Advertisement

ಕೋವಿಡ್‌ 19 ತೊಲಗಿಸಲು ಎಲ್ಲರೂ ಪಣತೊಡಿ!

06:53 AM May 16, 2020 | Team Udayavani |

ದೇವನಹಳ್ಳಿ: ಕೋವಿಡ್‌ 19 ತೊಲಗಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಲಾಕ್‌ ಡೌನ್‌ ನಿಯಮಗಳಾದ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗ ಮಾತ್ರ ಕೋವಿಡ್‌ 19 ನಿರ್ಮೂಲನೆ ಸಾಧ್ಯ  ಎಂದು ಶಾಸಕ ಎಲ್‌. ಎನ್‌.ನಾರಾಯಣಸ್ವಾಮಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ 23 ವಾರ್ಡುಗಳಿಗೆ ಆಹಾರ ದಾನ್ಯದ ಕಿಟ್‌ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ನಗರದ 23 ವಾರ್ಡುಗಳಲ್ಲಿ 8 ಸಾವಿರ ಆಹಾರ ದಾನ್ಯದ ಕಿಟ್‌ಗಳನ್ನು ನೀಡಲಾಗುತ್ತಿದೆ. 7 ಜೆಡಿಎಸ್‌ ಪುರಸಭಾ ಸದಸ್ಯರು ಹಾಗೂ ಪುರಸಭಾ ಚುನಾವಣೆಯಲ್ಲಿ ಪರಾಜಿತ ಪುರಸಭಾ ಅಭ್ಯರ್ಥಿಗಳನ್ನು ಒಳಗೊಂಡಂತೆ ನಗರದ ಮುಖಂಡರ ಜೊತೆಗೂಡಿ ಆಹಾರ ದಾನ್ಯದ ಕಿಟ್‌  ನೀಡುತ್ತಿದ್ದೇವೆ ಎಂದು ಹೇಳಿದರು. ಬಡವರು ಹಸಿವಿನಿಂದ ಬಳಲಬಾರದು. ಈಗಾಗಲೇ ತಾಲೂಕಿನಲ್ಲಿ 35 ಸಾವಿರ ಕಿಟ್‌ ಗಳನ್ನು ನೀಡಲಾಗುತ್ತಿದೆ.

ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳ ಸಹಕಾರ ಮತ್ತು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲರ ಪರಿಶ್ರಮದಿಂದ ತಾಲೂಕಿನಲ್ಲಿ ಪ್ರಕರಣ ಕಂಡುಬಂದಿಲ್ಲ. ಅದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ. ಕೊರೊನ ನಿರ್ಮೂಲನೆಗೆ ಪ್ರತಿಯೊಬ್ಬರು ಪಣತೊಡಬೇಕು. ಕೊರೊನ ಭಯಬೇಡ,  ಸಂಕೋಚ, ನಿರ್ಲಕ್ಷ್ಯ ಬೇಡ. ಪ್ರತಿ ಕಡೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

ಸರ್ಕಾರ ಕೊರೊನಗೆ ನೀಡುತ್ತಿರುವ ಪ್ಯಾಕೇಜ್‌ ಗಳಲ್ಲಿ ಪ್ರತಿ ವೃತ್ತಿ ಆಧಾರಿತವಾಗಿ ಗುರುತಿಸಿ ಹೆಚ್ಚಿನ ಅನುದಾನ ನೀಡುವಂತೆ ಆಗಬೇಕು.  ಪ್ಯಾಕೇಜ್‌ ಆಗಿಯೇ ಉಳಿದರೆ ಸಾಲದು. ಕಾರ್ಯಗತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಸರಕಾರ, ಜನಪ್ರತಿನಿಧಿಗಳು ಹಾಗೂ ಸಮಾಜ ಸೇವಕರು ಎಲ್ಲ ರೀತಿಯಲ್ಲಿ ಲಾಕ್‌ಡೌನ್‌ಗೆ ಜನಪರವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್‌ 19 ದೂರ ಮಾಡಲು ಸಾರ್ವಜನಿಕರು  ಮೊದಲಿಗೆ ಸಹಕರಿಸುವಂತೆ ಆಗಬೇಕು ಎಂದು ಹೇಳಿದರು.

ತಾಲೂಕು ಸೊಸೈಟಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್‌ ಬಾಬು, ಪುರಸಭೆ ಸದಸ್ಯರಾದ ವೈ.ಸಿ. ಸತೀಶ್‌ಕುಮಾರ್‌, ಜಿ.ಎ.ರವೀಂದ್ರ, ನಾಗೇಶ್‌, ಪುರಸಭೆ ಮಾಜಿ ಸದಸ್ಯ ನರಸಿಂಹಮೂರ್ತಿ, ವಿ.ಗೋಪಾಲ್‌, ಹನುಮಂತಪ್ಪ, ಎಂ.ಕುಮಾರ್‌, ಬಿ.ದೇವರಾಜ್‌, ಪಿ.ರವಿಕುಮಾರ್‌, ಯುವ ಜೆಡಿಎಸ್‌ ಅಧ್ಯಕ್ಷ ಆರ್‌.  ಭರತ್‌ಕುಮಾರ್‌, ಮುಖಂಡರಾದ ಲಕ್ಷ್ಮೀನಾರಾಯಣ್‌, ನಾಗೇಶ್‌ ಬಾಬು, ಸೋಮಣ್ಣ, ಆನಂದ್‌, ದೀಪಕ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next