Advertisement

ಪ್ರತಿಯೊಬ್ಬರೂ ಸಸಿ ನೆಡಲು ಸಲಹೆ

06:00 PM Jun 17, 2021 | Team Udayavani |

ಬೀದರ: ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ ಕಚೇರಿ ಆವರಣದಲ್ಲಿ ಬುಧವಾರ “ಸಸಿ ನೆಡುವ ಕಾರ್ಯಕ್ರಮ’ ನಡೆಯಿತು. ನಗರಸಭೆ ಮಾಜಿ ಸದಸ್ಯ ಮೊಹಮ್ಮದ್‌ ಇರ್ಷಾದ್‌ ಕಚೇರಿ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಸಿ ನೆಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪಾಲಿಕ್ಲಿನಿಕ್‌ನ ಉಪ ನಿರ್ದೇಶಕ ರವೀಂದ್ರಕುಮಾರ ಭೂರೆ ಮಾತನಾಡಿರು. ಡಾ| ಗೌತಮ ಅರಳಿ, ಡಾ| ಯೋಗೀಂದ್ರ ಕುಲಕರ್ಣಿ, ಡಾ| ಬಸವರಾಜ ನಿಟ್ಟೂರೆ, ಡಾ| ಇಲಿಯಾಸ್‌, ವಿಠಲ್‌ ಕಲ್ಯಾಣಿ ಹಾಗೂ ಇತರರು ಇದ್ದರು. ಕುರಿಗಳ ಕರುಳು ಬೇನೆ ಲಸಿಕಾ ಕಾರ್ಯಕ್ರಮ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಜೂ. 30ರವರೆಗೆ ಕುರಿ ಮತ್ತು ಮೇಕೆಗಳಿಗೆ ಉಚಿತ “ಕರುಳು ಬೇನೆ ಲಸಿಕಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಕುರಿ ಮೇಕೆ ಸಾಕಾಣಿಕೆದಾರರು ತಮ್ಮ ಕುರಿ ಮತ್ತು ಮೇಕೆಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಂಡು ಕರುಳು ಬೇನೆ ಬರದಂತೆ ಮುಂಜಾಗ್ರತೆ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಅಧಿಕಾರಿಗಳಾದ ಭಾಲ್ಕಿ ಡಾ| ನರಸಪ್ಪಾ ಎ.ಡಿ. ಮುಖ್ಯ ಪಶುವೈದ್ಯಾಧಿಕಾರಿಗಳು ಮೊ: 9480719624, ಬಸವಕಲ್ಯಾಣ ಡಾ| ರವೀಂದ್ರನಾಥ ಜಿ., ಮುಖ್ಯ ಪಶುವೈದ್ಯಾಧಿಕಾರಿಗಳು-9448604030, ಔರಾದ ಡಾ| ರಾಜಕುಮಾರ ಬಿರಾದಾರ ಮುಖ್ಯ ಪಶುವೈದ್ಯಾಧಿಕಾರಿಗಳು 9480246028, ಬೀದರ ಡಾ| ಯೋಗೇಂದ್ರ ಕುಲಕರ್ಣಿ ಮುಖ್ಯ ಪಶುವೈದ್ಯಾಧಿಕಾರಿಗಳು-944 8100154, ಹುಮನಾಬಾದ ಡಾ| ಗೋವಿಂದ ಬೆ.ಎಚ್‌. ಮುಖ್ಯ ಪಶುವೈದ್ಯಾಧಿಕಾರಿಗಳು- 9449336740 ಅವರನ್ನು ಸಂಪರ್ಕಿಸಬಹುದು ಎಂದು ಇಲಾಖೆ ಉಪ ನಿರ್ದೇಶಕ ಡಾ| ರವೀಂದ್ರಕುಮಾರ ಭೂರೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next