Advertisement
ಮರುದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬಂದದ್ದೇ ಅವರನ್ನೆಲ್ಲ ಕುರಿ ಹಿಕ್ಕೆಯ ವಾಸನೆ ಸ್ವಾಗತಿಸಿತು. ನೋಡಿದರೆ, ಎಲ್ಲಡೆಯೂ ಹಿಕ್ಕೆ. ಶಾಲೆಯಲ್ಲಿ ಕುರಿಗಳು ಹೊಕ್ಕಿವೆ ಎಂದು ಕೂಡಲೇ ಅವರಿಗೆ ಅರ್ಥವಾಯಿತು. ಈಗ ಎಲ್ಲರೂ ಕುರಿಗಳನ್ನು ಹುಡುಕಲಾರಂಭಿಸಿದರು. ಕೆಲವೇ ಸಮಯದಲ್ಲಿ ಮೂರೂ ಕುರಿಗಳೂ ಸಿಕ್ಕಿಬಿಟ್ಟವು. ಶಿಕ್ಷಕರು ನಿಟ್ಟುಸಿರಿರುಬಿಟ್ಟರಾದರೂ, ಆ ಕುರಿಗಳ ಮೇಲಿನ ನಂಬರ್‌ಗಳನ್ನು ನೋಡಿ ಅವರಿಗೆ ಚಿಂತೆ ಶುರುವಾಯಿತು. ಅರೇ, ಬರೀ 1,2,4 ಕುರಿಗಳಿವೆಯಲ್ಲ…3ನೇ ಕುರಿ ಏನಾಯಿತು? ಎಂದು ಹುಡುಕಲಾರಂಭಿಸಿದರು. ಆದರೆ, ಅದು ಸಿಗುವುದಾದರೂ ಹೇಗೆ? ಅಂಥ ಕುರಿಯೇ ಇರಲಿಲ್ಲ. ಆದರೂ, ಇಡೀ ದಿನ ಶಿಕ್ಷಕರು, ಕೆಲಸಗಾರರು, ವಿದ್ಯಾರ್ಥಿಗಳ ತಲೆಯಲ್ಲಂತೂ 3 ನಂಬರ್ ಕುರಿಯ ಕುರಿತೇ ಯೋಚನೆ. ಎಲ್ಲರೂ ಅದು ಎಲ್ಲಿ ಅಡಗಿರಬಹುದು ಎಂದೇ ತಲೆಕೆಡಿಸಿಕೊಂಡಿದ್ದರು. ಬಹುದಿನಗಳವರೆಗೆ 3ನೇ ಕುರಿಯ ಬಗ್ಗೆಯೇ ಶಾಲೆಯಲ್ಲಿ ಚರ್ಚೆ ನಡೆದಿತ್ತು!
ಒಂದೂರಿನಲ್ಲಿ ಒಬ್ಬ ಆಗರ್ಭ ಶ್ರೀಮಂತನಿದ್ದ. ಸಾಮಾನ್ಯ ಜನರು ಕನಸು ಮನಸಿನಲ್ಲೂ ಊಹಿಸಲಾಗದಷ್ಟು ಸಿರಿಸಂಪತ್ತು ಆತನ ಬಳಿ ಇತ್ತು. ಜಗತ್ತಿನ ಸಕಲೈಶ್ವರ್ಯಗಳೂ ಆತನ ಜೇಬಿನಲ್ಲೇ ಇವೆಯೇನೋ ಎನ್ನುವಂತೆ ಇತ್ತು ಜೀವನಶೈಲಿ. ಆದರೆ ಜೀವನವೇ ವಿಚಿತ್ರ, ಎಲ್ಲಾ ಇದ್ದರೂ ಏನಾದರೊಂದು ಸಮಸ್ಯೆ, ಕೊರತೆ ಇದ್ದೇ ಇರುತ್ತದೆ. ಎಲ್ಲವೂ ಸರಿದಾರಿಯಲ್ಲಿ ಸಾಗುತ್ತಿರುವಾಗ ಯಾವುದೋ ಅಡ್ಡಿ ಎದುರಾಗಿಬಿಡುತ್ತದೆ. ಮನಶಾಂತಿ ಕದಡಿಬಿಡುತ್ತದೆ. ಅದೇ ರೀತಿಯೇ ಈ ಶ್ರೀಮಂತ ವ್ಯಕ್ತಿಗೂ ಒಂದು ಸಮಸ್ಯೆ ಎದುರಾಯಿತು. ಅವನಿಗೆ ತೀವ್ರವಾಗಿ ಕಣ್ಣಿನ ನೋವು ಬಾಧಿಸಲಾರಂಭಿಸಿತು.
Related Articles
Advertisement
ಊಹೂಂ. ಎಷ್ಟೇ ಚಿಕಿತ್ಸೆ ಪಡೆದರೂ ಆತನ ಕಣ್ಣಿನ ನೋವು ಕಡಿಮೆಯಾಗಲೇ ಇಲ್ಲ. ಕಡಿಮೆಯಾಗುವುದಿರಲಿ, ನೋವು ಉಲ್ಬಣಿಸುತ್ತಲೇ ಹೋಯಿತು. ಇದರಿಂದ ಆತನ ಜೀವನಶೈಲಿಯೇ ಏರುಪೇರಾಯಿತು. ಪ್ರಮುಖ ಮೀಟಿಂಗ್‌ಗಳನ್ನೆಲ್ಲ ಕ್ಯಾನ್ಸಲ್ ಮಾಡಿಕೊಳ್ಳಬೇಕಾಯಿತು, ಸುತ್ತಾಡುವುದನ್ನು ಕಡಿಮೆ ಮಾಡಬೇಕಾಯಿತು, ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಏನಾಗಿಬಿಡುತ್ತದೋಎಂಬ ಭಯವು ಚಿಂತೆಯ ರೂಪ ತಾಳಿ, ಅವನ ಒಟ್ಟಾರೆ ಆರೋಗ್ಯವೂ ಹಾಳಾಯಿತು. ತನ್ನ ಮಾಲೀಕನ ಸ್ಥಿತಿ ನೋಡಿ ಮರಗಿದ ಸಿಬ್ಬಂದಿಯೊಬ್ಬರು ತಮ್ಮೂರಿನಲ್ಲೇ ಇರುವ ಒಬ್ಬ ಸಂತನ ಬಗ್ಗೆ ಹೇಳಿದರು. ತೀವ್ರ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆ ಸಂತನದ್ದು ಎತ್ತಿದ ಕೈ ಎಂದು ಸಿಬ್ಬಂದಿ ಬಣ್ಣಿಸಿದ. ಆದದ್ದಾಗಲಿ, ಇದನ್ನೂ ಪ್ರಯತ್ನಿಸಿಬಿಡುತ್ತೇನೆ ಎಂದು ಈ ವ್ಯಕ್ತಿ ಸಂತ ನೆಲೆಸಿದ್ದ ಜಾಗಕ್ಕೆ ಹೋದ. ಈತನನ್ನು ಕೂಲಂಕಷವಾಗಿ ಪರೀಕ್ಷಿಸಿದ ಸಂತ…ಈ ಸಮಸ್ಯೆಯನ್ನು ತಾನು ಪರಿಹರಿಸುವುದಾಗಿ ಹೇಳಿದ. ಆದರೆ, ಅದಕ್ಕಾಗಿ ಈ ಶ್ರೀಮಂತ ವ್ಯಕ್ತಿ ಒಂದು ಬಹುಮುಖ್ಯ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ. “”ಏನದು ಕೆಲಸ? ನಾನು ಈ ನೋವಿನಿಂದ ಮುಕ್ತಿ ಪಡೆಯಲು ಏನನ್ನಾದರೂ ಮಾಡಲು ತಯ್ನಾರಿದ್ದೇನೆ” ಎಂದ ಶ್ರೀಮಂತ. “”ನೀನು ಮುಂದಿನ ಕೆಲವು ವಾರಗಳವರೆಗೆ ಬೆಳಗ್ಗೆ ಹತ್ತುಗಂಟೆಯಿಂದ, ಸಂಜೆ ಆರು ಗಂಟೆಯವರೆಗೆ ಕೇವಲ ಹಸಿರು ಬಣ್ಣವನ್ನಷ್ಟೇ ನೋಡಬೇಕು. ಯಾವುದೇ ಕಾರಣಕ್ಕೂ ಬೇರೆಯ ಬಣ್ಣಗಳನ್ನು ನೋಡಬಾರದು. ಹೇಳು, ಈ ಕೆಲಸ ಆಗುತ್ತಾ?” ಕೇಳಿದ ಸಂತ. ಈ ವಿಚಿತ್ರ ನಿಯಮ ಕೇಳಿ ಶ್ರೀಮಂತನಿಗೆ ಅಚ್ಚರಿಯಾದರೂ, ಅವನ ಬಳಿ ಬೇರಾವ ಆಯ್ಕೆಗಳೂ ಇರಲಿಲ್ಲ. ಹೀಗಾಗಿ ಮರುಮಾತನಾಡದೇ ಒಪ್ಪಿಕೊಂಡ.
ಬೇರೆ ಬಣ್ಣಗಳಿಂದ ದೂರವಿರುವುದು ಹೇಗೆ ಎಂದು ತಲೆಕೆಡಿಸಿಕೊಂಡಾಗ ಆತನಿಗೊಂದು ಯೋಚನೆ ಹೊಳೆಯಿತು. ಕೂಡಲೇ ತನ್ನ ಕೆಲಸದವರಿಗೆ ಹೇಳಿ ಹತ್ತಾರು ಡ್ರಮ್ಮುಗಳಷ್ಟು ಹಸಿರು ಬಣ್ಣದ ಪೇಂಟ್‌ಗಳನ್ನು ತರಿಸಿಕೊಂಡ. ಮನೆಯವರನ್ನೆಲ್ಲ ಊರಿಗೆ ಕಳಿಸಿದ, ತನ್ನ ಕಣ್ಣು ಯಾವೆಲ್ಲ ವಸ್ತುಗಳ ಮೇಲೆ ಬೀಳಬಹುದೋ ಯೋಚಿಸಿ, ಅವಕ್ಕೆಲ್ಲ ಹಸಿರುಬಣ್ಣ ಬಳಿಸಿಬಿಟ್ಟ. ಕೆಲ ದಿನಗಳ ನಂತರ ಸಂತ ಶ್ರೀಮಂತನ ಸ್ಥಿತಿ ಹೇಗಿದೆಯೋ ನೋಡಿಕೊಂಡು ಬರೋಣ ಎಂದು ಆತನ ಮನೆಯತ್ತ ಹೊರಟ. ಯಾವಾಗ ಆತ ಶ್ರೀಮಂತನ ಐಷಾರಾಮಿ ಬಂಗಲೆಯ ಗೇಟನ್ನು ಪ್ರವೇಶಿಸಿದನೋ ಆತನಿಗೆ ಅಚ್ಚರಿಯಾಯಿತು. ಎಲ್ಲಾ ಕಡೆಯೂ ಹಸಿರು ಬಣ್ಣ ಬಳಿಯಲಾಗಿತ್ತು! ಕಾಂಪೌಂಡಷ್ಟೇ ಅಲ್ಲ, ಅಲ್ಲಿ ಓಡಾಡುತ್ತಿದ್ದ ನಾಯಿಗೂ ಹಸಿರು ಬಣ್ಣ ಹಚ್ಚಲಾಗಿತ್ತು. ಇದನ್ನು ಅಚ್ಚರಿಯಿಂದಲೇ ನೋಡುತ್ತಾ ಆ ಸಂತ, ಇನ್ನೇನು ಬಂಗಲೆಯನ್ನು ಪ್ರವೇಶಿಸಬೇಕು…ಅಷ್ಟರಲ್ಲೇ, ಖಾವಿ ಬಟ್ಟೆ ತೊಟ್ಟ ಈತನನ್ನು ಕಂಡು ಗಾಬರಿಕೊಂಡ ಮನೆಯ ಕೆಲಸಗಾರರು, ಎಲ್ಲಿ ತಮ್ಮ ಯಜಮಾನನಿಗೆ ತೊಂದರೆಯಾಗುತ್ತದೋ ಎಂದು ಭಾವಿಸಿ ಓಡೋಡುತ್ತಾ ಒಂದು ಬಕೆಟ್ ಪೇಂಟ್ ತಂದು ಸಂತನ ತಲೆಯ ಮೇಲೆ ಸುರಿದುಬಿಟ್ಟರು! ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲೇ ಸಂತನ ಮೈಯೆಲ್ಲ ಹಸಿರಾಗಿತ್ತು. ಕಣ್ಣೊರೆಸಿಕೊಂಡು ನೋಡಿದ. ಎದುರಿಗೆ ನಿಂತ ಕೆಲಸಗಾರರೂ ಮೈತುಂಬಾ ಹಸಿರುಬಣ್ಣ ಬಳಿದುಕೊಂಡು ನಿಂತಿದ್ದರು. “”ಕ್ಷಮಿಸಿ ಸ್ವಾಮೀಜಿ, ಈ ಹೊತ್ತಲ್ಲಿ ನಮ್ಮ ಯಜಮಾನರಿಗೆ ಬೇರೆಯ ಬಣ್ಣ ಕಣ್ಣಿಗೆ ಬೀಳಬಾರದು” ಎಂದರು. ಸಂತನಿಗೆ ನಗೆಯೋ ನಗೆ. “”ಅಯ್ಯೋ ಪೆದ್ದರಾ…ಇಷ್ಟೆಲ್ಲ ಒದ್ದಾಡುವ ಬದಲು ಒಂದು ಗಾಢ ಹಸಿರು ಗಾಜಿನ ಕನ್ನಡಕವನ್ನು ತಂದು ನಿಮ್ಮ ಯಜಮಾನರಿಗೆ ತೊಡಿಸಿದ್ದರೆ, ಇಷ್ಟೆಲ್ಲ ವಸ್ತುಗಳೂ ಹಾಳಾಗುತ್ತಿರಲಿಲ್ಲ, ಇಷ್ಟೆಲ್ಲ ಹಣ-ಸಮಯವೂ ಪೋಲಾಗುತ್ತಿರಲಿಲ್ಲ. ಅಯ್ಯೋ ಪಾಪ! ಎಷ್ಟೊಂದು ನಷ್ಟ ಮಾಡಿಕೊಂಡಿರಿ” ಇಷ್ಟು ಹೇಳಿ, ಸಂತ ನಗುತ್ತಲೇ ತನ್ನ ಆಶ್ರಮದತ್ತ ಹೆಜ್ಜೆ ಹಾಕಿದ.. ಜಗತ್ತನ್ನು ಬದಲಿಸಲು ಆಗದಿದ್ದರೆ, ಜಗತ್ತಿನೆಡೆಗಿನ ನಮ್ಮ ದೃಷ್ಟಿಯನ್ನು ನಿಶ್ಚಿತವಾಗಿ ಬದಲಿಸಿಕೊಳ್ಳಲು ಸಾಧ್ಯವಿದೆ. ಜಗತ್ತನ್ನು ಬದಲಿಸಲು ಪ್ರಯತ್ನಿಸಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ಕೆಲವೊಂದು ಸಂಗತಿಗಳು ನಮ್ಮ ಕೈಮೀರಿ ಇರುತ್ತವೆ. ಅಂಥ ಸಮಯದಲ್ಲಿ ನಮ್ಮ ಬದಲಾದ ದೃಷ್ಟಿಕೋನವು ನಮ್ಮ ನೋವುಗಳನ್ನು ಪರಿಹರಿಸಬಲ್ಲದು. ನಮ್ಮ ಮನಸ್ಸನ್ನು ಸ್ವತ್ಛಗೊಳಿಸಬಲ್ಲದು. ನಮ್ಮ ಭಾವನಾತ್ಮಕ ಆರೋಗ್ಯವನ್ನು ಸರಿಪಡಿಸಬಲ್ಲದು. ನಮ್ಮ ಸಂಬಂಧಗಳನ್ನು ಸುಸ್ಥಿತಿಗೆ ತರಬಲ್ಲದು. ನಮ್ಮ ಉದ್ಯೋಗ, ನಮ್ಮ ಉದ್ದೇಶಗಳಲ್ಲಿನ ದೋಷಗಳನ್ನು ರಿಪೇರಿ ಮಾಡಬಲ್ಲದು… ನನ್ನನ್ನು ನಂಬಿ, ನಾವು ಬಯಸಿದಂತೆ ಜಗತ್ತನ್ನು ರೂಪಿಸುವುದು ಅಜಮಾಸು ಅಸಾಧ್ಯವಾದ ಕೆಲಸವೇ ಸರಿ. ಆದರೆ ದೋಷ ಜಗತ್ತಿನಲ್ಲಿ ಇದೆಯೋ ನಮ್ಮ ದೃಷ್ಟಿಯಲ್ಲಿದೆಯೋ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. – ಗೌರ್ ಗೋಪಾಲದಾಸ್