಸಿಗಳನ್ನು ಇದು ಹೊಂದಿದೆ. ಫೋರ್ಸ್‌ ಗೂರ್ಖಾ ಎಕ್ಸ್‌ಟ್ರೀಮ್‌ ಹೆಸರಿನಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಈಗ ಎಬಿಎಸ್‌ ಆವೃತ್ತಿಯನ್ನೂ ಹೊಂದಿದೆ.

ವಿನ್ಯಾಸ
ಫೋರ್ಸ್‌ ಗೂರ್ಖಾ ಎಕ್ಸ್‌ಟ್ರೀಂ ವಿನ್ಯಾಸ, ಹಿಂದಿನ ಮಾದರಿಗಿಂತ ತೀರಾ ಭಿನ್ನವಾಗಿಯೇನೂ ಇಲ್ಲ. ಫೋರ್ಸ್‌ ವಿನ್ಯಾಸ ಮರ್ಸಿಡಿಸ್‌ ಬೆಂಜ್‌ನ ಜಿ ವ್ಯಾಗನ್‌ ಅನ್ನು ಹೋಲುತ್ತದೆ. ಈಗಿನದ್ದೂ ಹಾಗೆಯೇ ಇದೆ. ಆದರೆ, ತಾಂತ್ರಿಕ ವಿಚಾರದಲ್ಲಿ ವ್ಯಾಪಕ ಸುಧಾರಣೆ ಕಂಡಿದೆ. ವಿಶೇಷವಾಗಿ ಸೇನೆಯ ಲಘು ಮಿಲಿಟರಿ ವಾಹನದ ರೀತಿಯ ತಾಂತ್ರಿಕತೆ ಇದರಲ್ಲಿದೆ. ಎತ್ತರಿಸಿದ ಬಂಪರ್‌ಗಳು, ಎತ್ತರದ ಸೀಟುಗಳು, ಐವರು ಕೂರಬಹುದಾದ ಸ್ಥಳಾವಕಾಶ, ಒಳಾಂಗಣದಲ್ಲಿ ಎ.ಸಿ ಸೌಲಭ್ಯ, ಹೊರಭಾಗ ಕ್ಯಾರಿಯರ್‌ ಮತ್ತು ಪ್ರತ್ಯೇಕ ಫ್ಯೂಯೆಲ್‌ ಕ್ಯಾನ್‌ ಇಡಲು ಅವಕಾಶ, ಟಾಪ್‌ನಲ್ಲಿ ಎಲ್‌.ಇ.ಡಿ. ಲೈಟ್‌ಗಳನ್ನು ಇಡಬಹುದು ಮತ್ತು ಎತ್ತರಿಸಿ ಎಕ್ಸಾಸ್ಟ್‌ ವ್ಯವಸ್ಥೆ ಇದ್ದು ವಾಹನ ಶೇ.60ರಷ್ಟು ಮುಳುಗಿದರೂ ಚಾಲನೆ ಮಾಡಬಹುದು.

ಮುಂಭಾಗ ಮತ್ತು ಹಿಂಭಾಗ ಸಾಮಾನ್ಯ ಲೈಟ್‌ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ ಮೇಲೆ ಎಲ್‌ಇಡಿ ಬ್ರೇಕ್‌ಲೈಟ್‌ ಕೂಡ ಇದೆ. ಉಳಿದಂತೆ ಇದಕ್ಕೆ ಅಳಡವಡಿಸಬಹುದಾದ ಲೈಟ್‌ಗಳು ಅಕ್ಸೆಸರೀಸ್‌ನಲ್ಲಿ ಬರುತ್ತದೆ. ಆಫ್ರೋಡರ್‌ ಆದ ಕಾರಣ ಹೆಚ್ಚಿನ ಐಷಾರಾಮಿ ವ್ಯವಸ್ಥೆಗಳು ಇದರಲ್ಲಿಲ್ಲ. ಸಾಮಾನ್ಯ ಮೀಟರ್‌, ಡ್ಯಾಶ್‌ಬೋರ್ಡ್‌ ವ್ಯವಸ್ಥೆಯಷ್ಟೇ ಇದೆ.

Advertisement

ಕಲ್ಲು-ಮಣ್ಣಿನ ಹಾದಿ ಲೆಕ್ಕಕ್ಕಿಲ್ಲ
ಗೂರ್ಖಾ ಎಕ್ಸ್‌ಟ್ರೀಂ ವಿಶೇಷ ಎಂದರೆ ಹೊಸ ಲೈವ್‌ ಫ್ರಂಟ್‌ ಆ್ಯಕ್ಸೆಲ್‌ ಮತ್ತು ಕಾಯಿಲ್‌ ಸ್ಪ್ರಿಂಗ್‌ ವ್ಯವಸ್ಥೆ. ಪ್ರಸಿದ್ಧ ಆಫ್ರೋಡರ್‌ ಜೀಪ್‌ ರ್‍ಯಾಂಗ್ಲರ್‌ನಲ್ಲಿರುವ ಮಾದರಿಯ ಆಕ್ಸೆಲ್‌ ವ್ಯವಸ್ಥೆ ಇದರಲ್ಲಿದೆ. ವಿಶಾಲ ವೀಲ್‌ ಆರ್ಚ್‌ ಹೊಂದಿದ್ದು, ವೀಲ್‌ ಕುಗ್ಗಿದ ಸಮಯದಲ್ಲಿ (ಕಲ್ಲಿನ ಮೇಲೆ ಹತ್ತುವ ಸಂದರ್ಭ) ಬಾಡಿಗೆ ತಾಗುವುದನ್ನು ತಪ್ಪಿಸುತ್ತದೆ. ದಾನಾ 44 ಆಕ್ಸೆಲ್‌ ವ್ಯವಸ್ಥೆಯ ರೀತಿ ಆ್ಯಕ್ಸೆಲನ್ನು ಹೊಂದಿದೆ. 40 ಡಿಗ್ರಿಯಷ್ಟು ವಾಹನ ವಾಲಿದರೂ ಬೀಳದ ರೀತಿ ವ್ಯವಸ್ಥೆ ಇದೆ.

ಹಾಗೆಯೇ, ಚಕ್ರಗಳು ನೆಲಕ್ಕೆ ತಾಗದೇ ಇರುವ ಸಂದರ್ಭದಲ್ಲಿ ಅದರ ಶಕ್ತಿಯನ್ನು ಬೇರೆ ವೀಲ್‌ಗೆ ವರ್ಗಾಯಿಸುವ ವ್ಯವಸ್ಥೆಯೂ ಇದರಲ್ಲಿದೆ. ಆದ್ದರಿಂದ ಹೆಚ್ಚಿನ ಶಕ್ತಿಯ ಮೂಲಕ ವಾಹನ ಸಾಗಲು ನೆರವಾಗುತ್ತದೆ. ಹಿಂಭಾಗ ಮತ್ತು ಮುಂಭಾಗಕ್ಕೆ ಡಿಫ‌ರೆನ್ಷಿಯಲ್‌ ಲಾಕ್‌ ಇದ್ದು, ಪರಿಣಾಮಕಾರಿಯಾಗಿದೆ. 4X4 ವ್ಯವಸ್ಥೆ ಇದೆ.

ಎಂಜಿನ್‌ ಫೋರ್ಸ್‌ ಕಂಪನಿಯ ವಾಹನವಾದರೂ ಇದರ ಎಂಜಿನ್‌ ಬೆಂಜ್‌ನದ್ದು. ಆದ್ದರಿಂದ ಎಂಜಿನ್‌ ಸಾಮರ್ಥ್ಯ, ಪವರ್‌ ಡೆಲಿವರಿ ಅಂಶಗಳು ಅತ್ಯುತ್ತಮವಾಗಿವೆ. ಈ ಎಂಜಿನ್‌ ಭಾರತದಲ್ಲೇ ತಯಾರಾದದ್ದಾದರೂ ಹಲವು ಬಿಡಿಭಾಗಗಳು ವಿದೇಶದಿಂದ ಆಮದುಗೊಂಡವು. ಒಎಮ್‌ 611 ಎಂಜಿನ್‌ ಇದರಲ್ಲಿದ್ದು, ಜಿ32 ಮಾದರಿಯ ಗಿಯರ್‌ಬಾಕ್ಸ್‌ ಇದೆ. ಇದು ಅತಿ ಹೆಚ್ಚು ಟಾರ್ಕ್‌ ನಡುವಲ್ಲಿ ಸಹಕಾರಿ. ಟಿಸಿಐಸಿ 4 ಸಿಲಿಂಡರ್‌ನ, 16 ವಾಲ್ವ್ ನ 2149 ಸಿಸಿಯ ಈ ಎಂಜಿನ್‌ 3800 ಆರ್‌ಪಿಎಂನಲ್ಲಿ 141 ಎಚ್‌ಪಿ ಮತ್ತು 1200-2400 ಆರ್‌ಪಿಎಂನಲ್ಲಿ 321 ಎನ್‌ಎಂ ಟಾರ್ಕ್‌ ಉತ್ಪಾದನೆ ಮಾಡುತ್ತದೆ. 4X4 ಡ್ರೈವ್‌ಗಾಗಿ ಡ್ಯುಎಲ್‌ ಮಾಸ್‌ ಫ್ಲೈವೀಲ್‌ ಇದೆ.

ಯಾರಿಗೆ ಸೂಕ್ತ ?
ಕಠಿಣ ಆಫ್ರೋಡ್‌ ವಾಹನ ಹುಡುಕುವವರಿಗೆ ಅತ್ಯುತ್ತಮ ಆಯ್ಕೆ. ಗಡಸು ವಾಹನವಿದು. ಆದರೆ, ಸಾಮಾನ್ಯ ರಸ್ತೆಯಲ್ಲೂ ಸಂಚರಿಸುವಂತೆ ಅನುಕೂಲವೂ ಇದೆ. ಅತಿ ದುರ್ಗಮ ಹಾದಿಯಲ್ಲಿ ಸುಲಭವಾಗಿ ಸಾಗಬಹುದು. ಇಂಥ ವಾಹನಗಳು ನಿಗದಿತ ನಿರ್ವಹಣೆಯನ್ನೂ ಬೇಡುತ್ತವೆ. ರಸ್ತೆಯೇ ಇಲ್ಲದ ಕೊರಕಲು ಪ್ರದೇಶಗಳು, ಎಸ್ಟೇಟ್‌ ಹೊಂದಿರುವವರು, ಪ್ರತ್ಯೇಕ ವ್ಯಾಗನ್‌ (ಹಿಂಭಾಗ ಗಾಡಿ) ಬಳಕೆ ಮಾಡುವವರಿಗೆ ಇದು ಸೂಕ್ತವಾಗಿದೆ. ಮೂರು ಬಣ್ಣಗಳಲ್ಲಿ ಇದು ಲಭ್ಯವಿದ್ದು, ವಿವಿಧ ಸೌಕರ್ಯಗಳಿಗೆ ಅನುಗುಣವಾಗಿ 9.99 ಲಕ್ಷ ರೂ.ಗಳಿಂದ 13.33 ಲಕ್ಷ ರೂ.ಗಳವರೆಗೆ (ಎಕ್ಸ್‌ ಷೋರೂಂ ದರ) ಲಭ್ಯವಿದೆ.

ರೈನ್‌ಫಾರೆಸ್ಟ್‌ ಚಾಲೆಂಜ್‌ ಪಾಠ
ಗೋವಾದಲ್ಲಿ ನಡೆಯುವ ರೈನ್‌ಫಾರೆಸ್ಟ್‌ ಚಾಲೆಂಜ್‌ನಲ್ಲಿ ಹಲವು ವರ್ಷಗಳಿಂದ ಫೋರ್ಸ್‌ನ ಗೂರ್ಖಾ ಮಾದರಿಗಳು ಗೆಲ್ಲುತ್ತಲೇ ಇವೆ. ಇದರಲ್ಲಿ ಕಲಿತ ಪಾಠಗಳನ್ನು ಅದು ಗೂರ್ಖಾ ಎಕ್ಸ್‌ಟ್ರೀಂನಲ್ಲಿ ಅಳವಡಿಸಿಕೊಂಡಿದ್ದು, ಆಫ್ರೋಡಿಂಗ್‌ನಲ್ಲಿ ಅದ್ಭುತ ವಾಹನವನ್ನು ತಯಾರಿಸಲು ನೆರವಾಗಿದೆ. ಶೇ.70ರಷ್ಟು ಏರುಮುಖದ ಹಾದಿಯನ್ನು ಬ್ಯಾಲೆನ್ಸ್‌ ತಪ್ಪದೆ ಏರಬಹುದಾದ, ಉತ್ತಮ ಸೆಂಟರ್‌ ಆಫ್ ಗ್ರಾವಿಟಿ ವ್ಯವಸ್ಥೆಯ ಚಾಸಿ ವಿನ್ಯಾಸ ಇದರಲ್ಲಿದೆ. ಜತೆಗೆ ಪವರ್‌ಸ್ಟೇರಿಂಗ್‌ ವ್ಯವಸ್ಥೆ, 16 ಇಂಚಿನ ಅಗಲವಾದ ಟಯರ್‌ಗಳು ಇದರಲ್ಲಿನ ಪ್ಲಸ್‌ ಪಾಯಿಂಟ್‌…

ತಾಂತ್ರಿಕ ಮಾಹಿತಿ
2400 ವೀಲ್‌ಬೇಸ್‌
2510 ಕೆ.ಜಿ
63.5 ಲೀ. ಇಂಧನ ಟ್ಯಾಂಕ್‌
4 ಸಿಲಿಂಡರ್‌, 140 ಎಚ್‌ಪಿ ಬೆನ್‌j ಎಂಜಿನ್‌
321 ಎನ್‌ಎಂ ಟಾರ್ಕ್‌
5 ಸ್ಪೀಡ್‌ ಗಿಯರ್‌ ಬಾಕ್ಸ್‌
4X4 ಮತ್ತು ಡಿಫ‌ರೆನ್ಷಿಯಲ್‌ ಲಾಕ್‌ ವ್ಯವಸ್ಥೆ
ಎಬಿಎಸ್‌ ವ್ಯವಸ್ಥೆ

— ಈಶ

Advertisement

Udayavani is now on Telegram. Click here to join our channel and stay updated with the latest news.

Next