ಚಿತ್ತಾಪುರ: ಈಡಿಗ ಸಮಾಜದ ಮುಖಂಡರು ತಮ್ಮ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಸಮಾಜದ ಸಂಘಟನೆಗೆ ಒಗ್ಗೂಡಬೇಕು ಎಂದು ತಾಲೂಕು ಈಡಿಗ ಸಮಾಜದ ನಿಕಟಪೂರ್ವ ಅಧ್ಯಕ್ಷ ವಿನೋದ ಗುತ್ತೇದಾರ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಆರ್ಯ ಈಡಿಗ ಸಮಾಜದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಹಾಗೂ ಯುವ ಅಧ್ಯಕ್ಷರ ಆಯ್ಕೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಡಿಗ ಸಮಾಜವು ಹಿಂದುಳಿದ ಸಮಾಜವಾಗಿದ್ದು, ಎಲ್ಲರೂ ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಹಿರಿಯ ಮುಖಂಡ ಶಂಕರಗೌಡ ರಾವೂರಕರ್, ನೂತನ ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ, ಯುವ ಅಧ್ಯಕ್ಷ ಪಂಕಜಗೌಡ, ಮುಖಂಡರಾದ ಶಿವಯ್ಯ ಗುತ್ತೇದಾರ, ಶ್ರೀಮಂತ ಗುತ್ತೇದಾರ, ನರಸಯ್ಯಗೌಡ, ಅಮೃತ್ ಗುತ್ತೇದಾರ ಮಾತನಾಡಿದರು.
ಮುಖಂಡರಾದ ಶಾಮ ಮುಕ್ತೇದಾರ, ಡಿ.ನರಸಯ್ಯಗೌಡ, ಶ್ರೀಶೈಲ ಗುತ್ತೇದಾರ, ಸಣ್ಣ ಕಾಶಣ್ಣ ಗುತ್ತೇದಾರ, ಸ್ವಸ್ತಿಕ್ ಯರಗಲ್, ದಸ್ತಯ್ನಾ ಯರಗಲ್, ರಾಘವೇಂದ್ರ ಗುತ್ತೇದಾರ, ಅಂಬರೀಶ ಮರಗೋಳ, ಶರಣಬಸ್ಸು ಸಾತನೂರ, ರಾಜು ಬೊಮ್ಮನಳ್ಳಿ, ಲಕ್ಷ್ಮೀಕಾಂತ ಬೆಳಗೇರಿ, ಗುರು ಗುತ್ತೇದಾರ, ಖ್ಯಾದಿಗಪ್ಪ ಅಳ್ಳೋಳ್ಳಿ, ಶಾಂತಯ್ಯ ತರಕಸಪೇಟ್, ರಾಮು ಗುತ್ತೇದಾರ, ರವಿ ಸೂಲಹಳ್ಳಿ, ಆನಂದ ಗುತ್ತೇದಾರ, ಶಿವು ಗುತ್ತೇದಾರ, ಹಣಮಯ್ಯ ಲಾಡ್ಲಾಪುರ, ಹುಸನಯ್ಯ ಗುತ್ತೇದಾರ, ಮತ್ತಿತರರು ಇದ್ದರು. ಕಾಶಿನಾಥ ಗುತ್ತೇದಾರ ನಿರೂಪಿಸಿದರು, ಶಿವರಾಜ ಗುತ್ತೇದಾರ ವಂದಿಸಿದರು.