Advertisement

ಎಲ್ಲರೂ ದೇಶದ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯಬೇಕು

12:49 PM Apr 17, 2018 | Team Udayavani |

ಚಿಕ್ಕಬಳ್ಳಾಪುರ: ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಗೀತ, ಸಾಹಿತ್ಯದಂತಹ ಕಲೆ ಕಲಿಯಲು ಪ್ರೋತ್ಸಾಹಿಸಬೇಕು. ಈ ಮೂಲಕ ದೇಸಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯಬೇಕೆಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ರಾಮಗಾನಪರ್ತಿಯಲ್ಲಿ ಚಿಕ್ಕಬಳ್ಳಾಪುರದ ಸಪ್ತಸ್ವರ ಗಾನ ಸಭಾ ಮಂಡಳಿ ವತಿಯಿಂದ 12ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಂಗೀತೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ನಾಡಿನಲ್ಲಿ ಸಂಗೀತ, ಸಾಹಿತ್ಯದ ಕಲೆ ಪ್ರೀತಿಸಿದ ಅನೇಕ ಮಹನೀಯರು ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿ¨ªಾರೆ. ಅವರ ಆದರ್ಶಗಳು ಇವತ್ತಿನ ಸಂಗೀತ ಪ್ರಿಯರಲ್ಲಿ ಕಾಣಬೇಕು. ಪ್ರತಿಯೊಬ್ಬರೂ ಸಂಗೀತ, ಸಾಹಿತ್ಯ ಕಲಿಯಲು ಉತ್ಸುಕರಾಗಿರಬೇಕು. ಇದರಿಂದ ಮನುಷ್ಯನಲ್ಲಿರುವ ಅನೇಕ ಮಾನಿಕ ಕಾಯಿಲೆಗಳು ದೂರವಾಗುತ್ತವೆ ಎಂದರು.

ರಾಮನ ಸ್ಮರಿಸಿ: ರಾಮಾಯಣ ಪರಿಶುದ್ಧ ಕಾವ್ಯ. ರಾಮ ಜಪ ನಿರಂತರ ಚೇತನವಾಗಿದೆ. ಅಕ್ಷರ ಕಲಿಯುವ ಮುನ್ನವೇ ರಾಮನನ್ನು ಅರಿಯುವುದು ಭಾರತೀಯ ಸಂಪ್ರದಾಯದಲ್ಲಿದೆ. ಸಮಾಜದ ಪ್ರತಿಯೊಬ್ಬ ನಾಗರಿಕರು ಯಾವತ್ತೂ ಯಾರಿಗೂ ಕೆಟ್ಟದ್ದನ್ನು ಬಯಸಬಾರದು. ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮ ನಿತ್ಯ ಜೀವನದಲ್ಲಿ ರಾಮನನ್ನು ಭಕ್ತಿಯಿಂದ ಸ್ಮರಿಸಿಬೇಕು ಎಂದರು.

ಭಕ್ತಿ, ಧ್ಯಾನ ಪಾಲಿಸಿ: ಚುಟುಕು ಸಾಹಿತ್ಯ ಜಿಲ್ಲಾ ಘಟಕದ ಅಧ್ಯಕ್ಷ ಚಲಪತಿಗೌಡ ಮಾತನಾಡಿ, ಮಹಾಕಾವ್ಯಗಳು ಇಲ್ಲದೇ ಭಾಷೆ ಶ್ರೀಮಂತ ಪರಂಪರೆ ಹೊಂದಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಭಕ್ತಿ, ಧ್ಯಾನವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಇರಬಹುದು ಎಂದರು.

Advertisement

ಮುಖಂಡ ಪುರದಗಡ್ಡೆ ಕೃಷ್ಣಪ್ಪ ಮಾತನಾಡಿ, ದೇಶದ ಸಂಸ್ಕೃತಿ, ಪರಂಪರೆಯನ್ನು ಬೆಳೆಸಲು ಸಂಗೀತ ಕಲಿಕೆ ಬಹು ಮುಖ್ಯ. ದಶಕಗಳ ತಾಳ್ಮೆ ಹಾಗೂ ಸಾಧನೆಯ ಫ‌ಲವಾಗಿ ಹೊರಬಂದ ಶ್ರೀರಾಮಚರಿತ ಗ್ರಂಥ ಸಾಹಿತ್ಯವೂ ಸಾರ್ವಕಾಲಿಕ ಇತಿಹಾಸ ನಿರ್ಮಾಣವಾಗಿದೆ. ಎಲ್ಲರೂ ಭಕ್ತಿಯಿಂದ ರಾಮನ ಸ್ಮರಣೆ ಮಾಡಬೇಕು. ಇದರಿಂದ ಮಾನಸಿಕವಾಗಿ ಆತ್ಮ ಸ್ಥೈರ್ಯ ಹೆಚ್ಚುತ್ತದೆ. ಬದುಕು ಕೂಡ ಉಜ್ವಲಗೊಳ್ಳುತ್ತದೆ ಎಂದರು.

ಸಂಗೀತ ಕಲಾವಿದ ಮಹಾಲಿಂಗಯ್ಯ ಮಠದ, ಪತ್ರಕರ್ತ ಶೇಖರ್‌, ರಾಮಕೃಷ್ಣಾಚಾರಿ, ಲಕ್ಷ್ಮಣಾಚಾರ್‌, ಚಿಕ್ಕಣ್ಣ, ವೆಂಕಟರಮಣಪ್ಪ, ಶ್ರೀನಿವಾಸ್‌ ನಾಯ್ಡು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next