Advertisement
ತಾಲೂಕಿನ ಸತ್ತೇಗಾಲ ಗ್ರಾಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜಲಶಕ್ತಿ, ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಅಭಿವೃದ್ಧಿ ಕೆಲಸವನ್ನು ಗ್ರಾಪಂ ನಿರ್ವಹಣೆ ಮಾಡಲು ಕಷ್ಟಕರ ಆದ್ದರಿಂದ ಸಾರ್ವಜನಿಕರು ಹಾಗು ಪ್ರಗತಿಪರ ಸಂಘಟನೆಯ ಮುಖಂಡರು ಪ್ರೋತ್ಸಾಹಿಸಿದಾಗ ಗ್ರಾಮ ಅಭಿವೃದ್ಧಿಯಾಗಲಿದೆ ಎಂದರು.
Related Articles
Advertisement
ಹಸೀರಿಕರಣ: ಇತ್ತೀಚಿನ ದಿನಗಳಲ್ಲಿ ಅರಣ್ಯವನ್ನು ನಾಶ ಮಾಡುವುದರಿಂದ ವಾತವರಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಕೂಡಲೇ ಗ್ರಾಮಸ್ಥರು ಹಸೀರಕರಣಕ್ಕೆ ಮುಂದಾಗಬೇಕು. ಆಗಮಾತ್ರ ಋತುಮಾನದಲ್ಲಿ ಯಾವುದೆ ತರಹದ ಆಡಚಣೆ ಉಂಟಾಗದೆ ಸಕಾಲದಲ್ಲಿ ಮಳೆ ಲಭ್ಯವಾಗಲಿದ್ದು, ಪ್ರತಿಯೊಬ್ಬರು ಹಸೀರಿಕರಣಕ್ಕೆ ಮುಂದಾಗಬೇಕು ಎಂದರು.
ನಾಲೆಗಳ ಅಭಿವೃದ್ಧಿ: ಈಗಾಗಲೇ ರೈತರ ಜಮೀನುಗಳಿಗೆ ನೀರು ಹರಿಸಲು ನಾಲೆಗಳನ್ನು ನಿರ್ಮಾಣ ಮಾಡಿದ್ದು, ಕೆಲವು ನಾಲೆಗಳು ಕಸ-ಕಡ್ಡಿ ಬೆಳೆದು, ನೀರು ಸರಾಗವಾಗಿ ಹರಿದು ಹೋಗದಂತೆ ತಡೆಗಳಿದ್ದು, ಕೂಡಲೇ ಅಂತಹ ಗಿಡಗಂಟೆಗಳನ್ನು ತೆರವು ಮಾಡಿ ನಾಲೆಯಲ್ಲಿರುವ ಊಳನ್ನು ತೆಗೆಸಿ, ನಾಲೆಯ ಅಭಿವೃದ್ಧಿ ಮಾಡಲು ಈಗಾಗಲೇ ಕ್ರಿಯಾಯೋಜನೆ ಸಿದ್ಧಗೊಂಡಿದೆ ಎಂದರು.
ಪರಿಹಾರಕ್ಕೆ ಮನವಿ: ಈಗಾಗಲೇ ವಿವಿಧೆಡೆಗಳಲ್ಲಿ ನೆರೆ ಹಾವಳಿಯಿಂದಾಗಿ ಆಸ್ತಿಪಾಸ್ತಿ ಕಳೆದುಕೊಂಡಿರುವವರಿಗಾಗಿ ತಾಲೂಕಿನ ಸಂಜೀವಿನಿ ಮಹಿಳಾ ಒಕ್ಕೂಟದ ಸಂಚಾಲಕಿ ಚಂದ್ರಮ್ಮ ಅವರ ನೇತೃತ್ವದಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 26 ಸಾವಿರ ರೂ. ಪರಿಹಾರವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಸಿಇಒ ಅವರಿಗೆ ಸಲ್ಲಿಸಿದರು.
ಗ್ರಾಮಸ್ಥರು ನೀಡಿರುವ ಹಲವಾರು ಅಹವಾಲುಗಳನ್ನು ಪರಿಗಣಿಸಿ ಸೂಕ್ತ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಗ್ರಾಮ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗುವುದೆಂದು ಗ್ರಾಮಸ್ಥರಿಗೆ ಹೇಳಿದರು. ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾದ್ಯಕ್ಷ ರಾಜಪ್ಪ, ಜಿಪಂ ಸದಸ್ಯೆ ಜಯಂತಿ, ತಾಪಂ ಸದಸ್ಯ ಅರುಣ್‌ಕುಮಾರ್, ಇಒ ಚಂದ್ರು, ಗ್ರಾಪಂ ಪಿಡಿಒ ನಮಿತ ತೇಜಶ್ವಿನಿಗೌಡ ಹಾಗೂ ಸಿಬ್ಬಂದಿವರ್ಗ ಇದ್ದರು.