2022ರ ನವೆಂಬರ್‌ನಲ್ಲಿ ಆರಂಭವಾದ ಕೊಠಡಿ ನಿರ್ಮಾಣ ಕಾಮಗಾರಿಯನ್ನು 2023-24ನೇ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಪೂರ್ಣಗೊಳಿಸುವ ಉದ್ದೇಶವನ್ನು ಹಿಂದಿನ ಸರಕಾರ ಹೊಂದಿದ್ದರೂ ಚುನಾವಣೆ ನೀತಿ ಸಂಹಿತೆ ಎದುರಾಗಿತ್ತು. ಹೊಸ ಸರಕಾರ ಬಂದ ಬಳಿಕ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ.
Advertisement
ಉಡುಪಿ ಜಿಲ್ಲೆಯಲ್ಲಿ 200 ಹಾಗೂ ದಕ್ಷಿಣ ಕನ್ನಡದಲ್ಲಿ 285 ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಿವೇಕ ಯೋಜನೆಯಡಿ 485 ಹೊಸ ಕೊಠಡಿಗಳನ್ನು ನಿರ್ಮಿಸ ಲಾಗುತ್ತಿದೆ. ಪ್ರತೀ ಶಾಲೆಗೆ ಒಂದರಂತೆ ಹಾಗೂ ಹೆಚ್ಚು ಆವಶ್ಯಕತೆ ಇರುವ ಶಾಲೆಗಳಿಗೆ ಎರಡು ಅಥವಾ ಮೂರು ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ.
ಮಳೆಗಾಲ ಆರಂಭವಾಗುತ್ತಿದ್ದು, ಕಾಮಗಾರಿಗಳನ್ನು ನಡೆಸು ವುದು ಕಷ್ಟ. ಎಲ್ಲ ಶಾಲೆಗಳಲ್ಲೂ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಗಾರೆ, ಬಣ್ಣ ಬಳಿಯುವುದಷ್ಟೆ ಬಾಕಿಯಿದೆ. ಸರಕಾರದ ಸೂಚನೆ ಬಾರದೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಕೊಠಡಿ ಅನಿವಾರ್ಯ
ಮಳೆಗಾಲದಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಕೆಲವು ಶಾಲೆಗಳಲ್ಲಿ ಸರಿ ಯಾದ ಕೊಠಡಿ ವ್ಯವಸ್ಥೆಯಿಲ್ಲ. ಹೊಸ ಕೊಠಡಿ ಆದಷ್ಟು ಬೇಗ ಪೂರ್ಣಗೊಳಿಸಬೇಕಾಗಿದೆ. ಇಲ್ಲವಾದರೆ ಶಿಥಿಲ ಕೊಠಡಿಯಲ್ಲೇ ಬೋಧನೆ ಅನಿವಾರ್ಯ. ಸರಕಾರ ಬೇಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಮುಖ್ಯ ಶಿಕ್ಷಕರ ಆಗ್ರಹವಾಗಿದೆ.
Related Articles
ಉಡುಪಿ, ಕಾಪು, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ತಲಾ 40 ಕೊಠಡಿ, ಇದರಲ್ಲಿ ಜಿ.ಪಂ. ಸಿಇಒ ವಿವೇಚನೆಗೆ ಬಿಟ್ಟಿ ರುವ 5 ಕೊಠಡಿಗಳು ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಸುಳ್ಯ, ಮೂಲ್ಕಿ- ಮೂಡುಬಿದಿರೆ ಕ್ಷೇತ್ರಗಳಲ್ಲಿ ತಲಾ 35 ಹಾಗೂ ಜಿ.ಪಂ. ಸಿಇಒ ವಿವೇಚನೆಗೆ 5 ಸೇರಿ 285 ಶಾಲಾ ಕೊಠಡಿ ಮಂಜೂರಾಗಿವೆ.
Advertisement
ವಿವೇಕ ಕೊಠಡಿಯ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆ. ಚುನಾವಣೆ ಹಾಗೂ ತಾಂತ್ರಿಕ ಕಾರಣದಿಂದ ಕಾಮಗಾರಿ ಸ್ವಲ್ಪ ತಡವಾಗಿದೆ. ಸದ್ಯ ಎಲ್ಲವೂ ಸ್ಲಾéಬ್ ಹಂತದಲ್ಲಿ ಬಾಕಿಯಿವೆ. ಎಲ್ಲಿಯೂ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಎಲ್ಲ ಶಾಲೆಗಳಿಗೂ ಕೊಠಡಿ ಹಸ್ತಾಂತರ ನಡೆಯಲಿದೆ.– ಕೆ. ಗಣಪತಿ, ದಯಾನಂದ ನಾಯಕ್, ಡಿಡಿಪಿಐಗಳು, ಉಡುಪಿ ಮತ್ತು ದ.ಕ. ಜಿಲ್ಲೆ 72 ಕೋಟಿ ರೂ. ನಿರೀಕ್ಷೆ
ಯೋಜನೆಯಡಿ ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಸುಮಾರು 13.90 ಲಕ್ಷ ರೂ. ಮತ್ತು ಪ್ರೌಢಶಾಲೆಯ ಒಂದು ಕೊಠಡಿಗೆ ಸುಮಾರು 16.40 ಲಕ್ಷ ರೂ. ಅಂದಾಜಿನಂತೆ ಉಡುಪಿಯಲ್ಲಿ 200 ಕೊಠಡಿಗಳಿಗೆ ಸುಮಾರು 30 ಕೋ.ರೂ. ಹಾಗೂ ದ.ಕ.ದಲ್ಲಿ 285 ಕೊಠಡಿಗಳಿಗೆ 42 ಕೋ.ರೂ. ಸರಕಾರದಿಂದ ಬರುವ ಸಾಧ್ಯತೆಯಿದೆ. ~ ರಾಜು ಖಾರ್ವಿ ಕೊಡೇರಿ