Advertisement

ಪ್ರತಿಯೊಬ್ಬರು ಸಮಾಜಮುಖಿ ಕಾರ್ಯದಲ್ಲಿ ತೊಡಗಿ

09:05 PM Jun 03, 2019 | Team Udayavani |

ಹನೂರು: ಹಣವಿದ್ದವರೆಲ್ಲಾ ದಾನ ಧರ್ಮ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಿಲ್ಲಾ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನಮ್ಮ ಕ್ಷೇತ್ರದ ಮುಜಾಹಿದ್‌ ಪಾಷಾ ಕೂಡ ಒಬ್ಬರಾಗಿದ್ದು ದೇವರು ಅವರು ಮತ್ತು ಅವರ ಕುಟುಂಬದವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶಾಸಕ ನರೇಂದ್ರ ರಾಜುಗೌಡ ಹೇಳಿದರು.

Advertisement

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ರಂಜಾನ್‌ ಹಿನ್ನೆಲೆ ಏರ್ಪಡಿಸಿದ್ದ ಆಹಾರ ಪದಾರ್ಥಗಳ ಕಿಟ್‌ ವಿತರಣಾ ಕಾರ್ಯಕ್ರದಲ್ಲಿ ಮಾತನಾಡಿ, ಜಗತ್ತಿನ ಪ್ರತಿಯೊಂದು ಧರ್ಮವೂ ಕೂಡ ದಾನ ಧರ್ಮವನ್ನು ಸಾರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ವಾರ್ಷಿಕ ತಾನು ಸಂಪಾದಿಸಿದ ಹಣದಲ್ಲಿ ಇಂತಿಷ್ಟು ಪ್ರಮಾಣವನ್ನು ಬಡಜನರ ಏಳ್ಗೆಗಾಗಿ ಬಳಸಬೇಕು ಎಂದರು.

ಅಲ್ಪಸಂಖ್ಯಾತರ ಪಾತ್ರ ದೊಡ್ಡದು: ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ನಾನು 3,500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಇಂದು ಶಾಸಕನಾಗಿ ಕರ್ನಾಟಕ ರಾಜ್ಯ ಸರ್ಕಾರದ ನಿಮಗ ಮಂಡಳಿ ಅಧ್ಯಕ್ಷನಾಗಿದ್ದೇನೆ. ನಾನು ಇಂದಿನ ದಿನ ಈ ಸ್ಥಾನ ಪಡೆಯುವಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮತೀಯರ ಪಾತ್ರ ಬಹಳ ಹಿರಿದುದಾಗಿದ್ದು ಮುಸಲ್ಮಾನರ ಮತಗಳಿರುವ ಬೂತುಗಳಲ್ಲಿ ಶೇ.90 ರಿಂದ 95 ಮತಗಳು ನನಗೆ ಬಂದಿವೆ. ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಹೆಚ್ಚಿನ ಮತಗಳು ಚಲಾವಣೆಯಾಗಿವೆ ಎಂದ ಅವರು, ಎಲ್ಲರಿಗೂ ರಂಜಾನ್‌ ಹಬ್ಬದ ಶುಭಾಶಯ ಕೋರಿದರು.

ಆಹಾರ ಕಿಟ್‌ ವಿತರಣೆ: ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ಉಪಾಧ್ಯಕ್ಷ ಸೈಯದ್‌ ಮುಜಾಹಿದ್‌ ಪಾಷಾ ಮಾತನಾಡಿ ನಾನು ಕಳೆದ 11 ವರ್ಷದಿಂದ ಕೊಳ್ಳೇಗಾಲ ಪಟ್ಟಣದಲ್ಲಿ ಆಹಾರ ಪದಾರ್ಥ ಕಿಟ್‌ಗಳನ್ನು ವಿತರಿಸುತ್ತಿದ್ದೆ. ಕಳೆದ 3 ವರ್ಷದ ಹಿಂದೆ ಶಾಸಕ ನರೇಂದ್ರ ಅವರ ಪರಿಚಯವಾಗಿ ತಮ್ಮ ಕ್ಷೇತ್ರದಲ್ಲೂ ಬಡ ಮುಸಲ್ಮಾನರಿದ್ದು ಅವರಿಗೂ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದರು. ಈ ಹಿನ್ನೆಲೆ ಕಳೆದ 3 ವರ್ಷಗಳಿಂದ ವಿತರಣೆ ಮಾಡುತ್ತಿದ್ದು ಈ ಬಾರಿ 750 ಜನರಿಗೆ ಆಹಾರ ಕಿಟ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಮೂಹಿಕ ವಿವಾಹ: ರಂಜಾನ್‌ ಹಬ್ಬಕ್ಕೆ ಬಡಜನರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಣೆ ಜೊತೆಗೆ ಮುಂದಿನ ದಿನಗಳಲ್ಲಿ ಸಾಮಾಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 11 ಅಥವಾ 15 ಜೋಡಿಗೆ ವಿವಾಹ ಮಾಡಿಸಲು ಸಿದ್ಧತೆ ನಡೆಸಲಾಗುತ್ತಿದ್ದು ಅತೀ ಶಿಘ್ರದಲ್ಲಿಯೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಶಾಸಕ ನರೇಂದ್ರ ಕೈ ಬಲಪಡಿಸಿ: ಲೋಕಸಭಾ ಚುನಾವಣೆಯಲ್ಲಿ ಹಲವು ರೀತಿಯಲ್ಲಿ ಷಡ್ಯಂತ್ರ ಮಾಡಿ ಅಧಿಕಾರ ಹಿಡಿದಿದ್ದಾರೆ. ಕೇವಲ ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಿ ಜನಜೀವನವನ್ನು ಕೆಳಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಏಕೆ ಗೆಲ್ಲಲಿಲ್ಲ. ಆದ್ಧರಿಂದ ಯಾರೂ ಕೂಡ ಆತಂಕ ಪಟ್ಟು ಧೃತಿಗೆಡಬೇಡಿ. ಈ ಕ್ಷೇತ್ರದ ಶಾಸಕರು ಉತ್ತಮ ಶಾಸಕರಾಗಿದ್ದು ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು. ಯುವ ಕಾಂಗ್ರೆಸ್‌ ಅಧ್ಯಕ್ಷ ರಾಹೀಲ್‌ ಬೇಗ್‌, ಮುಸಲ್ಮಾನ ಧರ್ಮಗುರುಗಳು, ಮುಖಂಡರು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next