Advertisement
ನಾನು ಮೊದಲೇ ಹೇಳಿದ ಹಾಗೆ ಸಮಸ್ಯೆಯೇ ಸಾಧನೆಯ ಮೊದಲ ಮೆಟ್ಟಿಲು. ಇವತ್ತು ಒಬ್ಬ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದನೆಂದರೆ ಅದಕ್ಕೆ ಕಾರಣ ಅವನ ಸಮಸ್ಯೆಯೇ. ಇದಕ್ಕೆ ಮಾದರಿಯಾಗಿ ನಮ್ಮ ನೆಚ್ಚಿನ ವಿಜ್ಞಾನಿ ಅಬ್ದುಲ್ ಕಲಾಂರನ್ನು ತೆಗೆದುಕೊಳ್ಳೋಣ. ಕಲಾಂ ಅವರ ಬಗ್ಗೆ ತಿಳಿದಿರುತ್ತೀರಿ. ಆದರೆ, ಮತ್ತೆ ವಿವರಿಸಬೇಕಿದೆ. ಕಲಾಂರವರು ಒಂದು ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲ ಲೆಕ್ಕಿಸದೆ ಪೇಪರ್ ಮಾರಿಯಾದರೂ ವಿದ್ಯಾಭ್ಯಾಸವನ್ನು ಪೂರೈಸಿ ಕೊನೆಗೊಂದು ದಿನ ಭಾರತ ದೇಶ ಕಂಡ ಭಾರತದ ಕನಸುಗಾರರಾದರು. ಒಂದು ವೇಳೆ ಅವರನ್ನು ಆವರಿಸಿದ್ದ ಕಿತ್ತು ತಿನ್ನುವ ಬಡತನದಿಂದ ವಿದ್ಯಾಭ್ಯಾಸವನ್ನು ಬಿಟ್ಟು ಕೂಲಿ ಕೆಲಸಕ್ಕೊ ಅಥವಾ ವ್ಯಾಪಾರವನ್ನು ಮಾಡಿಕೊಂಡಿರುತ್ತಿದ್ದರೆ ಇವತ್ತು ಅವರ ಹೆಸರು ಭಾರತೀಯರ ಮನದಲ್ಲಿ ಅಜರಾಮರವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ತಾನು ನನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿದ್ದರಿಂದ ವಿಜ್ಞಾನಿಯಾಗಿ ಹೊರಹೊಮ್ಮಿದರು. ಅದಕ್ಕೇ ಹೇಳಿದ್ದು ಸಮಸ್ಯೆಗಳೇ ಸಾಧನೆಯ ಮೊದಲ ಮೆಟ್ಟಿಲು ಅಂತ. ಜೀವನವಿಡೀ ಸುಖದಲ್ಲಿದ್ದರೆ ಅದು ನಿಜವಾದ ಜೀವನ ಅಲ್ಲ. ಯಾವಾಗ ಸಮಸ್ಯೆಗಳು ಎದುರಾಗಿ ಅದಕ್ಕೆ ಪರಿಹಾರವನ್ನು ಹುಡುಕಿ ಮುಂದೆ ಸಾಗುತ್ತೇವೆಯೋ ಅದು ನಿಜವಾದ ಜೀವನವಾಗಿರುತ್ತದೆ.
ಪತ್ರಿಕೋದ್ಯಮ ವಿಭಾಗ, ಎಪಿಎಂ ಸರಕಾರಿ ಕಾಲೇಜು, ಕಾರ್ಕಳ