Advertisement

ಜೀವನದಲ್ಲಿ ಎಲ್ಲವೂ ಸಾಧ್ಯ 

02:40 PM Aug 20, 2018 | |

ನಿಮಗೆ ನೀವು ಮೌಲ್ಯ ತಂದು ಕೊಟ್ಟಾಗ ಜಗತ್ತೇ ನಿಮ್ಮ ಮೌಲ್ಯವನ್ನು ಗುರುತಿಸುತ್ತದೆ. ಜಗತ್ತಿನಲ್ಲಿ ನಮಗೆ ನಾವೇ ಮಾರ್ಗದರ್ಶಕರಾದಾಗ ಗೆಲುವು ಖಂಡಿತಾ ನಮ್ಮದಾಗುತ್ತದೆ. ಹಣ ಬದುಕಿಗೆ ಮುಖ್ಯ. ಅದು ಎಷ್ಟೆಂದರೆ ಕಾರಿಗೆ ಹಾಕುವ ಇಂಧನದಷ್ಟು. ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ ಎನ್ನುವ ಸಂದೀಪ್‌ ಮಹೇಶ್ವರಿ ಅವರ ಇಂಥ ಮಾತುಗಳು ಬದುಕಿನ ಅರ್ಥವನ್ನು ತೆರೆದಿಡುವುದಲ್ಲದೇ, ಇಂದಿನ ಯುವಜನರು ನಡೆಯಬೇಕಾದ ದಾರಿ ತೋರಿಸುವಂತಿದೆ.

Advertisement

ಯಶಸ್ವಿ ಉದ್ಯಮಿಗಳಲ್ಲಿ ಸಂದೀಪ್‌ ಮಹೇಶ್ವರಿ ಕೂಡ ಒಬ್ಬರು. ಅಲುಮೀನಿಯಂ ಉದ್ಯಮ ನಡೆಸುತ್ತಿದ್ದ ಇವರ ಕುಟುಂಬದ ಬಂಗಾರದ ದಿನಗಳಲ್ಲಿ ಇವರು ಕೂಡ ಭಾಗಿಯಾಗಿದ್ದರು. ಆದರೆ ವಿಧಿ ಹಾಗಿರಲಿಲ್ಲ. ಕೆಲವು ಸಮಯದಲ್ಲೇ ಉದ್ಯಮವೆಲ್ಲ ನಷ್ಟ ಹೊಂದಿ ದಿವಾಳಿಯಾಯಿತು. ಕುಟುಂಬಸ್ಥರು ಒಂದು ಹೊತ್ತಿನ ತುತ್ತಿಗಾಗಿ ಪರದಾಡುವಂತಾಯಿತು. ಅದೇ ವೇಳೆಕೆ ಸಂದೀಪ್‌ ಮಹೇಶ್ವರಿ ಕಾಲೇಜಿನಿಂದ ಡಿಬಾರ್‌ ಆದರು. ತುತ್ತನ್ನು ಅರಸುತ್ತಾ ಹೊರಟ ಸಂದೀಪ್‌, ಇಳಿದಿದ್ದು ಹಣ ಮತ್ತು ಖ್ಯಾತಿ ಗಳಿಸುವ ಸ್ಪರ್ಧೆಗೆ. ಏನಾದರೂ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದ ಇವರು ಈಗ ಭಾರತದ ಆನ್‌ಲೈನ್‌ ಸ್ಟಾಕ್‌ ಇಮೇಜ್‌ಗಳ ಅತಿದೊಡ್ಡ ಸಂಗ್ರಹವನ್ನೇ ಹೊಂದಿರುವ ಇಮೇಜಸ್‌ ಬಾರ್ಜಾನ ಸ್ಥಾಪಕರು. 

ಉತ್ತ ಮ ಕೆಲಸ ಮಾಡಲು ಹೋಗುವಾಗ ಎಡವಟ್ಟುಗಳಾಗುವುದು ಸಹಜ. ತಪ್ಪು ಮಾಡದೆ ನಾವು ಸರಿದಾರಿಗೆ ಬರಲು ಸಾಧ್ಯವಿಲ್ಲ. ಆದರೆ ಅದು ಸಹಜ ತಪ್ಪಾಗಿರಬಾರದಷ್ಟೇ. ಅದು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ಆದರೆ, ಜೀವನವೇ ತಪ್ಪಾಗಬಾರದು ಎನ್ನುವ ಸಂದೀಪ್‌ ಮಹೇಶ್ವರಿ ಇದನ್ನು ತಮ್ಮ ಬದುಕಿನ ಮೂಲಕವೇ ನಿರೂಪಿಸಿದವರು.

ಆದದ್ದು ಮತ್ತು ಮಾಡಿದ್ದು
ಕೆಲವು ಕೆಲಸಗಳು ತನ್ನಷ್ಟಕ್ಕೆ ಆಗಿಹೋಗುತ್ತವೆ. ಉದಾಃ ಉಸಿರಾಟ! ಅದು ನಾವು ಮಾಡಬೇಕೆಂದಿಲ್ಲ. ತನ್ನಷ್ಟಕ್ಕೆ ನಡೆಯುವ ಕ್ರಿಯೆ. ಇನ್ನೊಂದು ನಾವು ಮಲಗುವ ರೀತಿ. ರಾತ್ರಿ ಮಲಗುವಾಗ ತಲೆ ಮೇಲಿದ್ದರೆ ಬೆಳಗ್ಗೆ ಎದ್ದಾಗ ಎಲ್ಲೋ ಇರುತ್ತದೆ. ಇದು ಸಹಜ ನಾವು ಬೇಕೆಂದು ಮಾಡಿರುವುದಿಲ್ಲ. ಆದರೆ ನಾವು ಈ ಬಗ್ಗೆ ಯೋಚಿಸಿಯೂ ಇರುವುದಿಲ್ಲ. ಈ ಜಗತ್ತು ಕೂಡ ಹಾಗೆ. ಕೆಲವು ಸರಿತಪ್ಪುಗಳು ನಮ್ಮಿಂದ ಅಚಾ ನಕ್‌ ಆಗಿ ಆಗುತ್ತವೆ. ಇನ್ನು ಕೆಲವು ತನ್ನಷ್ಟಕ್ಕೆ ಆಗಿರುತ್ತವೆ. ಅಪಘಾತಗಳು ಕೂಡ ಹಾಗೆಯೇ ಕೆಲವೊಮ್ಮೆ ನಮ್ಮ ತಪ್ಪಿರುತ್ತದೆ. ನಮ್ಮದಲ್ಲದ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದರೆ ಆ ಸಂದರ್ಭವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಶಾಂತ ಚಿತ್ತರಾಗಿರಬೇಕಷ್ಟೇ ಯಾಕೆಂದರೆ ಜೀವನದಲ್ಲಿ ತಪ್ಪು ಮಾಡುವುದು ಸಹಜ ಎನ್ನುವ ಸಂದೀಪ್‌, ತಪ್ಪು ಮಾಡದವರು ಸಾಧಕರಾಗಲು ಸಾಧ್ಯವಿಲ್ಲ ಎನ್ನುತ್ತಾರೆ.

ಪಶ್ಚಾತ್ತಾಪ ಪಡುವುದು ಬಿಟ್ಟುಬಿಡಿ
ಆಗಿರುವ ತಪ್ಪನ್ನು ನೆನೆದು ಪಶ್ಚಾತ್ತಾಪ ಪಡುವುದರಿಂದ ಸಮಯ ವ್ಯರ್ಥವಾಗುತ್ತದೆ ಎನ್ನುತ್ತಾರೆ ಸಂದೀಪ್‌. ತಪ್ಪು ಮಾಡಿದಾಗ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ. ಆದರೆ ನೀವು ಹಾಗಿರಬಾರದು ಸ್ವಲ್ಪ ಭಿನ್ನವಾಗಿ ಯೋಚಿಸಿ. ಘೋರ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಆದರೆ ಸಣ್ಣಪುಟ್ಟ ತಪ್ಪುಗಳಿಗೆ ತಲೆಕೆಡಿಸಿ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುವುದು ವ್ಯರ್ಥ ಎನ್ನುತ್ತಾರೆ ಅವರು. 

Advertisement

ಕೋಪ
ಕೋಪ ಎಂಬುವುದೇ ಇಲ್ಲ. ಇದು ನಾವಾಗಿ ಮಾಡುವ ಕ್ರಿಯೆಯಷ್ಟೇ ಎನ್ನುವ ಸಂದೀಪ್‌ ಮಹೇಶ್ವರಿ, ಕೋಪ ಎನ್ನುವುದು ಡಾನ್ಸ್‌ನಂತೆ. ಡಾನ್ಸ್‌ ನಮಗೆ ಬರುವುದಿಲ್ಲ. ಆದರೆ ಮಾಡಬಹುದು. ಕೋಪ ಕೂಡ ಹಾಗೆಯೆ. ಎಲ್ಲ ಸಂದರ್ಭದಲ್ಲಿ ಕೋಪಗೊಂಡರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ.

ನಮ್ಮದಲ್ಲದ ತಪ್ಪಿಗೆ ಅನೇಕ ಬಾರಿ ಬಾಸ್‌ಗಳಿಂದ ಬೈಗುಳ ಕೇಳುತ್ತೇವೆ. ಆ ಸಂದರ್ಭದಲ್ಲಿ ತಲೆ ತಗ್ಗಿಸಿ ನಿಲ್ಲಬೇಕಷ್ಟೇ. ಎದುರು ಮಾತನಾಡುವ ಹಾಗಿಲ್ಲ. ಆದರೆ ಅದೇ ಸಂದರ್ಭ ಮನೆಯಲ್ಲಿ ಎದುರಾದರೆ… ಚಿಕ್ಕ ಮಗ ದೊಡ್ಡ ಮಗನ ಮೇಲೆ ಆರೋಪ ಮಾಡಿದರೆ, ಆಗ ಬಾಸ್‌ ಮೇಲಿನ ಕೋಪ ನಿಮ್ಮ ಮಕ್ಕಳ ಮೇಲೆ ಪ್ರಹಾರವಾಗುತ್ತದೆ. ಇನ್ನೂ ಮುಂದಕ್ಕೆ ಹೋಗಿ ಒಂದೆರಡು ಏಟು ಬಾರಿಸಿಯೂ ಬಿಡುತ್ತೇವೆ. ಆದರೆ ಆತ ತಪ್ಪು ಮಾಡಿದ್ದಾನೋ ಇಲ್ಲವೋ ಎಂಬುವುದು ಬೇರೆ ವಿಷಯ. ಈ ಎರಡೂ ಉದಾಹರಣೆಯಲ್ಲಿ ಮೊದಲನೆಯದರಲ್ಲಿ ನಿಮಗೆ ಸಿಟ್ಟು ಬರುತ್ತಿದೆ. ಆದರೆ ಅದನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಯಾಕೆಂದರೆ ಕೆಲಸದ ಮೇಲಿನ ಆಕಾಂಕ್ಷೆ, ತಿಂಗಳ ಇಎಂಐ ಕಟ್ಟುವ ಒತ್ತಡ! ಇನ್ನೊಂದೆಡೆ ಮಗುವಿಗೆ ಎಷ್ಟು ಹೊಡೆದರೂ ಆತ ಎಲ್ಲಿಗೂ ಹೋಗುವುದಿಲ್ಲ ಎಂಬ ನಂಬಿಕೆ. ಇಲ್ಲಿಯೇ ನಾವು ಕೋಪವೆಂಬ ಕೂಪವನ್ನು ಸೃಷ್ಟಿ ಮಾಡುತ್ತಿದ್ದೇವೆ. ಜವಾಬ್ದಾರಿಯಿಂದ ವರ್ತಿಸಿದರೆ ಕೋಪ ಬರುವುದಿಲ್ಲ ಎಂಬುವುದು ಅವರ ನಿಲುವು. 

ಭಯ ಬೇಡ
ಹಾರರ್‌ ಸಿನೆಮಾ ನೋಡದಿದ್ದರೆ ಭೂತದ ಕಲ್ಪನೆ ಹೇಗೆ ಬರಲು ಸಾಧ್ಯ. ಮಕ್ಕಳಿಗೆ ನಾವು ಭೂತದ ಕಥೆ ಹೇಳಿದರೆ ಭಯ ಅವರನ್ನು ಆವರಿಸುತ್ತದೆ. ಅಂತೆಯೇ ಬದುಕು. ಇಲ್ಲಿ ಯಾವುದೇ ಸಂದರ್ಭದಲ್ಲಿ ಭಯ ಉಂಟಾದರೆ ಅದನ್ನು ತಾಳ್ಮೆಯಿಂದ ಪರೀಕ್ಷಿಸುವುನ್ನು ಕಲಿಯಿರಿ. ಭೂತ ಕುತ್ತಿಗೆ ಹಿಡಿಯುವ ಕಥೆಗಳನ್ನು ಓದಿ, ಕೇಳಿದ ನಿಮಗೂ ಕೈಗಳಿವೆಯಲ್ಲ ಎಂದು ಯಾಕೆ ಯೋಚಿಸಬಾರದು. ಬದುಕಿನಲ್ಲಿ ಭಯ ಬೇಡ ಎನ್ನುವ ಅವರ ಈ ಮಾತುಗಳು ಯುವಜನತೆಗೆ ಚೈತನ್ಯ ತುಂಬುವಂತಿದೆ

ಖ್ಯಾತಿ ಬರುವುದು ಅನುಭವದಿಂದ. ಅನುಭವ ಬರುವುದು ಕೆಟ್ಟ ಅನುಭವದಿಂದ.

ಬದುಕಿನಲ್ಲಿ ಒಬ್ಬಂಟಿಯಾಗಿದ್ದೇನೆ ಎಂಬ ಬೇಸರ ಆವರಿಸಿದಾಗ ಜಗತ್ತಿನ ಅತಿ ಶ್ರೇಷ್ಠ ವ್ಯಕ್ತಿ ನಿಮ್ಮೊಂದಿಗೆ ಸಮಯ ಕಳೆಯಿರಿ.

ಒಬ್ಬ ವ್ಯಕ್ತಿಗೆ ನಾನು ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದು ಗೊತ್ತಿದ್ದರೆ ಆತನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲ.

ನಿಮ್ಮ ಬದುಕನ್ನು ಬದಲಾಯಿಸಬಲ್ಲ ವ್ಯಕ್ತಿಯ ಹುಡುಕಾಟದಲ್ಲಿ ನೀವಿದ್ದರೆ ಒಂದು ಕನ್ನಡಿ ತೆಗೆದು ನೋಡಿ. ಅದರಲ್ಲಿ ನೀವು ಕಾಣುತ್ತೀರಿ.

ಯೋಚನೆ ಮಾಡದೆ ಮಾಡುವ ಕೆಲಸ, ಕೇವಲ ಯೋಚನೆ ಮಾತ್ರ ಮಾಡಿ ಕೆಲಸ ಮಾಡದಿರುವುದು ಇವು ಎರಡೂ ಸೋಲಿಗೆ ಕಾರಣವಾಗುತ್ತದೆ.

ನಿಮ್ಮ ಬದುಕನ್ನು ಬದಲಾಯಿಸಬಲ್ಲ ವ್ಯಕ್ತಿಯ ಹುಡುಕಾಟದಲ್ಲಿ ನೀವಿದ್ದರೆ ಒಂದು ಕನ್ನಡಿ ತೆಗೆದು ನೋಡಿ. ಅದರಲ್ಲಿ ನೀವು ಕಾಣುತ್ತೀರಿ. 

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next