Advertisement

ಪಕ್ಷದ ಪ್ರತಿ ಕಾರ್ಯಕರ್ತನೂ ಅಭ್ಯರ್ಥಿಯೇ!

11:17 AM May 10, 2019 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತಿಯೊಬ್ಬರ ಮನೆಗೆ ಹೋಗಿ ಕುಸುಮಾವತಿ ಪರವಾಗಿ ಮತಯಾಚನೆ ಮಾಡಬೇಕು. ಇದು ಪಕ್ಷದ ಪ್ರತಿಯೊಬ್ಬರ ಚುನಾವಣೆ ಎಂದು ಗಂಭೀರವಾಗಿ ತೆಗೆದುಕೊಂಡು ಮತ ಕೇಳಬೇಕು ಎಂದು ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

Advertisement

ಬೆಟದೂರು ಗ್ರಾಮದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇದು ಕುಸುಮಾವತಿಯವರ ಚುನಾವಣೆಯಲ್ಲ. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಚುನಾವಣೆಯಾಗಿದ್ದು, ಪ್ರತಿಯೊಬ್ಬರೂ ಅಭ್ಯರ್ಥಿಯಂತೆ ಚುನಾವಣೆ ಮಾಡಬೇಕು. ಪ್ರತಿಯೊಂದು ಬೂತ್‌ನಲ್ಲಿ ಹೆಚ್ಚಿನ ಲೀಡ್‌ ನೀಡಬೇಕು ಎಂದರು.

ಮೇ 23 ದೊಡ್ಡ ಬದಲಾವಣೆ: ದೇಶದಲ್ಲಿ ಮೇ 23 ನಂತರ ದೊಡ್ಡ ಬದಲಾವಣೆಯಾಗಲಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಮೈತ್ರಿ ಸರಕಾರ ಐದು ವರ್ಷಗಳ ಕಾಲ ಗಟ್ಟಿಯಾಗಿರುತ್ತದೆ. ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಸುಭದ್ರವಾಗಿರುತ್ತದೆ. ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ತಲೆಕೆಡಿಸಿ ಕೊಳ್ಳಬಾರದು ಎಂದು ಹೇಳಿದರು.

ನೀರಿನ ಸಮಸ್ಯೆ ನನಗಿರಲಿ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂಬುವುದನ್ನು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದಾರೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈಗ ಯಾವುದೇ ಆಶ್ವಾಸನೆ ನೀಡುವುದಿಲ್ಲ. ಈ ನೀರಿನ ಸಮಸ್ಯೆ ಡಿ.ಕೆ. ಶಿವಕುಮಾರಗಿರಲಿ. ಈ ಕುರಿತು ಬಂದು ಭೇಟಿಯಾಗುವಂತೆ ಸ್ಥಳೀಯ ಮುಖಂಡರಿಗೆ ಸೂಚಿಸಿದರು.

ತಲೆಕೆಡಿಸಿಕೊಳ್ಳಬೇಡಿ: ಮಾಜಿ ಸಚಿವ ಶ್ರೀರಾಮುಲು ಅವರ ಹೇಳಿಕೆ ಕುರಿತು ಜನರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷದಿಂದ ಅವರ ವಿರುದ್ಧ ದೂರು ನೀಡಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ಶಿವಳ್ಳಿ ಅವರು ಕ್ಷೇತ್ರದಲ್ಲಿ ಹೇಗಿದ್ದರು ಎನ್ನುವ ಕುರಿತು ಈಗಾಗಲೇ ಇಲ್ಲಿನ ಅಧಿಕಾರಿಗಳು, ವರ್ತಕರು, ಸಾಮಾನ್ಯ ಜನರು ಸೇರಿದಂತೆ ವಿರೋಧ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಮಾತನಾಡಿದ್ದೇನೆ. ಅವರಂತಹ ಒಳ್ಳೆಯ ವ್ಯಕ್ತಿತ್ವದ ಜನಪ್ರತಿನಿಧಿ ಮತ್ತೂಬ್ಬರಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಜಗ್ಗಲಿಗೆ ಬಾರಿಸಿ, ಐಸ್‌ಕ್ರೀಂ ಸವಿದ ಡಿಕೆಶಿ:
ಇಂಗಳಗಿ ಗ್ರಾಮದಲ್ಲಿ ಬಹಿರಂಗ ಸಭೆ ಹೊರಟ ಸಂದರ್ಭದಲ್ಲಿ ಗ್ರಾಮ ದೇವತೆ ಮೆರವಣಿಗೆಯಲ್ಲಿ ಡಿಕೆಶಿ ಜಗ್ಗಲಿಗೆ ಬಾರಿಸಿದರು. ಕಲಾವಿದರ ತಲೆ ಮೇಲಿದ್ದ ಪೇಟಾ ತೆಗೆದುಕೊಂಡು ತಾವೇ ಸುತ್ತಿಕೊಂಡು ಜಗ್ಗಲಿಗೆ ಬಾರಿಸಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಸಾಥ್‌ ನೀಡಿದರು. ಜಾನುವಾರುಗಳ ಮೈ ಸವರಿ ನಮಸ್ಕರಿಸಿದರು. ಜನರು ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. ಕಮಡೊಳ್ಳಿಯಲ್ಲಿ ಐಸ್‌ ಕ್ರೀಂ ಖರೀದಿಸಿ ಸವಿದರು. ಛಬ್ಬಿ ಗ್ರಾಮದಲ್ಲಿ ಮುತ್ತೈದೆಯರು ಆರತಿ ಮಾಡುವ ಮೂಲಕ ಡಿಕೆಶಿ ಹಾಗೂ ಮುಖಂಡರಿಗೆ ಅದ್ಧೂರಿ ಸ್ವಾಗತ ಕೋರಿದರು.

Udayavani is now on Telegram. Click here to join our channel and stay updated with the latest news.

Next