Advertisement
ದಂಗಲ್ ಸಿನಿಮಾ ನೋಡಿದವರಿಗೆಲ್ಲಾ ಚೆನ್ನಾಗಿ ನೆನಪಿರುತ್ತದೆ: ತಮಗೆ ಯಾರೋ ಹುಡುಗರು ತಮಾಷೆ ಮಾಡಿದರೆಂದು ಅವರಿಗೆ ಆ ಚಿಕ್ಕ ವಯಸ್ಸಿನಲ್ಲೇ ಅಕ್ಕ- ತಂಗಿ (ಗೀತಾ-ಬಬಿತಾ) ಸೇರಿ ಸರಿಯಾಗಿ ಚಚ್ಚುತ್ತಾರೆ. ನಂತರ ನಡೆಯುವ ಕುಸ್ತಿ ಅಖಾಡದಲ್ಲೂ ತನಗಿಂತ ಬಲಿಷ್ಠ ಎಂದು ಗೊತ್ತಿದ್ದರೂ, ಹುಡುಗರೊಂದಿಗೆ ಕುಸ್ತಿಯಾಡಿ, ಅವರಿಗೆ ಮಣ್ಣು ಮುಕ್ಕಿಸಿ, ಧೂಳು ತುಂಬಿಕೊಂಡ ಕೈಯನ್ನು ಕೊಡವಿಕೊಂಡು ಗೀತಾ ಎದ್ದು ಬರುತ್ತಿದ್ದರೆ ಸುತ್ತಲೂ ಚಪ್ಪಾಳೆಯ ಸುರಿಮಳೆ. ಸಿನಿಮಾ ಮುಗಿಯುವವರೆಗೂ ಈ ಗಟ್ಟಿಗಿತ್ತಿಯರ ಸಾಹಸ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ. ಸಿನಿಮಾದಲ್ಲಿ ಕುಸ್ತಿಯ ಸನ್ನಿವೇಶಗಳನ್ನು ಉಸಿರು ಬಿಗಿಹಿಡಿದು ವೀಕ್ಷಿಸಿದ್ದ ಸಿನಿಪ್ರಿಯರು, ಅಬ್ಟಾ, ಧೈರ್ಯ ಅಂದ್ರೆ ಹೀಗಿಬೇìಕು ಅಂತ ಹೇಳಿಕೊಂಡು ಹೊರಬರುತ್ತಾರೆ.
Related Articles
Advertisement
ಇದು ಝೈರಾ ಒಬ್ಬಳ ಸ್ಥಿತಿಯಲ್ಲ. ಈಕೆಯೇನೋ ಸಿನಿಮಾ ನಟಿಯಷ್ಟೆ. ಆದರೆ, ನಿಜ ಜೀವನದಲ್ಲೇ ಕುಸ್ತಿಪಟುಗಳೂ, ಕ್ರೀಡಾಳುಗಳೂ ಆದವರೇ ತಮ್ಮ ಮೇಲೆ ದೌರ್ಜನ್ಯವಾದಾಗ ತುಟಿಪಿಟಿಕ್ಕೆನ್ನದೆ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಸುಮ್ಮನಾಗಿದ್ದಿದೆ. ಈ ಪಟ್ಟಿಯಲ್ಲಿ ಮಹಿಳಾ ಹಾಕಿ ತಂಡದ ಸದಸ್ಯರು, ಜಿಮ್ನಾ…ಗಳು, ಸೆಲೆಬ್ರಿಟಿಗಳಾದ ಕಲ್ಕಿ ಕೊಚಿನ್, ಟ್ವಿಂಕಲ… ಖನ್ನಾ, ಸೋಫಿಯಾ ಹಯಾತ್, ಸೋಮಿ ಅಲಿ, ಲೇಡಿ ಗಾಗಾ, ವಿಶ್ವ ಪ್ರಸಿದ್ಧ ಸಿತಾರ್ ವಾದಕಿ ಅನೌಷ್ಕಾ ಶಂಕರ್ ಕೂಡ ಸೇರುತ್ತಾರೆ. ಇವರ ಪಾಡೇ ಹಿಂಗಾದರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿಯಂತೂ ಕೇಳುವುದೇ ಬೇಡ. ಬಸ್ಸು, ಆಟೋ, ರೈಲು, ಶಾಲೆ, ಕಚೇರಿ, ರಸ್ತೆ… ಎಲ್ಲೆಲ್ಲೂ ಮೈಕೈ ಮುಟ್ಟುವವರು, ಅಸಹ್ಯವಾಗಿ ವರ್ತಿಸುವವರು, ಕಿರುಕುಳ ನೀಡುವವರು ಇರುತ್ತಾರೆ. ಅಷ್ಟೇ ಏಕೆ, ಮನೆಗಳೂ ಈಗ ಸುರಕ್ಷಿತವಲ್ಲ ಎಂಬಂಥ ಸ್ಥಿತಿಯಿದೆ. ಕ್ಷಣಕ್ಷಣದ ಇಂಥ ಎಲ್ಲ ಅಡ್ಡಿ, ಆತಂಕಗಳನ್ನೂ ಎದುರಿಸುತ್ತಾ, ಸಮಾಜದ ಕೊಂಕು ನುಡಿಗಳನ್ನು ಆಲಿಸುತ್ತಾ ಬದುಕಬೇಕಾದಂಥ ಹೀನಾಯ ಪರಿಸ್ಥಿತಿ ಮಹಿಳೆಯರದ್ದು.
ಲೈಂಗಿಕ ಕಿರುಕುಳ ಎನ್ನುವುದು ಹೆಣ್ಣಿನ ಘನತೆ ಹಾಗೂ ವ್ಯಕ್ತಿತ್ವಕ್ಕಾಗುವ ಭೀಕರ ಗಾಯ. ಅದನ್ನು ಅಷ್ಟು ಸುಲಭದಲ್ಲಿ ವಾಸಿಮಾಡಲು ಸಾಧ್ಯವಿಲ್ಲ. ಆಕೆಗೆ ಎಲ್ಲ ರೀತಿಯಿಂದಲೂ ಸಾಂತ್ವನ ಹೇಳಬೇಕಾದ್ದು ಸಮಾಜದ ಕರ್ತವ್ಯ. ಆದರೆ, ನಾವೀಗ ಸೂಕ್ಷ್ಮತೆ ಕಳೆದುಕೊಂಡ ಸಮಾಜದಲ್ಲಿ ಬದುಕುತ್ತಿದ್ದೇವೆ. ದೈಹಿಕವಾಗಿ, ಮಾನಸಿಕವಾಗಿ ನೋವುಂಡ ಸಂತ್ರಸ್ತೆಯರಲ್ಲಿ ಆತ್ಮವಿಶ್ವಾಸ ತುಂಬಿ, ಅವರು ಆತ್ಮಗೌರವದಿಂದ ಬದುಕಲು ಪ್ರೇರಣೆ ನೀಡುವ ಬದಲಿಗೆ, ಆಕೆ ತನಗಾದ ದೌರ್ಜನ್ಯವನ್ನು ಬಹಿರಂಗಪಡಿಸುವ ಧೈರ್ಯ ತೋರಿದರೂ, ಸಮಾಜವು ಆಕೆಗಾದ ಅನ್ಯಾಯದ ಬಗ್ಗೆ ಮಾತಾಡುವುದಿಲ್ಲ, ಬದಲಿಗೆ ಅವಳನ್ನೇ ಪ್ರಶ್ನಿಸುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ…ಗೆ ಗುರಿ ಮಾಡಲಾಗುತ್ತದೆ. ಒಂದು ಹೆಣ್ಣಿಗೆ ಅನ್ಯಾಯವಾಗಿದೆ ಎಂದು ತಿಳಿದ ನಂತರವೂ, ಇದೆಲ್ಲಾ ಹುಡುಗಿಯ ತಪ್ಪಿಂದಲೇ ಆಗಿರುವುದು, ಎಲ್ಲವೂ ಪ್ರಚಾರ ಗಿಟ್ಟಿಸುವ ತಂತ್ರವೆಂದೋ ಹಳಿಯಲಾಗುತ್ತದೆ. ಹಾಗಾಗಿ, ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುವುದೂ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೆಣ್ಣಾಗಿ ಎಲ್ಲವನ್ನು ಎದುರಿಸಿ ಬಾಳುವುದು ಸುಲಭವಲ್ಲ. ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಯಾವುದೇ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗದ ಹೆಣ್ಣನ್ನು ಹುಡುಕುವುದೆಂದರೆ, ಸಾವಿಲ್ಲದ ಮನೆಯ ಸಾಸಿವೆ ತಂದಂತೆ. ಪರಿಸ್ಥಿತಿ ಹೀಗಿರುವಾಗ, ಎಲ್ಲವನ್ನು ಎದುರಿಸಿ ನಮಗೆ ನಾವೇ ಶಕ್ತಿಯಾಗಬೇಕು. ಅಸಹಾಯಕಳಾಗಿ ತಲೆತಗ್ಗಿಸುವುದನ್ನು, ಕಣ್ಣೀರಿಡುವುದನ್ನು ಬಿಟ್ಟು ಮುಷ್ಟಿ ಬಿಗಿ ಹಿಡಿದು ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಬೇಕು. ಹೀಗೆಲ್ಲಾ ಅಂದುಕೊಂಡಾಗಲೇ ಮಾರ್ಟಿನ್ ಲೂಥರ್ ಕಿಂಗ್ ಮಾತು ನೆನಪಾಗುತ್ತದೆ- ‘The time is always right to do what is right’
ಮೇರಿ ಕೋಂ ಕೂಡ ಹೊರತಾಗಿಲ್ಲ…ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟ ಬಾಕ್ಸರ್ ಮೇರಿ ಕೋಂ ಕೂಡ ತಮ್ಮ 17ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದರಂತೆ. ಹೀಗಂತ ಸ್ವತಃ ಅವರೇ ಕಳೆದ ವರ್ಷ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ತಾವು 2 ಬಾರಿ ಕಿರುಕುಳ ಅನುಭವಿಸಿರುವುದರ ಕುರಿತು ಬರೆದಿರುವ ಅವರು, ಹೆಣ್ಣು ಮಕ್ಕಳ ಬಗ್ಗೆ ಸಂವೇದನೆ ಇಟ್ಟುಕೊಳ್ಳುವಂತೆ, ಅವರನ್ನು ಗೌರವಿಸುವಂತೆ ತಮ್ಮ ಮಕ್ಕಳಿಗೆ ಬರೆದ ಪತ್ರವೊಂದು ವೈರಲ… ಕೂಡ ಆಗಿತ್ತು. ಮಧ್ಯರಾತ್ರೀಲಿ ಮೆರಿನ್ ನಿಂತಾಗ…
ಕೇರಳದ ಕಲ್ಲಿಕೋಟೆಯ ಡಿಸಿಪಿ ಆಗಿರುವ ಮೆರಿನ್ ಜೋಸೆಫ್ ಇತ್ತೀಚೆಗೊಂದು ವಿಭಿನ್ನ ಟಾÓR… ಕೈಗೆತ್ತಿಕೊಂಡಿದ್ದರು. ನಗರದ ರಸ್ತೆಗಳು ರಾತ್ರಿ ವೇಳೆ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬುದನ್ನು ಅರಿಯಬೇಕು ಎಂಬ ಯೋಚನೆ ಅವರ ತಲೆ ಹೊಕ್ಕಿತ್ತು. ಯೂನಿಫಾರಂ ಬದಿಗಿಟ್ಟು, ಸಿವಿಲ… ಡ್ರೆಸ್ ಧರಿಸಿ ಇನ್ನಿಬ್ಬರು ಮಹಿಳಾ ಪೇದೆಗಳೊಂದಿಗೆ ರಸ್ತೆಗಿಳಿದೇ ಬಿಟ್ಟರು ಮೆರಿನ್ ಜೋಸೆಫ್. ಕಗ್ಗತ್ತಲಲ್ಲಿ ಮೂವರು ಮಹಿಳೆಯರು ನಡೆದುಹೋಗುತ್ತಿದ್ದರೆ, ರೋಡ್ ರೋಮಿಯೋಗಳು ವಿಶಲ… ಹಾಕುವುದು, ಬಾಯಿ ಮಾತಲ್ಲೇ ಅಸಭ್ಯ ಕಮೆಂಟ್‌ಗಳನ್ನು ಎಸೆಯುವುದು, ಇನ್ನು ಕೆಲವರು ವಿಚಿತ್ರವಾಗಿ ನೋಡುವುದು ಮುಂತಾದವುಗಳು ಅನುಭವಕ್ಕೆ ಬಂದವು. ಪೊಲೀಸ್ ಸಮವಸ್ತ್ರದಲ್ಲಿ ಹೋಗುವುದಕ್ಕೂ, ಜನಸಾಮಾನ್ಯರಂತೆ ಉಡುಪು ಧರಿಸಿ ಹೋಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದು ಅಂದು ನನ್ನ ಅರಿವಿಗೆ ಬಂತು ಎನ್ನುತ್ತಾರೆ ಮೆರಿನ್. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರೂ ಇತ್ತೀಚೆಗೆ ಇದೇ ರೀತಿ ರಾತ್ರಿ ಹೊತ್ತು ಸ್ಕೂಟರ್‌ನಲ್ಲಿ ಚೂಡಿದಾರ್ ಧರಿಸಿ ಓಡಾಡಿದ್ದರು. ಪುದುಚೇರಿ ಮಹಿಳೆಯರಿಗೆ ಎಷ್ಟು ಸೇಫ್ ಎಂದು ಪರೀಕ್ಷಿಸಲೆಂದು ಅವರು ವೇಷ ಮರೆಸಿ ಹೋಗಿದ್ದರು. ಪುಣ್ಯಕ್ಕೆ ಅವರಿಗೆ ರೋಡ್ ರೋಮಿಯೋಗಳು ಎದುರಾಗಲಿಲ್ಲ. ಹಾಗಾಗಿ, ಪುದುಚೇರಿ ಸ್ವಲ್ಪ$ಮಟ್ಟಿಗೆ ಸೇಫ್ ಆಗಿಯೇ ಇದೆ ಎಂದಿದ್ದರು ಬೇಡಿ. ಹಲೀಮತ್ ಸ ಅದಿಯಾ