Advertisement

ಪ್ರತಿ ತಿಂಗಳು ಸಪ್ತಪದಿ ಕಾರ್ಯಕ್ರಮ: ಸಚಿವ ಪೂಜಾರಿ

01:16 PM Mar 27, 2021 | Team Udayavani |

ಮೈಸೂರು: ಪ್ರತಿ ತಿಂಗಳು ನಾಲ್ಕು ಐದು ಮೂಹೂರ್ತದಲ್ಲಿ ಜನರ ಅಪೇಕ್ಷೆಗೆ ಅನುಗುಣವಾದ ದಿನಾಂಕ ದಂದು ಸಪ್ತಪದಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, 6ನೇ ವೇತನಕ್ಕೆಸಂಬಂಧಿಸಿದಂತೆ ಏಪ್ರಿಲ್‌ ಮೊದಲ ವಾರ ಸಭೆ ನಡೆಸಿ ಗೊಂದಲ ಪರಿಹರಿಸಲಾಗುವುದು. ಇನ್ನೂ ಇಎಸ್‌ಐ, ಪಿಎಫ್ ಹಾಗೂ ಪಿಂಚಣಿ ಸೌಲಭ್ಯ ಸೇರಿ ಅರ್ಚಕರು ಹಾಗೂ ಸಿಬ್ಬಂದಿಯ ಸಮಸ್ಯೆ ಕುರಿತು ಎರಡು ತಿಂಗಳಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳೊಂದಿಗೆ ಸಭೆನಡೆಸಿ ನಿರ್ಧರಿಸಲಾಗುವುದು. ಇನ್ನೂ ಕೋವಿಡ್‌ನಿಯಮಾನುಸಾರವೇ ಜಾತ್ರೆ, ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಆರೋಗ್ಯ ಇಲಾಖೆ ನೀಡುವ ಕಡ್ಡಾಯ ಸೂಚನೆಯನ್ನು ಎಲ್ಲಾ ಧಾರ್ಮಿಕ ಇಲಾಖೆಗಳು ಪಾಲಿಸ ಬೇಕಿದೆ. ಕೋವಿಡ್ ಕಡಿಮೆ ಇರುವ ಈ ವೇಳೆಯಲ್ಲಿಅದು ಹೆಚ್ಚಾಗಿ ಹರಡಲು ನಾವು ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ಕೋವಿಡ್‌ ನಿಯಮಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಶೀಲನೆ ಮಾಡಲಾಗಿದೆ. ಸಪ್ತಪದಿ ವಿವಾಹ ವ್ಯವಸ್ಥಿತವಾಗಿ ಆಗಬೇಕೆಂಬುದು ನಮ್ಮ ಆಶಯವಾಗಿದ್ದು,ಚಾಮುಂಡಿ ಬೆಟ್ಟದಲ್ಲಿ 14 ಜೋಡಿ, ನಂಜನಗೂಡಲ್ಲಿ17 ಜೋಡಿಯ ವಿವಾಹವಾಗಿದೆ. ಮುಂದೆ ನಂಜನಗೂಡಲ್ಲಿ ಏ.22, ಮೇ 7 ರಂದು ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ಜೂ.17ಕ್ಕೆ ಸಪ್ತಪದಿ ವಿವಾಹ ನಿಗದಿ ಮಾಡಿದ್ದೇವೆ. ಮೇ 13ಕ್ಕೆ ತಲಕಾಡು ದೇವಾಲಯದಲ್ಲಿ ಸಪ್ತಪದಿ ವಿವಾಹ ನಡೆಯಲಿದೆ. ಹೀಗೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ದೇಗುಲಗಳಲ್ಲಿ ಸಪ್ತಪದಿ, ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ 5ಅಥವಾ 10 ಜೋಡಿಗೆ ಸೀಮಿತವಾಗಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಮಾಂಗಲ್ಯಕ್ಕೆ ಟೆಂಡರ್‌ ಕರೆಯಲು ಸ್ವಲ್ಪ ಸಮಸ್ಯೆಯಾಗಿತ್ತು. ಕಾವೇರಿ ಏಂಪೋರಿಯಂ ಮೂಲಕ ಮಾಂಗಲ್ಯ ಖರೀದಿಸಲು ಸೂಚನೆ ನೀಡಲಾಗಿದೆ. ಮೊನ್ನೆ ಘಾಟಿ ಸುಬ್ರಹ್ಮಣ್ಯದಲ್ಲಿ 48 ಜೋಡಿ ವಿವಾಹ ಆಗಿವೆ. ಕೊಲ್ಲೂರಲ್ಲಿ 25 ಜೋಡಿ ವಿವಾಹವಾಗಿವೆ. ಏದರ್ಜೆ ದೇಗುಲದಲ್ಲಿ ನಿರಂತರವಾಗಿ ನಡೆಯು ತ್ತಿವೆ. ನೂರಕ್ಕೂ ಹೆಚ್ಚು ದೇವಾಲಯದಲ್ಲಿ ಕಾರ್ಯಕ್ರಮ ನಡೆ ಯುತ್ತಿರುವುದು ಹೆಚ್ಚು ಜನರಿಗೆ ಅನೂಕೂಲವಾಗಿದೆ ಎಂದು ಹೇಳಿದರು.

Advertisement

ಏ.9ರಂದು ರಾಜ್ಯ ಧಾರ್ಮಿಕ ಪರಿಷತ್‌ನ ಸಭೆಯನ್ನು ವಿಧಾನಸಭೆಯಲ್ಲಿ ಕರೆಯಲಾಗುವುದು. 6ನೇ ವೇತನದ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಹೊಸ ವ್ಯವಸ್ಥಾಪನ ಸಮಿತಿ ರಚಿಸುವ ಚಿಂತನೆ ಇದ್ದು, ಶೀಘ್ರವೇ ಅದನ್ನು ಮಾಡಲಾಗುವುದು. 30 ಜಿಲ್ಲೆಯ 30 ಧಾರ್ಮಿಕ ಪರಿಷತ್ತಿನ ಸಹ ಅನುಭವಿಗಳ ತಂಡವನ್ನು ರಚಿಸಲಾಗುವುದು. ಎ ದರ್ಜೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಬಿ ಹಾಗೂ ಸಿ ದರ್ಜೆ ದೇವಾಲಯದ ವ್ಯವಸ್ಥಾಪನಾಸಮಿತಿ ರಚಿಸುವ ಕಾರ್ಯವೂ ನಡೆಯುತ್ತಿದೆ. ಸಾವಿರಾರು ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆತರಬೇತಿ ಕೊಡುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ಅರ್ಚಕರಿಗೆ ಜೀವವಿಮೆ, ಆರೋಗ್ಯ ವಿಮೆ ಹಾಗೂ ಪೆನÒನ್‌ ಸಂಬಂಧಿಸಿದಂತೆ ಈಗಾಗಲೇಎರಡು ಮೂರು ಸಭೆ ನಡೆಸಿದ್ದು, ಇನ್ನೂ ಮೂರುತಿಂಗಳಲ್ಲಿ ಒಂದು ನಿರ್ಣಯ ಮಾಡಲಾಗುವುದು.ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 2400ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳಿವೆ. ಕೋವಿಡ್‌ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿತೆಗೆದುಕೊಂಡಿಲ್ಲ. ಒಂದೆರಡು ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಪ್ರಕರಣ ಕಂಡಿದ್ದು, ಅದನ್ನು ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಅತ್ಯಂತ ಪಾರದರ್ಶಕವಾಗಿ ವ್ಯವಸ್ಥೆ ನಡೆಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಮಟ್ಟದ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next