ಮೈಸೂರು: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಬಾರತದ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸುಬ್ರೋ ಕಮಲ್ ಮುಖರ್ಜಿ ಹೇಳಿದರು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಆಯೋಜಿಸಿರುವ ಸಂವಿಧಾನ-ಪ್ರಜಾಸತ್ತೆ-ಸಮಾನತೆ: ಕರ್ನಾಟಕ ಒಂದು ಆದರ್ಶ ಮಾದರಿ ವಿಷಯ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಬಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದೇಶದ ಪ್ರಜಾಪ್ರಭುತ್ವವು ದೇಶದ ಸಂವಿಧಾನವೂ ಮೂಲಭೂತ ತಣ್ತೀಗಳ ಆಧಾರದಲ್ಲಿ ರಚಿತವಾಗಿದ್ದು, ಅದರಂತೆ ದೇಶದಲ್ಲಿ ಸಂವಿಧಾನವೇ ಸರ್ವೋತ್ಛ ಕಾನೂನಾಗಿದೆ. ಆದ್ದರಿಂದಲೇ ಬಾರತದ ಸಂವಿಧಾನ ವಿಶ್ವದಲ್ಲಿಯೇ ದೊಡ್ಡ ಸಂವಿಧಾನವಾಗಿದೆ ಎಂದರು.
ಸಮಾನತೆ: ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು, ಜನಪ್ರತಿನಿಧಿಗಳ ಆಯ್ಕೆಯ ಹಕ್ಕನ್ನು ನೀಡಿರುವುದು ಸಂವಿಧಾನದ ವಿಶೇಷವಾಗಿದೆ. ಸಮಾನತೆ ಎಂಬುದು ಅದರ ಪ್ರಾಮುಖ್ಯತೆಯಲ್ಲೊಂದು.ಅದನ್ನು ತಿಳಿದು ಅನುಸರಿಸಬೇಕು ಎಂದರು.
ಬದುಕಲು ವೇದಿಕೆ: ರಾಜ್ಯ ಸರ್ಕಾರ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮಾದರಿ ಎಂಬಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಆ ಮೂಲಕ ಶಿಕ್ಷಣ, ಕೈಗಾರಿಕೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ, ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮುಂದಿನ ಬೆಳವಣಿಗೆಗೆ ಒತ್ತು ನೀಡುವ ಮೂಲಕ ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದ ಸಂವಿಧಾನ ಅಪಾಯಕ್ಕೆ ಸಿಲುಕಿದ್ದು, ಸ್ವಾತಂತ್ರ ಎಂಬುದು ಅರ್ಥಹೀನವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಜವಾಬ್ದಾರಿ ಅರಿಯಬೇಕಿದೆ. ಸಮಾರಂಭದಲ್ಲಿ ದಿಕ್ಸೂಚಿ ಬಾಷಣ ಮಾಡಿದ ದೆಹಲಿಯ ಜವಹರಲಾಲ್ ನೆಹರು ವಿವಿಯ ಪೊ›. ಗೋಪಾಲ್ ಗುರು, ಪ್ರಜಾಪ್ರಭುತ್ವದ ಆಶೋತ್ತರಗಳ ಬಗ್ಗೆ ಮಾಹಿತಿ ನೀಡಿದರು. ಮೈಸೂರು ವಿವಿ ಪ್ರಬಾರ ಕುಲಪತಿ ಪೊ›.ದಯಾನಂದ ಮಾನೆ, ಜಿಲ್ಲಾಧಿಕಾರಿ ಡಿ.ರಂದೀಪ್ ಹಾಜರಿದ್ದರು.