ಉಡುಪಿ: ಅಥರ್ವ ವೇದ ದಲ್ಲಿರುವ ಉಲ್ಲೇಖಗಳಿಂದ ಹಿಡಿದು ಚರಕ, ಸುಶ್ರುತ, ಅವರ ವರೆಗಿನ ಆಯುರ್ವೇದ ಶಾಸ್ತ್ರದ ಕೊಡುಗೆಗಳನ್ನು ಜನಸಾಮಾನ್ಯರೂ ಅರಿಯಬೇಕಾಗಿದೆ ಎಂದು ರಾಷ್ಟ್ರೀಯಸಂಶೋಧನ ಪ್ರಾಧ್ಯಾಪಕ, ಮಣಿಪಾಲ
ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಎಂ.ಎಸ್. ವಲಿಯತ್ತಾನ್ ಅವರು ಕರೆ ನೀಡಿದರು.
ಮಣಿಪಾಲದ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಬುಧವಾರ ನಡೆದ ಮಣಿಪಾಲ ವಿ.ವಿ. ಪ್ರಸ್ (ಎಂಯುಪಿ) 100ನೇ ಪ್ರಕಾಶನ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ಆಯುರ್ವೇದ ಕೇವಲ ಸಂಪ್ರದಾಯವಾಗಿರದೆ ಪ್ರಾಯೋಗಿಕ ಪ್ರಯೋಜನವನ್ನು ಒಳಗೊಂಡಿದೆ. ಬುದ್ಧನಿಗೆ ಚಿಕಿತ್ಸೆ ನೀಡಿದ ಜೀವಕ ಆಯುರ್ವೇದಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾನೆ. ಬ್ರಿಟಿಷರು ಕೇವಲ ಔಷಧೀಯ ಸಸ್ಯಗಳ ಕುರಿತು ಮಾತ್ರ ಗಮನ ಹರಿಸಿದರು ಎಂದರು.
ಕೆಲವೇ ವರ್ಷಗಳ ಇತಿಹಾಸವಿರುವ ಪಾಶ್ಚಾತ್ಯ ಔಷಧ ಕ್ರಮ ಜನಜನಿತ ವಾಗಿ, ಆಯುರ್ವೇದ, ಯುನಾನಿ ಪರ್ಯಾಯ ಕ್ರಮಕ್ಕೆ ಸರಿಯಿತು. ಆದರೆ ಈಗ ಸಾಂಕ್ರಾಮಿಕ ರೋಗ ಗಳನ್ನು ತಡೆಗಟ್ಟಲು ಬಂದ ಪಾಶ್ಚಾತ್ಯ ಔಷಧ ಅಡ್ಡಪರಿಣಾಮದಿಂದ ಕ್ಯಾನ್ಸರ್, ಮಾನಸಿಕ ಕಾಯಿಲೆಗಳೇ ಮೊದಲಾದ ರೋಗಗಳು ಹರಡುತ್ತಿವೆ. ಔಷಧ ಉತ್ಪಾದಕರಿಗೂ ವೈದ್ಯರಿಗೂ ಸಂಬಂಧವಿಲ್ಲವಾಗಿದೆ. ಅಸಾಂಕ್ರಾಮಿಕ ರೋಗಗಳಿಗೂ ಆಯುರ್ವೇದದಲ್ಲಿ ಪರಿಹಾರವಿದೆ ಎಂದು ಡಾ| ವಲಿಯತ್ತಾನ್ ಹೇಳಿದರು.
ಅಥರ್ವವೇದದಿಂದ ಹಿಡಿದು ಈಗಿನ ವರೆಗಿನ ಇತಿಹಾಸವನ್ನು “ಆಯುರ್ವೇದಿಕ್ ಇನ್‌ಹೆರಿಟೆನ್ಸ್: ಎ ರೀಡರ್ ಕಂಪಾನಿಯನ್’ ಪುಸ್ತಕದಲ್ಲಿ ಬರೆದಿದ್ದೇನೆ. ಇದನ್ನು ಪಿಯುಸಿ ಅನಂತರದ ವಿದ್ಯಾರ್ಥಿಗಳು ಓದಬೇಕಾದ ಅಗತ್ಯವಿದೆ ಎಂದರು. ಈ ಪುಸ್ತಕವನ್ನು ವಿ.ವಿ. ಕುಲಪತಿ, ಪ್ರಕಾಶನ ವಿಭಾಗದ ರೂವಾರಿ ಡಾ| ಎಚ್. ವಿನೋದ ಭಟ್ ಬಿಡುಗಡೆಗೊಳಿಸಿದರು.
ಇದೇ ಸಂದರ್ಭ ಶೀತಲಾ ಭಟ್ ಬರೆದ “ಪರ್ಫಾರ್ಮಿಂಗ್ ಸೆಲ್ಫ್, ಪರ್ಫಾರ್ಮಿಂಗ್ ಜೆಂಡರ್’, ನಾಗಾ ಲ್ಯಾಂಡ್‌ನ ಶಾಲಾ ಪ್ರಾಂಶುಪಾಲೆ, ಮಣಿಪಾಲದ ಪ್ರಾಕ್ತನ ವಿದ್ಯಾರ್ಥಿನಿ ತೊನಾಲಿ ಸೇಮಾ ಬರೆದ “ಸುಮಿ ಆ್ಯಂಡ್ ದಿ ಡಾನ್ಸ್ ಆಫ್ ದಿ ಡಾರ್ಕ್ ಸ್ಪಿರಿಟ್ಸ್’ ಪುಸ್ತಕವನ್ನು ಡಾ| ಎಂ.ಎಸ್. ವಲಿಯತ್ತಾನ್ ಬಿಡುಗಡೆಗೊಳಿಸಿದರು. ಕೋಲ್ಕತಾದ ಅನುಶ್ವಾ ಚಕ್ರವರ್ತಿ ಬರೆದ “ಇಫ್ ವಿ ಮೀಟ್ ಅಗೈನ್, ವಿ ಶಲ್ ಸೆ¾„ಲ್’ ಪುಸ್ತಕವನ್ನು ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಎಂಯುಪಿ ಮುಖ್ಯ ಸಂಪಾದಕಿ, ಯೂರೋಪಿಯನ್ ಸ್ಟಡೀಸ್ ವಿಭಾಗ ಮುಖ್ಯಸ್ಥೆ ಡಾ| ನೀತಾ ಇನಾಂದಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮಣಿಪಾಲ್ ಸೆಂಟರ್ ಫಾರ್ ಫಿಲಾಸಫಿ ಆ್ಯಂಡ್ ಹ್ಯುಮಾನಿಟೀಸ್ ಪ್ರಾಧ್ಯಾಪಕಿ ಗಾಯತ್ರಿ ಪ್ರಭು ಶುಭಕೋರಿದರು. ಪ್ರಭಾಕರ ಶಾಸಿŒ ಉಪಸ್ಥಿತರಿದ್ದರು. ಎಂಯುಪಿ ಸಂಗ್ರಹ ಸಂಪಾದಕಿ ಅನಿತಾ ನಿರ್ವಹಿಸಿ ವಂದಿಸಿದರು.