Advertisement
ಆಗ ಶ್ರೀಗಳು ಹೇಳಿದ್ದ ಮಾತನ್ನು “ಉದಯವಾಣಿ’ ಹೀಗೆ ದಾಖಲಿಸಿತ್ತು: “ಇನ್ನೆರಡು ವರ್ಷದೊಳಗೆ (2019) ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆರಂಭವಾಗಬಹುದು. ಮಂದಿರ ನಿರ್ಮಾಣಕ್ಕೆ ಬೇಕಾದ ಪೂರಕ ವಾತಾವರಣ ಕಂಡುಬರುತ್ತಿದೆ. ಹೀಗಾಗಿ ಇದು ಕೇವಲ ಘೋಷಣೆ ಅಲ್ಲ, ಆಗುತ್ತದೆ ಎಂಬ ವಿಶ್ವಾಸ. ಈಗ ಅಲ್ಲಿ ಕಾರಾಗೃಹದ ವಾತಾವರಣವಿದೆ. ಅಂಥಲ್ಲಿ ಭವ್ಯಮಂದಿರದ ಒಳಗೆ ವಿರಾಜಮಾನನಾದ ರಾಮನ ದರ್ಶನ ಮಾಡುವ ಸ್ಥಿತಿ ಬಂದರೆ ಬಹಳ ಸಂತೋಷವಾಗುತ್ತದೆ’.
“ಇಂತಹ ಬಲು ದೊಡ್ಡ ಭವಿಷ್ಯ ಹೇಗೆ ನಿಜ ಆಯಿತು’ ಎಂದು ಈಗ ಪೇಜಾ ವರ ಮಠವನ್ನು ಅಲಂಕರಿಸಿ ರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಕೇಳಿದಾಗ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ: “ಬುದ್ಧಿ ಪ್ರೇರಣೆ ಮಾಡುವವನು ನಾನು ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ- ಮತ್ತಃ ಸ್ಮತಿಃ ಜ್ಞಾನಂ ಅಪೋಹನಂ ಚ… ಸಾಮಾನ್ಯ ಜನರು “ಧಿಯೋಯೋನಃ ಪ್ರಚೋದಯಾತ್’ (ಒಳ್ಳೆಯ ಬುದ್ಧಿಯನ್ನು ಕೊಡು) ಎಂದು ಹೇಳುತ್ತಾರೆ. ಕಾಳಿದಾಸ ಮಹಾಕವಿ “ರಘುವಂಶ’ ಕಾವ್ಯದಲ್ಲಿ “ಋಷೀಣಾಂ ಪುನರಾದ್ಯಾನಾಂ…’ ಅಂದರೆ ಮಹಾತ್ಮರು ಹೇಳಿದ ಬಳಿಕ ಅನಂತರ ಅದಕ್ಕೆ ಬೇಕಾದ ಘಟನಾವಳಿಗಳು ನಡೆಯುತ್ತವೆ ಎಂದು ಹೇಳುತ್ತಾನೆ. ನಮ್ಮ ಗುರುಗಳು ಜ್ಞಾನ ಸೇವೆಯ ಜತೆಗೆ ಎಲ್ಲರೊಳಗೆ ಭಗವಂತನನ್ನು ಕಂಡವರು. ಅವರಿಗೆ ಮಹಾಶಕ್ತಿಯೊಂದು ನುಡಿಯುವಂತೆ ಪ್ರೇರಣೆ ನೀಡಿತು. ಅವರು ನುಡಿದಂತೆ ಅದಕ್ಕೆ ಬೇಕಾದ ಘಟನೆಗಳು ನಡೆಯುತ್ತ ಹೋದವು ಎನ್ನಬಹುದು. ಇಂತಹ ಅನೇಕ ಉದಾಹರಣೆಗಳು
ಅವರ ಜೀವನದಲ್ಲಿ ನಡೆದಿವೆ’.
Related Articles
2017ರ ನವೆಂಬರ್‌ನಲ್ಲಿ ಆಡಿದ ಮಾತು 2019ರ ನವೆಂಬರ್‌ನಲ್ಲಿ ಸಾಕಾರವಾಯಿತಲ್ಲ? ಇದೆಂಥ ಭವಿಷ್ಯನುಡಿ? ಎಂಬ ಕುತೂಹಲ ಯಾರಿಗೂ ಮೂಡದೆ ಇರದು. ಪತ್ನಿ, ಮಕ್ಕಳು, ಉದ್ಯೋಗ, ಭಡ್ತಿ, ವೇತನ ಹೆಚ್ಚಳ, ಪಾಸು, ಫೇಲು ಇತ್ಯಾದಿ ವಿಷಯಗಳ ಭವಿಷ್ಯವನ್ನು ಕೇಳುವುದಿದೆ. ಆದರೆ ಇದು ಅಂಥದ್ದಲ್ಲ. ಇಡೀ ದೇಶವೇ ನಿಬ್ಬೆರಗಾಗಿ ನೂರಾರು ವರ್ಷಗಳಿಂದ ಇತ್ಯರ್ಥಕ್ಕಾಗಿ ಕಾದು ಕುಳಿತಿದ್ದ ವಿಷಯ.
Advertisement