ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಜನರೂ ಇಷ್ಟಪಡುತ್ತಾರೆ. ಪಾಕಿಸ್ತಾನದ ಜನರೂ ಮೋದಿಯಂತಹ ನಾಯಕನನ್ನು ಬಯಸುತ್ತಾರೆ ಎಂದು ಗಾಯಕ ಅನೂಪ್ ಜಲೋಟಾ ಹೇಳಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮೊದಲು ಅನೂಪ್ ಜಲೋಟಾ ಹೇಳಿದರು.
“ಜನರು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಾರೆ. ಪಾಕ್ ಕೂಡ ಅವರನ್ನು ಪ್ರೀತಿಸುತ್ತದೆ. ಪಾಕ್ ನಲ್ಲಿರುವ ಜನರು ಅವರಿಗೆ ಅವರಂತಹ ನಾಯಕ ಬೇಕು ಎಂದು ಹೇಳುತ್ತಾರೆ. ಸಿಡ್ನಿಯ ಜನರ ಹೃದಯದಲ್ಲಿ ಒಂದು ವಿಷಯವಿದೆ, ಅವರು ಅವರನ್ನು ಶಾಶ್ವತ ಪ್ರಧಾನಿಯಾಗಲು ಬಯಸುತ್ತಾರೆ” ಎಂದು ಅನೂಪ್ ಜಲೋಟಾ ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದರು.
Related Articles
ಮೂರು ದಿನದ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾಗೆ ಆಗಮಿಸಿದರು. ಜಿ7 ಸಮ್ಮೇಳನಕ್ಕಾಗಿ ಜಪಾನ್ ನ ಹಿರೋಶಿಮಾಗೆ ತೆರಳಿದ್ದ ಮೋದಿ ಬಳಿಕ ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿದ್ದರು.