ಉಡುಪಿ: ವಾರದಲ್ಲೊಂದು ದಿನ ಸಮೂಹ ಸಾರಿಗೆಯಲ್ಲಿ ಪ್ರಯಾಣಿ ಸುವ ನಿರ್ಧಾರ ತೆಗೆದುಕೊಂಡು ಮಾದರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪರಿಸರಸ್ನೇಹಿ ಉಪಕ್ರಮಗಳಲ್ಲಿ ಇನ್ನೊಂದು ಹೆಜ್ಜೆ ಇರಿಸಿದ್ದಾರೆ. ಪ್ರತಿ ಸೋಮವಾರ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಎಸಿ ಉಪಯೋಗಿಸದೆ ಕೆಲಸ ಮಾಡುವುದು ಅವರ ಹೊಸ ನಿರ್ಧಾರ.
ಈ ವರ್ಷದ ವಿಶ್ವ ಪರಿಸರ ದಿನಾಚರಣೆಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಇದನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವುದಕ್ಕಾಗಿ ಪ್ರತಿ ಸೋಮವಾರ ಎಲ್ಲ ಸರಕಾರಿ ಕಚೇರಿಗಳಲ್ಲಿ ಎಸಿ ಬಳಸದಿರಲು ಅಧಿಕಾರಿಗಳು ಒಮ್ಮತ ಸೂಚಿಸಿದ್ದಾರೆ. ವಿದ್ಯುತ್ ಉಳಿತಾಯ, ವಾಯುಮಾಲಿನ್ಯ ನಿಯಂತ್ರಣ, ತಾಪಮಾನ ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಇದು ಕಿರು ಪ್ರಯತ್ನ ಎಂದು ಜಿಲ್ಲಾಧಿಕಾರಿ ಹೇಚಳಿದ್ದಾರೆ.
ಪ್ರತೀ ಗುರುವಾರ ಸಮೂಹ ಸಾರಿಗೆಯನ್ನು ಉಪಯೋಗಿಸುವ ಜಿಲ್ಲಾಡಳಿತದ ಮಾದರಿಯನ್ನು ಇತರ ಖಾಸಗಿ ಸಂಸ್ಥೆಗಳು ಕೂಡ ಅನುಸರಿಸುವ ಮೂಲಕ ಪರಿಸರ ಸಂರಕ್ಷಣೆ ಕೊಡುಗೆ ನೀಡಬಹುದು ಎಂದು ಹೆಪ್ಸಿಬಾ ರಾಣಿ
ಕೊರ್ಲಪಾಟಿ ತಿಳಿಸಿದ್ದಾರೆ.