ಹೊಸದಿಲ್ಲಿ: ಭಾರತವೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಲಸಿಕೆ ಉತ್ಪಾದನೆಯು ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ ಎಲ್ಲಾ ಪ್ರಜೆಗಳಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ವಿಪಕ್ಷಗಳ ವಿರುದ್ದ ಕಿಡಿಕಾರಿದ ಕೇಂದ್ರ ಸಚಿವರು, ಕೋವಿಡ್ ವಿರುದ್ಧದ ಲಸಿಕಾ ಕಾರ್ಯವನ್ನು ವಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದರು. ತಮ್ಮ ರಾಜಕೀಯ ಲಾಭಕ್ಕಾಗಿ ಲಸಿಕೆ ವಿರುದ್ಧ ಮಾತನಾಡಿ, ದೇಶದ ಗೌರವಕ್ಕೆ ಕುಂದು ತರುವ ಕೆಲಸ ಮಾಡಿದ್ದರು. ಆದರೆ ಇದೀಗ ಅವರುಗಳೇ ಲಸಿಕೆಗಾಗಿ ಸಾಲು ನಿಂತಿದ್ದಾರೆ ಎಂದರು.
ಇದನ್ನೂ ಓದಿ:ಬಂತು ನೋಡಿ ಆಕಾಶದಲ್ಲಿ ಹಾರಾಡುವ ವಿದ್ಯುತ್ ಚಾಲಿತ ಕಾರು
ಕೋವಿಡ್ ಲಸಿಕೆಯ ಉತ್ಪಾದನೆಯ ವೇಗ ಹೆಚ್ಚಿಸಲು ನಾವು ಸತತವಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನೂ ಡಿಸೆಂಬರ್ ವೇಳೆಗೆ ಕೋವಿಡ್ ಲಸಿಕೆ ಪಡೆದಿರಬೇಕು ಎನ್ನುವುದು ನಮ್ಮ ಗುರಿ. ಇದೊಂದು ದೊಡ್ಡ ದಾಖಲೆಯಾಗಲಿದೆ ಎಂದರು.
ಇದೇ ಮೊದಲ ಬಾರಿಗೆ ಭಾರತ ಸ್ವತಃ ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ. ಹಿಂದೆಲ್ಲಾ ಲಸಿಕೆಗಳು ಭಾರತಕ್ಕೆ ಬರಬೇಕಾದರೆ ವರ್ಷಗಳಷ್ಟು ಕಾಯಬೇಕಾಗಿತ್ತು ಎಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.