Advertisement

Team India; ದ್ರಾವಿಡ್‌ ಇದ್ದಾಗ ಎಲ್ಲ  ಸರಿಯಿತ್ತು: ಹರ್ಭಜನ್‌

11:06 PM Jan 07, 2025 | Team Udayavani |

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡಕ್ಕೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದಾಗ ಎಲ್ಲವೂ ಸರಿಯಿತ್ತು. ಆದರೆ ಗೌತಮ್‌ ಗಂಭೀರ್‌ ಕೋಚ್‌ ಆಗಿ ಆಯ್ಕೆಯಾದ ಕೂಡಲೇ ತಂಡಕ್ಕೆ ಏನಾಯಿತು ಎಂದು ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ದ್ರಾವಿಡ್‌ ಕೋಚ್‌ ಆಗಿದ್ದಾಗ ಭಾರತ ಟಿ20 ವಿಶ್ವಕಪ್‌ ಗೆದ್ದಿತು. ಮೂರೂ ಕ್ರಿಕೆಟ್‌ ಮಾದರಿಗಳಲ್ಲಿ ತನ್ನ ಪಾರಮ್ಯವನ್ನು ಉಳಿಸಿಕೊಂಡಿತ್ತು. ಆದರೆ ಗಂಭೀರ್‌ ಕೋಚ್‌ ಆದ ಬೆನ್ನಲ್ಲೇ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೈಫ‌ಲ್ಯ ಕಾಣಲಾರಂಭಿಸಿದೆ. ರೋಹಿತ್‌ ಶರ್ಮ, ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ತಂಡಕ್ಕೆ ಏನಾಗಿದೆ ಎಂದು ಭಜ್ಜಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next