ಕನಕಗಿರಿ: ಪ್ರತಿಯೊಬ್ಬರೂ ಗ್ರಾಮದ ಸಾರ್ವಜನಿಕ ಸ್ಥಳಗಳು ಹಾಗೂ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಎಂ. ಕೃಷ್ಣಮೂರ್ತಿ ಹೇಳಿದರು.
ಕರಡೋಣಾ ಗ್ರಾಮದ ಗ್ರಂಥಾಲಯ ಆವರಣದಲ್ಲಿ ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಲುಮೆ-2 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜನರು ಸಾರ್ವಜನಿಕ ಸ್ಥಳಗಳು, ಮನೆಯ ಅಕ್ಕ-ಪಕ್ಕ ಕಸ ಬಿಸಾಡಬಾರದು.
ಯುವಕರು, ಸಂಘ- ಸಂಸ್ಥೆಗಳು ಸ್ವತ್ಛತೆಗೆ ಕೈಜೋಡಿಸುವ ಮೂಲಕ ಸ್ವಚ್ಛ ಗ್ರಾಮವನ್ನಾಗಿ ಮಾಡಲು ಸಹಕರಿಸಬೇಕು. ಪ್ರತಿ ಶುಕ್ರವಾರ ಚಿಲುಮೆ-2 ಕಾರ್ಯಕ್ರಮ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಯೋಜಿಸಿದ್ದು, ಸ್ವಚ್ಛತೆ ಈ ಯೋಜನೆ ಮೂಲ ಉದ್ದೇಶ. ಶ್ರಮದಾನ ಮಾಡುವ ಹಿಂದಿನ ದಿನದಂದು ಸ್ವತ್ಛತೆ ಕೈಗೊಳ್ಳುವ ಕುರಿತು ಸೂಕ್ತ ಸ್ಥಳ ಆಯ್ಕೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಅವರು ಕರಡೋಣ ಗ್ರಾಮದ ಎಲ್‌ಡಬ್ಲ್ಯುಎಂ ಕಾಮಗಾರಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಂಪೌಂಡ್ ಕಾಮಗಾರಿ, ಕೆ. ಕಾಟಾಪುರ ಗ್ರಾಮದ ಪ್ರಗತಿ ಹಂತದ ಅಮೃತಸರೋವರ ಕಾಮಗಾರಿ ವೀಕ್ಷಣೆ ಮಾಡಿ ಪರಿಶೀಲಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಯಮನೂರಪ್ಪ ದೊಡ್ಡಮನಿ, ಗ್ರಾಪಂ ಸದಸ್ಯರಾದ ಹುಲಿಗೆಮ್ಮ, ಮಲ್ಲಪ್ಪ, ಹನುಮವ್ವ, ಮೈಬುಸಾಬ ಪಿಡಿಒ ವೀರಣ್ಣ ನಕ್ರಳ್ಳಿ, ತಾಪಂ ಸಿಬ್ಬಂದಿಗಳಾದ ವೆಂಕೋಬ, ಚಂದ್ರಶೇಖರ, ಮೇಘರಾಜ ಸೇರಿದಂತೆ ಇತರರಿದ್ದರು.