Advertisement
ವರಿಷ್ಠರ ಸೂಚನೆ ಮೇರೆಗೆ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ ಎಂದು ಸಚಿವ ಈಶ್ವರಪ್ಪ ಅವರು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದು,ಕಾಂಗ್ರೆಸ್ ಬರೀ ಹಿಂದೂ ಮುಸ್ಲಿಂ ಗಲಾಟೆ ನಡೆಸುವ ಪ್ರಯತ್ನ ನಡೆಸುತ್ತಿದೆ. ಆಲ್ ಖೈದಾದವರ ಪರ ಇದ್ದಾರೆ.ನಾನು ಏನು ಸಾಧನೆ ಮಾಡಿದ್ದೇನೆ, ಅದನ್ನ ಜನರ ಮುಂದೆ ಇಡಲು ಸುದ್ದಿ ಗೋಷ್ಠಿ ಮಾಡಿದ್ದೇನೆ ಎಂದರು.
Related Articles
Advertisement
ಮನೆ ಮನೆಗೂ ಗಂಗೆ
ಪ್ರಧಾನಿ ನರೇಂದ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ರಾಜ್ಯದಲ್ಲಿ ಮನೆ ಮನೆಗೂ ಗಂಗೆ ಹೆಸರಲ್ಲಿ ಅನುಷ್ಠಾನಗೊಳ್ಳುತ್ತಿದ್ದು, 20 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕೊಳಾಯಿ ನೀರು ಸರಬರಾಜು ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿ 2020ರಲ್ಲಿ ಮನೆ ಮನೆಗೂ ಗಂಗೆ ಯೋಜನೆಯು ಆರಂಭಿಸಲಾಯಿತು. ಈಗಾಗಲೇ 3,000 ಗ್ರಾಮಗಳಿಗೆ ಶೇಕಡಾ 100ರಷ್ಟು ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 50,000 ಹೆಚ್ಚಿನ ಗ್ರಾಮಗಳಲ್ಲಿ ಮನೆ ಮನೆಗೂ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ₹3,325 ಕೋಟಿ ಹಣವನ್ನು ಮತ್ತು ರಾಜ್ಯದ ಪಾಲಾದ ₹2,323 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.ನೀರು ಪರೀಕ್ಷೆಗಾಗಿ 31 ಜಿಲ್ಲೆಗಳ 46 ತಾಲ್ಲೂಕಿನಲ್ಲಿ ಲ್ಯಾಬೋರೇಟರಿ ಸ್ಥಾಪಿಸಲಾಗಿದೆ. ಈಗಾಗಲೇ 18,600 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಯೋಜನೆಯ ಆರಂಭಕ್ಕೆ ಮುನ್ನ ರಾಜ್ಯದಲ್ಲಿ ಶೇಕಡಾ 25ರಷ್ಟು ಮನೆಗಳಿಗೆ ನಲ್ಲಿಯ ನೀರಿನ ಸಂಪರ್ಕವಿತ್ತು. ಈ ಯೋಜನೆಯ ತರುವಾಯ 20,56,650 ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ನೀಡಲಾಗಿದೆ. ಈಗ ರಾಜ್ಯದಲ್ಲಿ ಶೇಕಡಾ 46ರಷ್ಟು ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ಲಭ್ಯವಿದೆ ಎಂದರು.