ದೇವನಹಳ್ಳಿ: ತಾಲೂಕಿನಲ್ಲಿ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾ ಗುತ್ತಿರುವುದು. ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಿದೆ. ತಾಲೂಕಿನಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಗೆಲ್ಲಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅನೇಕ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಬಲ ಮುಖಂಡರು, ಯುವಕರು ಬಿಜೆಪಿಯತ್ತ ಮುಖ ಮಾಡಿರುವುದು ಮುಂದಿನ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಭೀಮಬಲ: ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಜೆಡಿಎಸ್ ನ ಮಾಜಿ ಜೆಡಿಎಸ್ ಅಧ್ಯಕ್ಷರಾಗಿದ್ದ ಇರಿಗೇನಹಳ್ಳಿ ಶ್ರೀನಿವಾಸ್, ವಿಜಯಪುರದ ಕಾಂಗ್ರೆಸ್‌ನ ಕಟ್ಟಾಳು ಎಂದೆ ಪ್ರಖ್ಯಾತಿಗೊಂಡಿದ್ದ ಗೊಡ್ಲು ಮುದ್ದೇನಹಳ್ಳಿ ಜಿಲ್ಲಾಧ್ಯಕ್ಷರಾಗಿದ್ದ ಬಚ್ಚೇಗೌಡರ ಪುತ್ರ ಚೇತನ್‌ಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧಾಕರ್ ಹಾಗೂ ಮಾದಿಗ ದಂಡೋರಾದ ರಾಜ್ಯ ಪ್ರಚಾರಸಮಿತಿ ಅಧ್ಯಕ್ಷ, ಕಾಂಗ್ರೆಸ್‌ನ ಪ್ರಬಲ ಮುಖಂಡ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಇವರೆಲ್ಲರ ಸೇರ್ಪಡೆಯಿಂದ ಪಕ್ಷಕ್ಕೆ ಭೀಮಬಲ ಬಂದಿದೆ ಎಂದರು.
ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್ ಮಾತ ನಾಡಿ, ಪಿಳ್ಳಮುನಿಶಾಮಪ್ಪ ಸರಳ ಸಜ್ಜನಿಕೆಯ ಸ್ವಭಾವ ಹೊಂದಿದ್ದು, ಅನೇಕ ಬೆಂಬಲಿಗರನ್ನು ಪಡೆದಿದ್ದಾರೆ. ಮಂಡಲ ಪಂಚಾಯ್ತಿಯಿಂದ, ಜಯಶಾಲಿಯಾಗಿ, ನಂತರ ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ ಎಂದರು.
ಬಿಜೆಪಿಯ ದೇಶಪ್ರೇಮ: ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಬಿಜೆಪಿ ತನ್ನದೇ ಆದ ಸಿದ್ಧಾಂತವನ್ನು ಹೊಂದಿದ್ದು, ದೇಶದ ಬಗ್ಗೆ ಚಿಂತನೆ ಮಾಡುವ ಪಕ್ಷ ಎಂದರೆ ಬಿಜೆಪಿಯ ದೇಶಪ್ರೇಮ ಹಾಗೂ ಉತ್ತಮ ಆಡಳಿತದಿಂದ ಸ್ಫೂರ್ತಿಗೊಂಡು ನರೇಂದ್ರ ಮೋದಿ ಜನಪ್ರಿಯ ಯೋಜನೆಗಳು ನಾಡಿನ ಅನೇಕ ಯುವಕರಿಗೆ ಸ್ಫೂರ್ತಿ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ವೈಖರಿ, ಎಲ್ಲಾ ಸಮುದಾಯಗಳ ಬಡ ಜನರನ್ನು ಮೇಲೆತ್ತುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪ್ರ.ಕಾರ್ಯದರ್ಶಿ ನಿಲೇರಿ ಮಂಜು ನಾಥ್, ರವಿಕುಮಾರ್, ಮುಖಂಡ ಅಶ್ವತ್ಥ ನಾರಾಯಣ್, ಚೇತನ್ ಗೌಡ, ಬಿ. ಶ್ರೀನಿವಾಸ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ. ರವಿ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಓಬ ದೇನಹಳ್ಳಿ ಮುನಿ ಯಪ್ಪ, ತಾಲೂಕು ರೈತಮೋರ್ಚಾ ಅಧ್ಯಕ್ಷ ವಿನಯ್‌ಕುಮಾರ್, ಮುಖಂಡ ಇಂಡ್ರ ಸನಹಳ್ಳಿ ಗೋಪಿ, ಗೋಪಾಲ ಗೌಡ, ಸಂದೀಪ್, ಸುಬ್ಬಣ್ಣ, ಅನಿಲ್‌ಕುಮಾರ್, ಭರತ್, ವೆಂಕ ಟೇಶ್, ದೇವರಜು, ಮಹೇಶ್, ಸಾಗರ್, ಬಾಬು, ಬೈರದೇನ ಹಳ್ಳಿ ರವಿ ಹಾಗೂ ಮತ್ತಿತರರು ಇದ್ದರು.