Advertisement

ವಾಜಪೇಯಿಯೇ ಬೆಂಬಲ ಕೊಟ್ಟರೂ ಅಪ್ಪ ನಿರಾಕರಿಸಿದರು

06:15 AM May 26, 2018 | Team Udayavani |

ಬೆಂಗಳೂರು: 40 ವರ್ಷಕ್ಕೂ ಹೆಚ್ಚು ವರ್ಷ ರಾಜಕೀಯ ಮಾಡಿದ ದೇವೇಗೌಡರು ಅಧಿಕಾರ ನೋಡಿದ್ದು ನಾಲ್ಕೈದು
ವರ್ಷ ಮಾತ್ರ. ಕಾಂಗ್ರೆಸ್‌ ಬೆಂಬಲ ಪಡೆದು ಅವರು ಪ್ರಧಾನಿಯಾದರು. ನಂತರ, ಕಾಂಗ್ರೆಸ್‌ನವರು ಬೆಂಬಲ ವಾಪಸ್‌ ಪಡೆದರು. ಆ ಸಂದರ್ಭದಲ್ಲಿ ವಾಜಪೇಯಿಯವರು ಚೀಟಿ ಕಳುಹಿಸಿ ಸರ್ಕಾರಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ ಎಂದು ಹೇಳಿದ್ದರು.

Advertisement

ಆದರೆ, ದೇವೇಗೌಡರು ಅದನ್ನು ನಿರಾಕರಿಸಿ ಜಾತ್ಯತೀತ ಸಿದ್ಧಾಂತ ಎತ್ತಿ ಹಿಡಿದರು. ಅಧಿಕಾರದ ಆಸೆಗಾಗಿ ನಾನು ಈ ಮೈತ್ರಿಯನ್ನು ಒಪ್ಪಿಕೊಂಡಿದ್ದಲ್ಲ. ನನ್ನ ಪಕ್ಷ, ರಾಜಕೀಯ ಭವಿಷ್ಯ ಯೋಚಿಸಿ ಈ ನಿರ್ಧಾರ ಕೈಗೊಳ್ಳಬೇಕಾಯಿತು.

ಅದಕ್ಕೆ ಮುಂಚೆ ದೇವೇಗೌಡರು, ನಾನು ಬಿಜೆಪಿ ಜತೆ ಹೋದರೆ ಕುಟುಂಬದಿಂದ ಬಹಿಷ್ಕಾರ ಹಾಕುವುದಾಗಿ
ಹೇಳಿದ್ದರು. ಹಿಂದೆ ಬಿಜೆಪಿ ಜತೆ ಸೇರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಏನೆಲ್ಲಾ ನೋವು ಅನುಭವಿಸಿದ್ದೇನೆ ಎಂಬುದು ನನಗೊಬ್ಬನಿಗೇ ಗೊತ್ತು. ಎರಡೇ ತಿಂಗಳಲ್ಲಿ ವಿಧಾನ ಪರಿಷತ್‌ ಸದಸ್ಯರೊಬ್ಬರು ನಾನು 150 ಕೋಟಿ ರೂ. ಗಣಿ ಇಲಾಖೆ ಹಣ ನುಂಗಿಹಾಕಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಯಾಗಿ ಸಚಿವರೊಬ್ಬರನ್ನು ಸಾಯಿಸಲು ಸುಪಾರಿ ಕೊಟ್ಟೆ ಎಂದು ನನ್ನ ವಿರುದ್ಧ ಎಫ್ಐಆರ್‌ ದಾಖಲಿಸಿದರು. ನಂತರ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲಿಲ್ಲ ಎಂದು ನನ್ನ ಮೇಲೆ ವಚನಭ್ರಷ್ಟ, ನಂಬಿಕೆ ದ್ರೋಹಿ ಎಂಬ ಆಪಾದನೆ ಹೊರಿಸಿದರು.

ಆದರೆ, ಅದು ನಾನು ಮಾಡಿದ ತಪ್ಪಲ್ಲ. 2006ರಲ್ಲಿ ಮೈತ್ರಿ ಮಾಡಿಕೊಳ್ಳುವಾಗ ನನಗೂ, ಯಡಿಯೂರಪ್ಪ
ಅವರಿಗೂ ಒಪ್ಪಂದ ಆಗಿತ್ತೇ ಹೊರತು ಬಿಜೆಪಿ ಜತೆ ಒಪ್ಪಂದ ಆಗಿರಲಿಲ್ಲ. ಹೇಳಿದ ಮಾತಿನಂತೆ ಯಡಿಯೂರಪ್ಪಗೆ ಅಧಿಕಾರ ಬಿಟ್ಟುಕೊಟ್ಟೆ. ಒಂಬತ್ತು ದಿನ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅದರ ಮಧ್ಯೆ ಕೇಂದ್ರದ ಬಿಜೆಪಿ ನಾಯಕರು ಬಂದು ದೇವೇಗೌಡರ ಜತೆ ಕುಳಿತು ಚರ್ಚಿಸಿದರು. 

Advertisement

ಒಪ್ಪಂದ ಮಾಡಿಕೊಳ್ಳಬೇಕು ಎಂದಾಗ ದೇವೇಗೌಡರು ಷರತ್ತುಗಳನ್ನು ಮುಂದಿಟ್ಟು ಸಹಿ ಹಾಕುವಂತೆ ಹೇಳಿದರು. ಆಗ ನಾನು, ನೀವೀಗ ಸಹಿ ಹಾಕಿ. ಸರ್ಕಾರ ರಚನೆ ನಂತರ ಅದನ್ನು ಕಸದ ಬುಟ್ಟಿಗೆ ಎಸೆದರೆ ಆಯಿತು ಎಂದು ಯಡಿಯೂರಪ್ಪಗೆ ಹೇಳಿದೆ. ಆದರೆ, ನಂತರ ನಡೆದದ್ದೇ ಬೇರೆ. ಅಂದು ನಾನು ಬಿಜೆಪಿ ಜತೆ ಸೇರಿ ಸರ್ಕಾರ ಮಾಡದೇ ಇದ್ದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಾಗಿಲು ತೆರೆಯುತ್ತಿತ್ತೇ? 2008ರಲ್ಲಿ ಬಿಜೆಪಿ ಸರ್ಕಾರ ರಚಿಸುತ್ತಿತ್ತೇ?
ರೈತರು, ಕೊಳಗೇರಿ ನಿವಾಸಿಗಳು, ದೀನ ದಲಿತರಿಗೆ ನ್ಯಾಯ ಒದಗಿಸಲು, ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವ ಅವಕಾಶ ಸಿಕ್ಕಿದರೂ ಜೆಡಿಎಸ್‌-ಕಾಂಗ್ರೆಸ್‌ನವರು ಬಿಡಲಿಲ್ಲ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಹೇಳಿದ್ದರು. ಯಡಿಯೂರಪ್ಪ ನವರೇ, 2008ರಲ್ಲಿ
ಜನ ಅಧಿಕಾರ ಕೊಟ್ಟರಲ್ಲಾ, ಆಗೇನು ಮಾಡಿದಿರಿ? 2006ರಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು
ಹೇಳಿದಾಗ ಅದು ಆಗುವುದಿಲ್ಲ ಎಂದಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next