ರಷ್ಯಾ : ಚಿಂಪಾಂಜಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಇಂಟರ್ನೆಟ್ ಮಂದಿ ಬೆಚ್ಚಿಬಿದ್ದಿದ್ದಾರೆ!
ವಿಸ್ಮಯಕಾರಿ ವಿಷಯವೆಂದರೆ ಈ ಕ್ಲಿಪ್ ಇದುವರೆಗೆ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಮತ್ತು 2 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್ ನಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದಿದೆ.
ವಾಸ್ತವವಾಗಿ, ಈ ವಿಡಿಯೋದಲ್ಲಿ ಚಿಂಪಾಂಜಿಯು ಪಿಜ್ಜಾ ಡೆಲಿವರಿ ಮಹಿಳೆಯಿಂದ ಪಿಜ್ಜಾ ತೆಗೆದುಕೊಳ್ಳುವುದು ಪ್ರತಿಯಾಗಿ ಮಹಿಳೆಗೆ ಹಣ ಪಾವತಿಸುವುದನ್ನು ಕಾಣಬಹುದು. ಬಹುಶಃ ಈ ಅಪರೂಪದ ದೃಶ್ಯವನ್ನು ನೋಡಿದ ಜನರು ಆಶ್ಚರ್ಯ ಪಡಲು ಇದೇ ಕಾರಣವಾಗಿರಬಹುದು.
ವೀಡಿಯೊದಲ್ಲಿ, ಪಿಜ್ಜಾ ಡೆಲಿವರಿಗೆ ಬಂದ ಮಹಿಳೆ ಮನೆಯ ಬಾಗಿಲು ಬಡಿಯುತ್ತಿದ್ದಂತೆ ಟಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುವ ಚಿಂಪಾಂಜಿ ಬಾಗಿಲು ತೆರೆದು ಹೊರ ಬಂದಿದೆ, ಈ ವೇಳೆ ಮಹಿಳೆ ಗಾಬರಿಗೊಂಡಿದ್ದಾರೆ ಆದರೆ ಚಿಂಪಾಂಜಿ ಮಾತ್ರ ಮನುಷ್ಯರಂತೆ ಮಹಿಳೆಗೆ ದುಡ್ಡು ನೀಡಿ ಪಿಜ್ಜಾ ಬಾಕ್ಸ್ ಮಹಿಳೆಯ ಕೈಯಿಂದ ಪಡೆದು ಮನೆಯೊಳಗೆ ಹೋಗುವ ದೃಶ್ಯ ಕಂಡುಬಂದಿದೆ.
ಇದು ನಿಜಕ್ಕೂ ಆಶ್ಚರ್ಯವಾದರೂ ವಿಡಿಯೋದಲ್ಲಿ ಕಂಡಿರುವುದು ಮಾತ್ರ ಸತ್ಯ, ಟ್ವಿಟರ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು. ರಷ್ಯಾದಲ್ಲಿ ಪಿಜ್ಜಾಕ್ಕೆ ಹಣ ಪಾವತಿಸಿದ ಚಿಂಪಾಂಜಿ… ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕ ಮಂದಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಕೆಲವರು ವಾಸ್ತವವಾಗಿ ಇವರು ನಮ್ಮ ಪೂರ್ವಜರು ಎಂದು ಕೆಲವರು ಬರೆದಿದ್ದಾರೆ. ಅಲ್ಲದೆ ಕೆಲವರು ಚಿಂಪಾಂಜಿಗಳಿಗೆ ಇಷ್ಟೊಂದು ಬುದ್ಧಿ ಇರುವುದಿಲ್ಲ ಇದು ಸುಳ್ಳು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ : ಹೊಸಪೇಟೆ: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಘೋಷಣೆ: ಸಂಭ್ರಾಮಚಾರಣೆ