Advertisement
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಹಿರಿಯ ಛಾಯಾಗ್ರಾಹಕ ಕೆ.ವೆಂಕಟೇಶ್ ಅವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿರುವ ಕೆ.ಆರ್.ಮಾರುಕಟ್ಟೆ ಮತ್ತು ಸುತ್ತಲ ವಾತಾವರಣದ ಚಿತ್ರಗಳು ರೈತರ ಮತ್ತು ಮಾರಾಟಗಾರರ ದುಡಿಮೆಯ ಬದುಕಿನ ನೂರಾರು ಕಥೆಗಳನ್ನು ತೆರೆದಿಟ್ಟಿವೆ.
Related Articles
Advertisement
ಕಾಲ ಬದಲಾದಂತೆ ರಸ್ತೆಯ ಆಕಾರ, ಗಾತ್ರ ಬದಲಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಹೀಗಾಗಿ ಕೃಷ್ಣರಾಜೇಂದ್ರ ಮಾರುಕಟ್ಟೆಯು ವ್ಯಾಪಾರ ವಹಿವಾಟು ಸೇರಿದಂತೆ ಹಲವು ರೀತಿಯಲ್ಲಿ ಸಾಕಷ್ಟು ಬದಲಾಗಿದೆ. ವ್ಯಾಪಾರ ಸೇರಿದಂತೆ ಹಲವು ವಿಚಾರಗಳಲ್ಲಿ ಗಮನ ಸೆಳೆದಿರುವ ಈ ಮಾರುಕಟ್ಟೆಗೆ ಮೂಲಭೂತ ಸೌಕರ್ಯಕಲ್ಪಿಸುವತ್ತ ಪಾಲಿಕೆ ಮತ್ತು ಸರ್ಕಾರ ಗಮನ ಹರಿಸಬೇಕು ಎಂದರು.
ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು: ಇದೇ ವೇಳೆ ಮಾತನಾಡಿದ ಎಸ್.ಕೃಷ್ಣ, ನಾನು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಐಟಿ-ಬಿಟಿ ಕಂಪನಿಗಳು ಬೆಂಗಳೂರಿನತ್ತ ಮುಖ ಮಾಡಿದವು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹಿರಿಮೆ ಪಡೆದುಕೊಂಡಿದೆ.
ಇದೇ “ಟ್ರೆಂಡ್’ ಎಷ್ಟು ದಿನ ಇರುತ್ತೆ?. ಹೀಗಾಗಿ ಇದನ್ನು ಮತ್ತಷ್ಟು ಬೆಳಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದರು. ಸರ್ಕಾರಕ್ಕೆ ಒಂದು ಮಿತಿ ಇರುತ್ತದೆ. ಅದನ್ನು ಮೀರಿ ಎನನ್ನೂ ಮಾಡಲಾಗದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಬಂಡವಾಳದಾರರು ನಗರವನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕು.
ಬೆಂಗಳೂರು ಮೆಟ್ರೊ ಬಗ್ಗೆ ನಾನು ಕಾಳಜಿ ತೋರಿದೆ. ಹೀಗಾಗಿ ಶ್ರೀಧರನ್ ಅವರನ್ನು ಬೆಂಗಳೂರಿಗೆ ಕರೆತಂದೆ. ಮೆಟ್ರೊ ಬಗ್ಗೆ ಶ್ರೀಧರನ್ ಅವರು ಸಾಕಷ್ಟು ಮುತವರ್ಜಿ ತೋರಿದರು. ಬೆಂಗಳೂರು ಮತ್ತಷುc ಬೆಳೆಯುತ್ತಿದ್ದು, ಮೂಲ ಸೌಕರ್ಯ ಕಲ್ಪಿಸುವತ್ತ ಗಮನ ಹರಿಸಬೇಕು ಎಂದರು. ಈ ವೇಳೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ವೇಳೆ ಸತತ ಹದಿನೈದು ದಿನಗಳ ಕಾಲ, ನಗರದ ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಮೇಲೆ ಕುಳಿತು ಈ ಫೋಟೋಗಳನ್ನು ಸೆರೆಹಿಡಿದೆ. ಕತ್ತಲಿನಲ್ಲಿ ವಾಹನಗಳು ಹೊಮ್ಮಿಸುವ ಬೆಳಕಿನಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದೇ ಮನಸ್ಸಿಗೆ ಹಿತ.-ಕೆ.ವೆಂಕಟೇಶ್,ಛಾಯಾಗ್ರಾಹಕ