Advertisement

ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು: ತಹಶೀಲ್ದಾರ್‌

09:43 AM Jan 27, 2019 | |

ಹೊಳೆನರಸೀಪುರ: ಸಮಾನತೆ, ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿರುವ ದೇಶದ ಸಂವಿ ಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದು ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಹೇಳಿದರು.

Advertisement

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

ಸಾವಿರಾರು ಮಂದಿ ತ್ಯಾಗ ಬಲಿದಾನದ ಫಲವಾಗಿ 1947 ರಲ್ಲಿ ಸ್ವಾತಂತ್ರ್ಯ ಬಂದಿತಾದರೂ ದೇಶಕ್ಕೆ ಅವಶ್ಯವಾಗಿದ್ದ ಸಂವಿಧಾನ ರಚನೆಯ ನಂತರ 1951 ರ ಜನವರಿ 26 ರಂದು ಭಾರತ ಗಣರಾಜ್ಯವಾಗಿ ಹೊರಹೊಮ್ಮಿತೆಂದರು.

ಸ್ವಾವಲಂಬನೆ: ಸ್ವಾತಂತ್ರ್ಯ ಬಂದ ವೇಳೆದ ದೇಶದ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಆಹಾರಕ್ಕಾಗಿ ವಿದೇಶಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಇಂದು ದೇಶದಲ್ಲಿ 136 ಕೋಟಿ ಮಂದಿಗೂ ಅವಶ್ಯವಾಗಿ ಬೇಕಾದ ಆಹಾರವನ್ನು ಬೆಳೆಯಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಬಗ್ಗೆ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುನೀತಾ ಅವರು ಪ್ರಮುಖ ಭಾಷಣ ಮಾಡಿದರು.

Advertisement

ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮೊದಲು ಭಾರತಾಂಭೆಯ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಚನ್ನಾಂಬಿಕಾ ವೃತ್ತದಿಂದ ಪಟ್ಟಣದ ಪೇಟೆ ಬೀದಿ, ಸುಭಾಷ್‌ ವೃತ್ತ, ಅಂಬೇಡ್ಕರ್‌ ವೃತ್ತ, ಜಯಚಾಮರಾಜೇಂದ್ರ ವೃತ್ತ, ಅರಕಲಗೂಡು ರಸ್ತೆ ಮೂಲಕ ಮೆರವಣಿಗೆ ತೆರಳಿ ಬಯಲು ರಂಗ ಮಂದಿರದ ವೇದಿಕೆಗೆ ತರಲಾಯಿತು.

ಧ್ವಜಾರೋಹಣದ ನಂತರ ವಂದೇ ಮಾತರಂ, ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ, ಪಥಸಂಚಲನ, ಕವಾಯಿತು ನಂತರ ಶಾಲಾ ಮಕ್ಕಳಿಗೆಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು,

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ಕೆ.ಯೋಗೇಶ್‌, ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ, ಅರಕ್ಷಕ ವೃತ್ತ ನಿರಿಕ್ಷಕ ಅಶೋಕ್‌, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಿರೂಪಾಕ್ಷ, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಕುಮಾರಯ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ.ಗುರುಪ್ರಸಾದ್‌, ಗ್ರೇಡ್‌ 2 ತಹಶೀಲ್ದಾರ್‌ ವಸಂತಕುಮಾರಿ, ತಾಲೂಕು ಸ್ವಾಮಿ ವಿವೇಕಾ ನಂದಯುವ ವೇದಿಕೆ ಅಧ್ಯಕ್ಷ ಎಂ.ಎಂ.ಎ ರಹೆಮಾನ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಪುಷ್ಪಲತ, ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪ್ರೇಮಾ ಇದ್ದರು.

ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಮಂಜುನಾಥ್‌ ವಹಿಸಿದ್ದರು. ಲೊಕೇಶ್‌ ಸ್ವಾಗತಿಸಿದರು. ಟಿ.ಎಸ್‌.ಕುಮಾರಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next