Advertisement

Kolara; ಇವಿಎಂ ಉಗ್ರಾಣ ಪರಿಶೀಲಿಸಿದರೂ ಕೋರ್ಟ್‌ ಕೇಳಿದ್ದ ದಾಖಲೆ ಸಿಗಲೇ ಇಲ್ಲ!

11:58 PM Aug 13, 2024 | Team Udayavani |

ಕೋಲಾರ: ಕಳೆದ ವಿಧಾನಸಭೆ ಚುನಾವಣೆಯ ಮಾಲೂರು ಕ್ಷೇತ್ರದ ಫಲಿತಾಂಶದ ತಕರಾರು ಅರ್ಜಿ ವಿಚಾರವಾಗಿ ಹೈಕೋರ್ಟ್‌ ದಾಖಲೆ ಕೇಳಿದ್ದರಿಂದಾಗಿ ಜಿಲ್ಲಾಡಳಿತವು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆದು ಪರಿಶೀಲನೆ ನಡೆಸಲಾಯಿತಾದರೂ ಹೈಕೋರ್ಟ್‌ ಕೇಳಿದ್ದ ನಿರ್ದಿಷ್ಟ ದಾಖಲೆ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.

Advertisement

ಮಧ್ಯಾಹ್ನ 12 ಗಂಟೆ ವೇಳೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡೀಸಿ ಅಕ್ರಂಪಾಷಾ, ಎಸ್ಪಿ ನಿಖೀಲ್‌ ಜತೆ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟರುವ ದಾಖಲೆ ಪರಿಶೀಲಿಸಿದರು. ಆದರೆ ಒಂದೂವರೇ ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದರೂ ಅಗತ್ಯ ದಾಖಲೆ ಸಿಗಲೇ ಇಲ್ಲ.

ತಕರಾರು ಅರ್ಜಿ ಸಲ್ಲಿಸಿರುವ ಮಾಜಿ ಶಾಸಕ ಕೆ.ಎಸ್‌. ಮಂಜುನಾಥ್‌ಗೌಡ ಮಾತನಾಡಿ, ಸಿಸಿ ಕೆಮರಾ ದೃಶ್ಯಾವಳಿ, 17 ಸಿ ಫಾರಂಗಳನ್ನು ನೀಡುವಂತೆ ನ್ಯಾಯಾಲಯವು ಆದೇಶ ಮಾಡಿತ್ತು.  ಮರು ಮತ ಎಣಿಕೆಗೆ ಅಗತ್ಯವಿದ್ದ ದಾಖಲೆಗಳು ಚುನಾವಣೆ ಫಲಿತಾಂಶದ ದಿನದಂದೇ ಲಭ್ಯವಿತ್ತು. ಆದರೆ ಈಗ ಇಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ 50,955 ಮತ ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಮಂಜುನಾಥಗೌಡ 50,707 ಮತ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next