Advertisement
ಬೇಸಗೆಯಲ್ಲಿ ಇಲ್ಲಿನ ಗಾರ್ಡನ್‌ಗಳಿಗೆ ಹೆಚ್ಚಿನ ನೀರಿನ ಆವಶ್ಯಕತೆ ಇರು ತ್ತದೆ. ಜತೆಗೆ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ವಾತಾವರಣವನ್ನು ತಂಪಾಗಿಸಲು ಹೆಚ್ಚಿನ ನೀರು ಬೇಕಾಗು ತ್ತದೆ. ಪ್ರವಾಸಿಗರಿಗೆ ಕುಡಿಯು ವುದಕ್ಕೂ ನೀರು ಬೇಕಾಗುತ್ತದೆ. ಇವೆಲ್ಲ ವನ್ನೂ ಹೊಂದಿಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ಮೂಲಗಳಿಂದ ನೀರನ್ನು ಬಳಸಿಕೊಳ್ಳಲಾಗುತ್ತಿದೆ.
ಪಿಲಿಕುಳಕ್ಕೆ ಪ್ರಮುಖ ನೀರಿನ ಮೂಲವೇ ಗುರುಪುರ ನದಿ. ಗುರುಪುರದ ಸಮೀಪ ನದಿಯ ಬದಿಯಲ್ಲಿ ಪಿಲಿಕುಳದ ಜಾಗದಲ್ಲೇ ಜಾಕ್‌ವೆಲ್ ನಿರ್ಮಿಸಲಾಗಿದೆ. ಇದರಲ್ಲಿ 60 ಎಚ್‌ಪಿ ಹಾಗೂ 30 ಎಚ್‌ಪಿಗಳ 2 ಪುಂಪ್‌ಗ್ಳ ಮೂಲಕ ನೀರನ್ನು ಎತ್ತಲಾಗುತ್ತದೆ. ಈ ಎರಡು ಪಂಪ್‌ಗ್ಳ ಮೂಲಕ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ತಲಾ ಒಂದು ಲಕ್ಷ ಲೀಟರ್ ನೀರನ್ನು ಎತ್ತಲಾಗುತ್ತದೆ.
ಒಂದು ಲಕ್ಷ ಲೀಟರ್ ನೀರು ಜೈವಿಕ
ಉದ್ಯಾನವನದ ಪ್ರಾಣಿಗಳಿಗೆ ಉಪ ಯೋಗಿಸಲಾಗುತ್ತದೆ. ಜಾಕ್‌ವೆಲ್ ಮೂಲಕ ಎತ್ತಿದ ನೀರನ್ನು ಪ್ರವಾಸಿಗರಿಗೆ
ಕುಡಿಯುವುದಕ್ಕೂಬಳಸುವುದರಿಂದ ಶುದ್ಧೀಕರಿಸಿಯೇ ಉಪಯೋಗಿಸಲಾ ಗುತ್ತದೆ. ಜತೆಗೆ ಇಲ್ಲಿನ ಗಾರ್ಡನ್‌ಗಳಿಗೆ ಹೇರಳವಾಗಿ ನೀರು ಬೇಕಿರುವುದರಿಂದ ಇದಕ್ಕೆ ಪಾಲಿಕೆಯ ಡ್ರೈನೇಜ್ ನೀರನ್ನು ಖಾಸಗಿ ಸಂಸ್ಥೆಯ ಮೂಲಕ ಶುದ್ಧೀಕರಿಸಿ ಬಳಸಲಾಗುತ್ತದೆ. ಪ್ರತಿನಿತ್ಯ ಸುಮಾರು 1.5 ಎಂಎಲ್‌ಡಿ ಶುದ್ಧೀಕರಿಸಿದ ನೀರು ಲಭ್ಯವಾಗುತ್ತದೆ. ಟ್ಯಾಂಕ್‌ಗಳ ಮೂಲಕ ಸಂಗ್ರಹ
ನಿಸರ್ಗಧಾಮದಲ್ಲಿ ಈಗ 5 ಕೊಳವೆಬಾವಿಗಳಿದ್ದು, ಹೆಚ್ಚಾಗಿ ಪ್ರವಾಸಿ ಗರ ಕುಡಿಯುವದಕ್ಕಾಗಿ ಇದನ್ನು ಉಪ ಯೋಗಿಸಲಾಗುತ್ತದೆ. 2 ಲಕ್ಷ ಲೀ. ಹಾಗೂ 1.5 ಲಕ್ಷ ಲೀ. ಸಾಮರ್ಥ್ಯದ 2 ಅಂಡರ್‌ಗ್ರೌಂಡ್ ಟ್ಯಾಂಕ್‌ಗಳ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಜತೆಗೆ ಕಳೆದ ವರ್ಷ 1 ಲಕ್ಷ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಿಸವಾಗಿದೆ.
Related Articles
Advertisement
ಅತಿ ಹೆಚ್ಚಿನ ಪ್ರವಾಸಿಗರುಎಪ್ರಿಲ್-ಮೇ ತಿಂಗಳು ರಜೆಯ ಅವಧಿಯಾದ ಕಾರಣ ಈ ಸಂದರ್ಭ ಪಿಲಿಕುಳಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಈ ತಿಂಗಳುಗಳ ಶನಿವಾರ-ರವಿವಾರ ಹೆಚ್ಚಿನ ಪ್ರವಾಸಿಗರು ಇರುತ್ತಾರೆ. ಎ. 21ರ ಶನಿವಾರ 3 ಸಾವಿರ, ಎ. 22ರ ರವಿವಾರ 5,500 ಪ್ರವಾಸಿಗರು ಆಗಮಿಸಿದ್ದರು. ಎ. 15ರಂದು ರವಿವಾರ ಪ್ರವಾಸಿಗರ ಸಂಖ್ಯೆ 6 ಸಾವಿರ ದಾಟಿತ್ತು. ಈಗ ಪ್ರತಿದಿನ ಸರಾಸರಿ 3 ಸಾವಿರದಷ್ಟು ಪ್ರವಾಸಿಗರು ಆಗಮಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ನೀರಿನ ಸಮಸ್ಯೆ ಇಲ್ಲ
ಈಗ ಪಿಲಿಕುಳದಲ್ಲಿ ಯಾವುದೇ ರೀತಿಯಲ್ಲಿ ನೀರಿನ ತೊಂದರೆ ಇಲ್ಲ. ಎಲ್ಲ ವಿಭಾಗಗಳಿಗೂ ಅನುಕೂಲವಾಗುವಂತೆ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ.
– ವಿ.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಪಿಲಿಕುಳ ನಿಸರ್ಗಧಾಮ – ಕಿರಣ್ ಸರಪಾಡಿ