Advertisement

ಕೇಂದ್ರದಲ್ಲಿ ಮೈತ್ರಿಗೆ 300 ಸ್ಥಾನ ಗ್ಯಾರಂಟಿ

07:57 AM Mar 27, 2019 | Vishnu Das |

ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ದೇಶದ ಎಲ್ಲ ರೈತರ ಸಾಲಮನ್ನಾ ಹಾಗೂ ಶಾಸನಸಭೆ ಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸ ಲಾತಿ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ವಿಭಾಗ ಟ್ವೀಟಿಗರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಾದದ ಸಾರಾಂಶ ಇಂತಿದೆ.

Advertisement

ಲೋಕಸಭಾ ಚುನಾವಣೆ ಹೇಗಿದೆ?
ವಿಧಾನಸಭೆ ಚುನಾವಣೆಯಾದ ಮೇಲೆ ಯಾವ ಪಕ್ಷಕ್ಕೂ ಬಹುಮತ ಬಾರದ ಹಿನ್ನೆಲೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಇಬ್ಬರೂ ಸೀಟು ಹಂಚಿಕೆ ಮಾಡಿಕೊಂಡು ಆತ್ಮವಿ ಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ.

ಮೈತ್ರಿಯಲ್ಲಿ ಅಸಮಾಧಾನವಿದೆಯಲ್ಲಾ… ಹೇಗೆ ನಿಭಾಯಿಸುತ್ತೀರ?
ಎರಡೂ ಕಡೆ ಸ್ವಲ್ಪ ಅಸಮಾಧಾನ ಇರುವುದು ನಿಜ. ಈಗಾಗಲೇ, ನಾನು ಶಮನ ಮಾಡುವ ಪ್ರಯತ್ನ ನಡೆಸಿದ್ದೇನೆ. ಸಮಾಧಾನ ಮಾಡುವ ಶಕ್ತಿಯೂ ನನ್ನಲ್ಲಿದೆ. ಅಸಮಾಧಾನಿತರು ಸಮಾಧಾನಗೊಳ್ಳುತ್ತಾರೆ.

ಮಂಡ್ಯ, ತುಮಕೂರನ್ನು ಜೆಡಿಎಸ್‌ಗೆ ಬಿಟ್ಟಿದ್ದೇಕೆ?
ಮಂಡ್ಯದಲ್ಲಿ ಅವರ ಹಾಲಿ ಸಂಸದರಿದ್ದಾರೆ. ಮೈಸೂರನ್ನು ಬಿಟ್ಟು ಕೊಡಲು ನಾನೇ ಒಪ್ಪಲಿಲ್ಲ. ತುಮಕೂರಿನಲ್ಲಿ ಹಾಲಿ ಸಂಸದರಿದ್ದರೂ, ಜೆಡಿಎಸ್‌ಗೆ ಗೆಲ್ಲುವ ಅವಕಾಶವಿದೆ ಅಂತ ಬಿಟ್ಟು ಕೊಡಬೇಕಾಯಿತು.

ಮೋದಿಯವರನ್ನು ಟೀಕಿಸುವ ಧೈರ್ಯ ನಿಮಗೆ ಹೇಗೆ ಬಂತು?
ಬಿಜೆಪಿಯವರಿಗೆ ಯಾವುದೇ ಸಿದ್ದಾಂತವಿಲ್ಲ.ಮೋದಿಯವರು ಮಾತನಾಡುವ ಶೈಲಿಗೆ ನನ್ನ ವಿರೋಧವಿದೆ. ಮೋದಿಯವರು ಹೆಚ್ಚು ಸುಳ್ಳು ಹೇಳುತ್ತಾರೆ. ಹೀಗಾಗಿಯೇ, ನಾನು ಅವರ ಸುಳ್ಳುಗಳನ್ನು ವಿರೋಧಿಸುತ್ತೇನೆ. ವೈಯಕ್ತಿಕ ಕಾರಣಕ್ಕೆ ವಿರೋಧಿಸುವುದಿಲ್ಲ. ನನಗೆ ನೈತಿಕ ಶಕ್ತಿ ಇರುವುದರಿಂದ ನಾನು ವಿರೋಧಿಸುತ್ತೇನೆ.

Advertisement

ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಹತಾಶರಾಗಿದ್ದೀರಾ?
ನಾವು ಜನರಿಗೆ ಕೊಟ್ಟಂತಹ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವು. ಜನರು ನಮಗೆ ಮತ ಹಾಕುವ ಭರವಸೆ ನೀಡಿದ್ದರು. ಆದರೆ, ಚುನಾವಣೆ ಬಂದಾಗ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ, ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದರು. ಆಗ ಸ್ವಲ್ಪ ಮಟ್ಟಿಗೆ ಬೇಸರ ಆಗಿರುವುದು ನಿಜ. ಆದರೆ, ಹತಾಶನಾಗಿಲ್ಲ.

ಬಡ ಕುಟುಂಬಕ್ಕೆ ಮಾಸಿಕ ಆರು ಸಾವಿರ ಆದಾಯ ನೀಡುವುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ. ನೀವು ಹಣಕಾಸು ಸಚಿವರಾದವರು. ಇದರಿಂದ ಆರ್ಥಿಕ ಶಿಸ್ತು
ಕಾಪಾಡಲು ಸಾಧ್ಯವೇ?
ಬಡವರ ಪರ ಯೋಜನೆ ಘೋಷಣೆ ಮಾಡಿದಾಗ ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ಮಾಡುತ್ತಾರೆ. ನಾನು ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಇದೇ ರೀತಿ ವಿರೋಧ ಇತ್ತು. ದೇಶದ 25 ಕೋಟಿ ಜನರಿಗೆ ನಾವು ಅನುಕೂಲ ಮಾಡುತ್ತಿದ್ದೇವೆ.

ಯುವಕರಿಗೆ ರಾಜಕೀಯ ಜಾಗೃತಿ ಮೂಡಿಸುವುದು ಹೇಗೆ ?
ಸಂಘ ಪರಿವಾರ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮೀಸಲಾತಿ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ ಕಾಂಗ್ರೆಸ್‌ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದೆ ಅಂತ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಾವು ಯುವಕರನ್ನು ತಲುಪುವ ಕೆಲಸ ಮಾಡಬೇಕು. ಸಹಬಾಳ್ವೆ, ಸಹಿಷ್ಣುತೆ ನಮ್ಮ ದೇಶದ ಸಂಸ್ಕೃತಿ. ಇವೆರಡೂ ಬಂದರೆ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ. ಯುವಕರಿಗೆ ಇದನ್ನು.ತಿಳಿಸಿದರೆ ಸರಿದಾರಿಗೆ ಬರುತ್ತದೆ.

“ಆಪರೇಷನ್‌ ಕಮಲ’ವನ್ನು ಹೇಗೆ ನೀವು ನಿಯಂತ್ರಿಸುತ್ತೀರಿ?
“ಆಪರೇಷನ್‌ ಕಮಲ’ ಪ್ರಜಾಪ್ರಭುತ್ವಕ್ಕೆ ಮಾರಕ. ಯಡಿಯೂರಪ್ಪನವರು ಅಧಿಕಾರದ ಆಸೆಯಿಂದ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಚೌಕಿದಾರ ಅಂತ ಹೇಳುತ್ತಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ವಾ. ಅಮಿತ್‌ ಶಾ ಕೂಡ ಇದ್ರಲ್ಲಿ ಸೇರಿಕೊಡಿದ್ದಾರೆ. ಸಾರ್ವಜನಿಕರೇ ಪಾಠ ಕಲಿಸುವ ಕೆಲಸ ಮಾಡಬೇಕು. ಪಕ್ಷಾಂತರ ಕಾಯ್ದೆ ತಿದ್ದುಪಡಿ ಮಾಡಬೇಕು. ಒಮ್ಮೆ ಆಯ್ಕೆಯಾಗಿ ರಾಜೀನಾಮೆ ನೀಡಿದವರು ಕನಿಷ್ಠ ಐದು ವರ್ಷಚುನಾವಣೆಗೆ ನಿಲ್ಲದಂತಾ ಕಾನೂನು ಬೇಕು. ಪ್ರಜಾಪ್ರಭುತ್ವ ಉಳಿಸಲು ಕೆಲವು ನಿರ್ಬಂಧ ಬೇಕು.

ಯಡಿಯೂರಪ್ಪನವರು ಆಪರೇಷನ್‌ ಆಡಿಯೋ ತಮ್ಮದೇ ಅಂತ ಒಪ್ಪಿಕೊಂಡರೂ
ಯಾಕೆ ಕ್ರಮ ಕೈಗೊಂಡಿಲ್ಲ?
ಇದು ಅಸೆಂಬ್ಲಿಯಲ್ಲಿ ಚರ್ಚೆಯಾಗಿದೆ. ದೇವದುರ್ಗದಲ್ಲಿ ಕಂಪ್ಲೇಂಟ ಆಗಿದೆ. ಯಡಿಯೂರಪ್ಪ ಅವರು ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಸ್ಟೇ ತೆಗೆದು ಕೊಂಡಿ¨ªಾರೆ.

ಸಂವಿಧಾನಕ್ಕೆ ಬಿಜೆಪಿಯವರು ಗೌರವ ತೋರುತ್ತಿಲ್ಲ. ಅದನ್ನು ನೀವು ಹೇಗೆ ಗೌರವಿಸುವಂತೆ ಮಾಡುತ್ತೀರಿ? ಬಾಬಾಸಾಹೇಬ… ಅಂಬೇಡ್ಕರ್‌ ಅವರಿಂದ ರಚಿತವಾದ ಸಂವಿಧಾನ ಎಲ್ಲರಿಗೂ ಸಮಾನ, ಅವಕಾಶ ಒದಗಿಸಿದೆ. ಅವರಿಗೆ ಇದು ಇಷ್ಟ ಇಲ್ಲ. ಅದಕ್ಕೇ ಸಂವಿಧಾನವನ್ನು ಒಪ್ಪುವುದಿಲ್ಲ. ಆರ್‌ಎಸ್‌ಎಸ್‌ನ ಸರ್‌ಸಂಘಚಾಲಕರೇ ಸಂವಿಧಾನ ಬದಲಾಯಿಸುವ ಮಾತನಾಡು ತ್ತಾರೆ. ಅನಂತಕುಮಾರ್‌ ಹೆಗಡೆ ಅವರು ಬಿಜೆಪಿ ಒಪ್ಪಿಗೆ ಇಲ್ಲದೆ ಮಾತನಾಡಿಲ್ಲ. ಅದಕ್ಕಾಗಿಯೇ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲುತ್ತದೆ?
ನಮ್ಮ ಪಕ್ಷ ಕೇಂದ್ರದಲ್ಲಿ 150 ಸ್ಥಾನ ಗೆಲ್ಲುತ್ತದೆ. ಮೈತ್ರಿ ಪಕ್ಷಗಳು ಸೇರಿ 300 ಸ್ಥಾನ ಗೆಲ್ಲುತ್ತೇವೆ. ರಾಹುಲ್‌ ಪ್ರಧಾನಿ ಆಗುತ್ತಾರೆ.

ರಾಹುಲ್‌, ಮೋದಿ ನಾಯಕತ್ವದಲ್ಲಿನ ವ್ಯತ್ಯಾಸ ಏನು?
ಮೋದಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿಲ್ಲ. ಕೇಂದ್ರಿತ ವ್ಯವಸ್ಥೆ ಪರವಾಗಿದ್ದಾರೆ. ರಾಹುಲ್‌ ಗಾಂಧಿ ಪ್ರಜಾಪ್ರಭುತ್ವದ ಪರವಾಗಿದ್ದಾರೆ. ಅವರು ವಿಕೇಂದ್ರಿಕರಣದ ಬೆಂಬಲವಾಗಿದ್ದಾರೆ.

ರಫೇಲ್‌ ವಿಮಾನ ತಯಾರಿಕೆ ಎಚ್‌ಎಎಲ್‌ಗೆ ಅವಕಾಶ ತಪ್ಪಿರುವುದಕ್ಕೆ ಏನು
ಹೇಳುತ್ತೀರಿ?
ರಫೆಲ್‌ ಯುದ್ಧ ವಿಮಾನ ಖರೀದಿ ಕುರಿತು ಯುಪಿಎ ಅವಧಿಯಲ್ಲಿ ಆಗಿದ್ದ ಒಪ್ಪಂದವನ್ನು ಮೋದಿ ಬದಲಾಯಿಸಿದರು. ದೇಶದಲ್ಲಿ ಎಚ್‌ ಎಎಲ್‌  ಮಾತ್ರ ವಿಮಾನ ತಯಾರಿಸುವ ಏಕೈಕ ಸಂಸ್ಥೆ. ಆದರೆ, ಮೋದಿಯವರು ಅದನ್ನು ಬಿಟ್ಟು ಖಾಸಗಿ ಕಂಪನಿಗೆ ಕಾಂಟ್ರಾಕ್ಟ್
ನೀಡಿದರು. ಅದರಲ್ಲಿ ಅವ್ಯವಹಾರ ಆಗಿದೆ ಅನ್ನುವುದು ನಮ್ಮ ಆರೋಪ. ನಮ್ಮ.ಸರ್ಕಾರ ಬಂದರೆ ಅದನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next