Advertisement
ಈ ನಡುವೆ ಕೃಷಿ ತೋಟಗಳಿಗೆ ಬಿಡಿ, ಕುಡಿಯಲು ನೀರಿಲ್ಲದೆ ಸಾಯುವವರು ಅನೇಕರು. ಇನ್ನು ಚಳಿಗಾಲ ಬಂತು ಎಂದಿಟ್ಟುಕೊಳ್ಳಿ, ದೇಶದ ಕೆಲವು ಪ್ರದೇಶಗಳಲ್ಲಿ ಮೈನಸ್ ಉಷ್ಟಾಂಶ ದಾಖಲಾಗುತ್ತದೆ. ಪರಿಣಾಮವಾಗಿ ಚಳಿಗೆ ನಡುಗಿ ಒಂದಷ್ಟು ಮಂದಿ ಮೃತಪಡುತ್ತಾರೆ. ಇನ್ನು ಸಿಡಿಲಿನ ಆಘಾತಕ್ಕೆ ಒಳಗಾದ ಜನರೂ ಇದ್ದಾರೆ.
Related Articles
ದೇಶದ ಕೆಲವು ಪ್ರದೇಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ. ಈ ವರ್ಷವೂ ಕೆಲವು ಭಾಗಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳೆಯಾಗಿದೆ. ದೇಶದಲ್ಲಿ ಕಳೆದ 3 ವರ್ಷದಲ್ಲಿ ಈ ತಿಂಗಳಾಂತ್ಯಕ್ಕೆ ಸುಮಾರು 6,585 ಜನ ವಿವಿಧ ರೀತಿಯ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. ಬಿರುಗಾಳಿ, ಪ್ರವಾಹ, ಭೂ ಕುಸಿತ ಮೊದಲಾದವುಗಳ ಪರಿಣಾಮವಾಗಿ ಜನ ಪ್ರಾಣ ತೆತ್ತಿದ್ದಾರೆ.
Advertisement
ಬಿಹಾರ ಮತ್ತು ಅಸ್ಸಾಂನಲ್ಲಿ ಕಳೆದ ವಾರ ಸಂಭವಿಸಿದ ತೀವ್ರ ಪ್ರವಾಹದಲ್ಲಿ 170 ಜನರು ಸಾವಿಗೀಡಾಗಿದ್ದಾರೆ. ಇಲ್ಲಿ 10 ಮಿಲಿಯನ್ ಜನರು ತೊಂದರೆಗೆ ಒಳಗಾಗಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 204 ಪ್ರಾಣಿಗಳು ಬಲಿಯಾಗಿವೆ.ಕಳೆದ ವರ್ಷ ಕೇರಳದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿತ್ತು. 94 ವರ್ಷಗಳ ಬಳಿಕ ಕೇರಳ ಕಂಡ ಪ್ರವಾಹ ಅದಾಗಿತ್ತು. ಇಲ್ಲಿ 477 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಬಿಹಾರದಲ್ಲಿ 970, ಕೇರಳದಲ್ಲಿ 756, ಪಶ್ಚಿಮ ಬಂಗಾಲದಲ್ಲಿ 663, ಮಹಾರಾಷ್ಟ್ರದಲ್ಲಿ 522 ಮತ್ತು ಹಿಮಾಚಲ ಪ್ರದೇಶದಲ್ಲಿ 458 ಮಂದಿ ಅತಿ ವೃಷ್ಟಿಗೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ಸುಮಾರು 2 ಲಕ್ಷ ಕುಟುಂಬಗಳು ಹಾನಿಗೀಡಾಗಿವೆ. ಈ ವರ್ಷ ದೇಶದಲ್ಲಿ ಎಪ್ರಿಲ್ ಬಳಿಕ 496 ಮಂದಿ ಸಾವಿಗೀಡಾಗಿದ್ದಾರೆ.
64 ವರ್ಷದಲ್ಲಿ ಸುಮಾರು 1 ಕೋಟಿ ಸಾವು
1953ರ ಬಳಿಕ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಂದಿ ಮಳೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. 40 ಮಿಲಿಯನ್ ಹೆಕ್ಟರ್ ಭೂ ಪ್ರದೇಶಗಳು ಜಲಾವೃತವಾಗಿದೆ. ಕಳೆದ 3 ದಶಕಗಳಲ್ಲಿ 431 ಅಪಾಯದ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.