ತಿಲಕ್ ಅಭಿನಯದ “ಸರ್ವಸ್ವ’ ಚಿತ್ರವು ಇಂದು ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಬಿಡುಗಡೆಯಾಗುತ್ತಿದೆ. ಹೊಸ ವಿಷವೇನೆಂದರೆ, ಈ ಚಿತ್ರವು ಅಂತಾರಾಷ್ಟ್ರೀಯ ಚಿತ್ರ ಸ್ಪರ್ಧೆಯೊಂದಕ್ಕೆ ಆಯ್ಕೆಯಾಗಿರುವುದು. ಈ ಖುಷಿಯನ್ನು
ಹಂಚಿಕೊಳ್ಳುವುದಕ್ಕೆಂದೇ ಚಿತ್ರತಂಡದವರು ಮಾಧ್ಯಮದವರೆದುರು ಬಂದಿದ್ದರು.
ನಾಯಕ ತಿಲಕ್ ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ವಿಶೇಷ ಪಾತ್ರವಾಗಿದ್ದು, “ಸ್ವರ್ವಸ್ವ’ ತನ್ನ ಸಿನಿಜರ್ನಿಗೊಂದು ಹೊಸ ದಿಕ್ಕು ಬದಲಿಸುವ ಚಿತ್ರ ಎಂದು ನಂಬಿದ್ದಾರೆ ತಿಲಕ್. “ನಿರ್ದೇಶಕ ಶ್ರೇಯಸ್ ಮೊದಲು ಕಥೆ ಹೇಳಿದಾಗ, ಖುಷಿ ಆಯ್ತು. ಇಲ್ಲಿ ನನ್ನದು ನಿರ್ದೇಶಕನ ಪಾತ್ರ. ಇದುವರೆಗೆ ನೆಗೆಟಿವ್ ಆಗಿ, ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದೆ.
ಇಲ್ಲಿ ಹೊಸ ಬಗೆಯ ಪಾತ್ರವಿದೆ. ಅದರಲ್ಲೂ ಒಂದು ಟ್ವಿಸ್ಟ್ ಇದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದು ಹೇಳುತ್ತಾರೆ ತಿಲಕ್.
ನಿರ್ದೇಶಕ ಶ್ರೇಯಸ್ ಕಬಾಡಿ ಅವರಿಗೆ ಇದು ಮೊದಲ ಸಿನಿಮಾ. ಎಂಜಿನಿಯರಿಂಗ್ ಓದಿರುವ ಅವರು, “ತಪಸ್ವಿ’ ಎಂಬ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈಗ ಲವ್, ಥ್ರಿಲ್ಲರ್ ಕಥೆ ಹೆಣೆದು ನಾಲ್ಕು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ಇಲ್ಲಿ ಸಿನಿಮಾದೊಳಗೊಂದು ಸಿನಿಮಾ ಕಥೆ ಇದೆಯಂತೆ. ಒಬ್ಬ ನಿರ್ದೇಶಕ ಆಗಬೇಕು, ಇನ್ನೊಬ್ಬ ಹೀರೋ ಆಗಬೇಕು ಎಂಬ ಕನಸು ಹೊತ್ತು, ಇಲ್ಲಿ ಹೇಗೆಲ್ಲಾ ಕಷ್ಟಪಡ್ತಾರೆ ಅನ್ನೋದು ಕಥೆ. “ನಾನೂ ಕೂಡ ಆರಂಭದಲ್ಲಿ ಹೀರೋ ಆಗಬೇಕು ಅಂತ ಎಷ್ಟೆಲ್ಲಾ ಒದ್ದಾಡಿದ್ದೆ ಅದನ್ನೇ ಇಲ್ಲಿ ಸ್ವಲ್ಪ ಇಟ್ಟುಕೊಂಡು ಕಥೆ ಮಾಡಿದ್ದೇನೆ. ತಿಲಕ್ ಅವರಿಗೆ ಇಲ್ಲಿ ಎರಡು ಶೇಡ್ ಪಾತ್ರವಿದೆ. ರೊಮ್ಯಾಂಟಿಕ್ ಆಗಿಯೂ ಕಾಣಾ¤ರೆ. ಆ್ಯಂಗ್ರಿ ಮೂಡ್‌ನಲ್ಲೂ ಇರ್ತಾರೆ’ ಎಂದು ವಿವರ ಕೊಟ್ಟರು ಶ್ರೇಯಸ್.
ಈ ಚಿತ್ರಕ್ಕೆ ವಿಮಲ್ ನಿರ್ಮಾಪಕರು. ದಂತ ವೈದ್ಯರಾಗಿರುವ ವಿಮಲ್ ಅವರಿಗೆ ಶ್ರೇಯಸ್ ಕಥೆ ಇಷ್ಟವಾಗಿದ್ದೇ ತಡ, ಒಳ್ಳೇ ಟೀಮ್ ಕಟ್ಟಿಕೊಂಡು ಸಿನಿಮಾ ಮಾಡುವಂತೆ ಗ್ರೀನ್‌ಸಿಗ್ನಲ್ ಕೊಟ್ಟರಂತೆ. ನಾಯಕಿ ಮೇಘನಾ ಅವರಿಲ್ಲಿ ಹೆಸರು ಬದಲಿಸಿ, ಸಾತ್ವಿಕಾ ಎಂಬ ಹೆಸರಲ್ಲಿ ಗುರುತಿಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಮತ್ತೂಬ್ಬ ಹೀರೋ ಚೇತನ್‌ಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಭುಪಿಂದರ್ ಸಿಂಗ್ ರೈನಾ ಛಾಯಾಗ್ರಹಣ ಮಾಡಿದ್ದಾರೆ.