Advertisement

ಪಾರ್ಟ್ಸ್ ಹೋಗುತ್ತಿದ್ದರೂ ಮತದಾರರ ಋಣ ತೀರಿಸುವೆ..

03:34 PM Jul 05, 2017 | Team Udayavani |

ದಾವಣಗೆರೆ: ಅವರು (ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌) ಹೇಳಿದಂತೆ ನನ್ನ ಒಂದೊಂದು ಪಾರ್ಟ್ಸ್ (ದೇಹದ ಭಾಗ) ಹೋಗುತ್ತಿದ್ದರೂ ಮತ ನೀಡಿದವರ ಋಣ ತೀರಿಸಲು, ಸಮಸ್ಯೆಗೆ ಸ್ಪಂದಿಸಲು ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಅವರು ಎಷ್ಟು ಕಡೆ ಹೋಗಿದ್ದಾರೆ ಎಂಬುದನ್ನು ತಿಳಿಸಲಿ… ಇದು ಸಂಸದ ಜಿ.ಎಂ. ಸಿದ್ದೇಶ್ವರ್‌ ಜಿಲ್ಲಾ 
ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌  ಟೀಕೆಗೆ ಹಾಕಿರುವ ಸವಾಲು.

Advertisement

ಮಂಗಳವಾರ 15ನೇ ವಾರ್ಡ್‌ನ ಭಾರತ್‌  ಕಾಲೋನಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕ ಉದ್ಘಾಟಿಸಿ ಮಾತನಾಡಿದ ತಮ್ಮ ಭಾಷಣದಲ್ಲಿ ಸಿದ್ದೇಶ್ವರ್‌, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.
ಮಲ್ಲಿಕಾರ್ಜುನ್‌ ನಮ್ಮ ತಂದೆಗೆ ವಯಸ್ಸಾಗಿದೆ ಎಂದೇಳುವ ಸಿದ್ದೇಶ್ವರರ ಬಾಡಿಯ ಒಂದೊಂದೆ ಪಾರ್ಟ್ಸ್ ಹೋಗುತ್ತಿವೆ ಎಂದಿದ್ದಾರೆ. ಯಾರೇ ಆಗಲಿ ವೈಯಕ್ತಿಕವಾದ ವಿಚಾರ ಹೇಳಿಕೆ ನೀಡುವುದು ಸರಿಯಲ್ಲ. ಅವರು ನನ್ನ ಒಂದೊಂದು ಪಾರ್ಟ್ಸ್ ಹೋಗುತ್ತಿವೆ ಎಂದಿರುವುದಕ್ಕೆ ಕಾಲವೇ ತಕ್ಕ ಉತ್ತರ ಕೊಡಲಿದೆ ಎಂದರು.

ನನ್ನ ಒಂದೊಂದು ಪಾರ್ಟ್ಸ್ ಹೋಗುತ್ತಿದ್ದರೂ ಮೂರು ಚುನಾವಣೆಯಲ್ಲಿ ನನಗೆ ಮತ ನೀಡಿದವರ ಋಣ ತೀರಿಸಲು, ಸಮಸ್ಯೆಗೆ ಸ್ಪಂದಿಸಲು ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಅವರು ಮೂರು ಬಾರಿ ನನ್ನ ವಿರುದ್ಧ ಸ್ಪರ್ಧಿಸಿ, ಸೋತಿದ್ದಾರೆ. ಲಾಸ್ಟ್‌ ಎಲೆಕ್ಷನ್‌ನಲ್ಲಿ ನನಗೆ 5.17 ಲಕ್ಷ ವೋಟ್‌ ಕೊಟ್ಟಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಕಡೆ ಹೋಗುತ್ತೇನೆ. ಅವರು
ಎಷ್ಟು ಕಡೆ ಹೋಗಿದ್ದಾರೆ ಎಂಬುದನ್ನು ತಿಳಿಸಲಿ. ಅವರಿಗೂ ಜನರು 5 ಲಕ್ಷ ವೋಟ್‌ ಕೊಟ್ಟಿದ್ದಾರೆ ಎಂಬುದನ್ನು ಮರೆಯಬಾರದು  ಎಂದು ತಾಕೀತು ಮಾಡಿದರು. ಇನ್ನೂ ಸಾಕಷ್ಟುಮಾತನಾಡುವುದು, ಹೇಳುವುದು ಇದೆ. 
ನಾಳೆ(ಬುಧವಾರ) ನನ್ನ ಬರ್ತ್‌ಡೇ ಇದೆ. ಅಲ್ಲಿ ಮಾತನಾಡುತ್ತೇನೆ… ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ಸಮಯ ಬಂದಾಗ ಉತ್ತರಿಸುವೆ… 
ಮಾಜಿ, ಹಾಲಿ ಸಚಿವರು ನನ್ನ ಬಗ್ಗೆ  ಏನೆಲ್ಲಾ ಮಾತನಾಡಿದ್ದಾರೆ. ಸಮಯ ಬಂದಾಗ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ.
ಹಿಂದಿನ ಸಚಿವರು ಹಿರಿಯರು. ಅವರ ಬಗ್ಗೆ ಗೌರವ ಇದೆ. ಅವರು ಯಾರ ಬಗ್ಗೆಯೇ ಆಗಲಿ ಗೌರವದಿಂದ 
ಮಾತನಾಡಬೇಕು. ಅದನ್ನು ಬಿಟ್ಟು  ಯಾರೋ ಬೀದಿಯಲ್ಲಿ, ಮಾರ್ಕೆಟ್‌ನಲ್ಲಿ ಮಾತನಾಡಿದ ರೀತಿ ಮಾತನಾಡುವುದು
ಸರಿಯಲ್ಲ. ಯಾಕೆಂದರೆ ಎಲ್ಲರಿಗೂ ಅವರದ್ದೇ ಆದ ಗೌರವ ಇದ್ದೇ ಇರುತ್ತದೆ. ಹಾಗಾಗಿ ಎಲ್ಲರ ಬಗ್ಗೆಯೂ ಗೌರವದಿಂದ
ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಹೇಳಿದರು. ಬೇರೆ ಎಲ್ಲಾ ಕಡೆ ಸ್ಮಾಟ್‌
ìಸಿಟಿ ಕೆಲಸ ಆಗುತ್ತಿವೆ. ಇಲ್ಲಿ ಯಾಕೆ ಆಗುತ್ತಿಲ್ಲ. ದಾವಣಗೆರೆಗೆ ಮಾತ್ರವೇ ಮೋದಿಯವರು ಕಠಿಣ ಕ್ರಮ
ತೆಗೆದುಕೊಂಡಿಲ್ಲ. ಅಭಿವೃದ್ಧಿ ವಿಚಾರ ಬಂದಾಗ ನಾವು- ಅವರು ಒಂದಾಗಿ ಕೆಲಸ ಮಾಡಬೇಕು. ರಾಜಕೀಯವನ್ನ
ಚುನಾವಣಾ ಅಖಾಡದಲ್ಲಿ ಮಾಡಬೇಕು. ಅಲ್ಲಿ ಸಡ್ಡು ಹೊಡೆಯಬೇಕು. ನನ್ನ ಬಗ್ಗೆ ಮಾತನಾಡಿರುವುದಕ್ಕೆ ಈ
ಕಾರ್ಯಕ್ರಮದಲ್ಲಿ ಉತ್ತರ ಕೊಡುವುದು ಸರಿಯಲ್ಲ. ಸಮಯ ಬಂದಾಗ ತಕ್ಕ ಉತ್ತರ ಕೊಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next