ಹೊಸದಿಲ್ಲಿ : ‘ನೀವು ನಮ್ಮ ಕತ್ತನ್ನು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರಾಗಿರುವ ಸಂಸದ ಅಸಾದುದ್ದೀನ್ ಓವೈಸಿ ಗುಡುಗಿದ್ದಾರೆ.
ಹರಿಯಾಣದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಯಿತೆಂಬ ವರದಿಗಳ ಹಿನ್ನೆಲೆಯಲ್ಲಿ ಓವೈಸಿ ಈ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.
“ಮುಸ್ಲಿಂ ವ್ಯಕ್ತಿಯೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಿತೆಂದು ನಾವು ಕೇಳಿದ್ದೇವೆ. ಈ ಕೃತ್ಯ ಎಸಗಿರುವವರಿಗೆ ಮತ್ತು ಅವರ ಅಪ್ಪಂದಿರಿಗೆ ನಾನು ಎಚ್ಚರಿಸುವುದೇನೆಂದರೆ ನೀವು ನಮ್ಮ ಕತ್ತನ್ನು ಕೊಯ್ದರು ಕೂಡ ನಾವು ಮುಸ್ಲಿಮರಾಗಿಯೇ ಇರುತ್ತೇವೆ. ನಾವು ನಿಮ್ಮನ್ನು ಇಸ್ಲಾಮ್ ಗೆ ಮತಾಂತರಿಸುತ್ತೇವೆ ಮತ್ತು ನೀವು ಗಡ್ಡ ಬಿಡುವಂತೆ ಮಾಡುತ್ತೇವೆ” ಎಂದು ಓವೈಸಿ ಕಿಡಿ ಕಾರಿದರು.
ಕಳೆದ ಗುರುವಾರ ಗುರುಗ್ರಾಮದ ಸೆಕ್ಟರ್ 29ರಲ್ಲಿ ಮುಸ್ಲಿಮ್ ಯುವಕನೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಿತೆಂಬ ಘಟನೆ ವರದಿಯಾಗಿತ್ತು.
ಯೂನುಸ್ ಎಂಬ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಇಬ್ಬರು ಅಪರಿಚಿತರೊಂದಿಗೆ ಮಾತಿನ ಜಗಳ ಉಂಟಾಗಿತ್ತು. ಈ ಜಗಳದ ಪರಾಕಾಷ್ಠೆಯಲ್ಲಿ ಅವರು ಯೂನುಸ್‌ನ ಗಡ್ಡವನ್ನು ಬಲಂತವಾಗಿ ಬೋಳಿಸಿದ್ದರು ಎನ್ನಲಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ ಈ ಘಟನೆಯು ಒಂದು ಹೇರ್ ಕಟ್ಟಿಂಗ್ ಸೆಲೂನ್‌ನ ಒಳಗೆ ನಡೆದಿತ್ತು. ಅಪರಿಚಿತ ದುಷ್ಕರ್ಮಿಗಳು ಮುಸ್ಲಿಂ ಯುವಕನನ್ನು ಸಮೀಪದ ಹೇರ್ ಕಟ್ಟಿಂಗ್ ಸೆಲೂನ್‌ಗೆ ಎಳೆದೊಯ್ದು ಅಲ್ಲಿ ಆತನ ಗಡ್ಡವನ್ನು ಬಲವಂದಿಂದ ಬೋಳಿಸಿದ್ದರು ಎನ್ನಲಾಗಿತ್ತು.
ಬಲವಂತದಿಂದ ಗಡ್ಡ ಬೋಳಿಸಿಕೊಂಡಿದ್ದ ಸಂತ್ರಸ್ತ ಮುಸ್ಲಿಂ ವ್ಯಕ್ತಿ ಅನಂತರ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.