Advertisement
ಸ್ಥಳೀಯ ಹೊಸಮಠದ ಬಸವೇಶ್ವರ ಬಿಇಡಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಹಾವೇರಿ ಜಿಲ್ಲೆಗೆ ರಜತ ಸಂಭ್ರಮ-ಭವಿಷ್ಯದಲ್ಲಿ ನಮ್ಮ ಕನಸಿನ ಹಾವೇರಿ’ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
ನಾಡಿಗೆ ನೀಡಿದ ಹೆಮ್ಮೆ ಹಾವೇರಿ ಜಿಲ್ಲೆಗೆ ಇದೆ.
Advertisement
ಸರ್ಕಾರ ಅನೇಕ ಟ್ರಸ್ಟ್‌ಗಳನ್ನು, ಪ್ರಾಧಿಕಾರಗಳನ್ನು ಹಾವೇರಿ ಜಿಲ್ಲೆಯಲ್ಲಿ ರಚಿಸಿದೆ. ಹಾವೇರಿ ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಆದರೆ ಸಾಂಸ್ಕೃತಿಕ ರಾಜಕಾರಣದ ಕೊರತೆಯಿಂದಾಗಿ ಅನೇಕ ಅವಘಡಗಳಾಗುತ್ತಿವೆ. ಜಿಲ್ಲೆಯ ಮಹನೀಯರ ಹೆಸರಿನಲ್ಲಿರುವ ಟ್ರಸ್ಟ್‌ಗಳಿಗೆ ಸರ್ಕಾರ ಜಿಲ್ಲೆಯವರನ್ನು ನೇಮಿಸದೇ ಬೇರೆ ಜಿಲ್ಲೆಯವರನ್ನು ನೇಮಕ ಮಾಡಿದೆ.
ಅಂತವರಿಂದ ಹೇಗೆ ಕೆಲಸ ನಿರ್ವಹಿಸಲು ಸಾಧ್ಯ ಎನ್ನುವ ಸಾಮಾನ್ಯ ತಿಳಿವಳಿಕೆ ಅಧಿಕಾರದಲ್ಲಿರುವವರಿಗೆ ಇರಬೇಕಾಗುತ್ತದೆ ಎಂದರು. ಪತ್ರಕರ್ತ ಮಾಲತೇಶ ಅಂಗೂರ, ಹಾವೇರಿ ಜಿಲ್ಲೆ ರಚನೆಗೆ ನಡೆದ ಹೋರಾಟ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ಉಪನ್ಯಾಸಕ ಶ್ರೀಧರ ಅಗಸಿಬಾಗಿಲ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಪ್ರಾವಾಸೋಧ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ ಎಂದರು.
ಜಿಲ್ಲೆಯ ಆರ್ಥಿಕಾಭಿವೃದ್ಧಿಯ ಕುರಿತು ಎಚ್.ಎಸ್. ಕಬ್ಬಿಣಕಂತಿಮಠ ಮಾತನಾಡಿ, ಜಿಲ್ಲೆ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಜಿಲ್ಲೆಯ ಜನರ ತಲಾ ಆದಾಯ ಹೆಚ್ಚಳವಾಗಬೇಕು. ಹಾವೇರಿ ಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದೆ. ವೈಜ್ಞಾನಿಕವಾಗಿ ಕೃಷಿ ಉತ್ಪನ್ನಗಳನ್ನು ಬೆಳೆಯುವ ನಿಟ್ಟಿನಲ್ಲಿ ನೂತನ ಕೃಷಿ ಪದ್ಧತಿ ರೂಪಿಸಬೇಕಿದೆ. ಕೃಷಿ ಉತ್ಪನ್ನಗಳಿಗೆ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಅಂದಾಗ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಗಳು ಲಭ್ಯವಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಎಸ್‌ಪಿ ಶಿವಕುಮಾರ ತಾವರಗಿ, ಬಸವರಾಜ ಹೆಡಿಗ್ಗೊಂಡ,ಎನ್.ಎನ್.ಗಾಳೆಮ್ಮನವರ, ಮುರುಗೆಪ್ಪ ಕಡೆಕೊಪ್ಪ, ಪರಮೇಶ್ವರಪ್ಪ ಮೇಗಳಮನಿ ಇತರರಿದ್ದರು. ಬಿಇಡಿ ಕಾಲೇಜು ಪ್ರಾಚಾರ್ಯ ಮಂಜುನಾಥ ವಡ್ಡರ ಸ್ವಾಗತಿಸಿ, ಪ್ರೀಯಾ ರೊಡ್ಡಣ್ಣನವರ ನಿರೂಪಿಸಿ, ವಂದಿಸಿದರು. ಹೋರಾಟದಿಂದ ಅಸ್ತಿತ್ವಕ್ಕೆ ಬಂದಿರುವ ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಚಿಂತನೆಗಳು ನಡೆಯಬೇಕು. ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಗೊಂಡಿದೆ. ಮೆಡಿಕಲ್ ಕಾಲೇಜು ಆರಂಭಿಕ ಹಂತದಲ್ಲಿದೆ. ಯುವಜನತೆಗೆ ಶಿಕ್ಷಣ ನೀಡಿದರೆ ಸಾಲದು, ಉದ್ಯೋಗ ನೀಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹಾವೇರಿ-ರಾಣಿಬೆನ್ನೂರಗಳಲ್ಲಿ ಮೇಜ್ ಪಾರ್ಕ್ ಸ್ಥಾಪನೆಯಾಗಬೇಕಿದೆ. ಕೃಷಿ ಹಾಗೂ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕಿದೆ.
ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷರು