Advertisement

ಮೋದಿ ಸರಕಾರ ಮಾಡಿದ ಪ್ರತಿಯೊಂದು ಕೆಲಸವು ಜನಪರವಾಗಿರುತ್ತದೆ: ಅರವಿಂದ ಲಿಂಬಾವಳಿ

08:10 PM Feb 12, 2021 | Team Udayavani |

ಬೆಂಗಳೂರು: ಈ ಬಾರಿಯ ಕೇಂದ್ರದ ಬಜೆಟ್ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಿದೆ ಎಂದು ರಾಜ್ಯದ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Advertisement

ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳ ವತಿಯಿಂದ ಮಾರತ್ತಹಳ್ಳಿಯ ಎಸ್‍ಬಿಆರ್ ಕನ್ವೆನ್ಶನ್ ಹಾಲ್‍ನಲ್ಲಿ ಶುಕ್ರವಾರ ನಡೆದ “ಕೇಂದ್ರ ಸರಕಾರದ 2021ನೇ ಸಾಲಿನ ಬಜೆಟ್ ಅವಲೋಕನ ಸಭೆ”ಯಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಸರಕಾರ ಮಾಡಿದ ಯಾವುದೇ ಕೆಲಸವು ಜನಪರವಾಗಿರುತ್ತದೆ. ಕೇಂದ್ರದ ಕಾರ್ಯಕ್ರಮಗಳ ಮಾದರಿಯಂತೆ ಬಜೆಟ್ ಕೂಡ ಅಭಿವೃದ್ಧಿ ಪರ ಮತ್ತು ಜನಪರವಾಗಿದೆ ಎಂದರು

ಇದನ್ನೂ ಓದಿ:   ದ್ವಿತೀಯ ಪಿಯು ಪರೀಕ್ಷೆ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದ ಸಚಿವ ಸುರೇಶ್ ಕುಮಾರ

ಮಹಿಳಾ ಹಣಕಾಸು ಸಚಿವೆ ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಬಜೆಟ್ ಮುಂದಿಟ್ಟಿದ್ದಾರೆ. ಇದರಿಂದ ದೇಶ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪೇಪರ್ ರಹಿತ ಬಜೆಟ್ ಮಂಡಿಸುವ ಮೂಲಕ ಪರಿಸರಕ್ಕೆ ಹಾನಿ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ನುಡಿದರು. ಕೋವಿಡ್ ಲಸಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಿಂದ ವಿದೇಶಗಳ ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ಪೂರೈಕೆಯೂ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಗೀತಾ ವಿವೇಕಾನಂದ, ಮುಖಂಡರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ:  ಕೋವಿಡ್ ಮಧ್ಯೆಯೂ ದಾಖಲೆ ರಸಗೊಬ್ಬರ ಪೂರೈಕೆ; ಸದಾನಂದ ಗೌಡರಿಗೆ ಉಪರಾಷ್ಟ್ರಪತಿ ಮೆಚ್ಚುಗೆ

Advertisement

Udayavani is now on Telegram. Click here to join our channel and stay updated with the latest news.

Next