Advertisement

Politics: ಸತ್ತರೂ ನನ್ನ ಶವದ ಮೇಲೆ ಬಿಜೆಪಿ ಬಾವುಟ ಹಾಕಿ ಅಂತ್ಯಸಂಸ್ಕಾರ: ಸೋಮಶೇಖರ ರೆಡ್ಡಿ

09:12 PM Aug 23, 2023 | Team Udayavani |

ಬಳ್ಳಾರಿ: ನನ್ನ ರಕ್ತದಲ್ಲಿಯೇ ಇರುವ ಬಿಜೆಪಿಯನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತರೂ ನನ್ನ ಶವದ ಮೇಲೆ ಬಿಜೆಪಿ ಬಾವುಟ ಹಾಕಿ ಅಂತ್ಯಸಂಸ್ಕಾರ ಮಾಡುವಂತೆ ಹೇಳಿದ್ದೇನೆ. ನಾನು ರಾಜಕೀಯದಲ್ಲಿದ್ದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ. ಇಲ್ಲದಿದ್ದರೆ ರಾಜಕೀಯವನ್ನೇ ಬಿಡುತ್ತೇನೆ. ಕಾಂಗ್ರೆಸ್‌ ಸೇರುವುದು ನಮ್ಮ ಕನಸು ಮನಸ್ಸಿನಲ್ಲೂ ಇಲ್ಲ. ನಾನೊಬ್ಬ ಮಾಜಿ ಶಾಸಕ. ಡಿಸಿಎಂ ಡಿ.ಕೆ.ಶಿವಕುಮಾರ್‌ ಮನೆಗೆ ಕೆಲಸದ ನಿಮಿತ್ತ ಮನೆಗೆ ಹೋಗಿದ್ದೆ. ಈ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆಗಳು ನಡೆದಿಲ್ಲ. ರಾಜಕೀಯ ವಿಚಾರ ಮಾತನಾಡಲು ಸಹ ಏನೂ ಇಲ್ಲ. ಮನೆಗೆ ಭೇಟಿ ನೀಡಿದ್ದಕ್ಕೆ ತಪ್ಪು ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.

ದೇಶದಲ್ಲಿ ಬಿಜೆಪಿ ಕ್ಷೀಣಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳಿಂದ ನಮಗೆ ಸೋಲಾಗಿದೆ. ನ್ಯಾಯವಾಗಿ ಸೇವೆ ಮಾಡಿದ್ದೇವೆ. ನಾವು ಸೋತಿಲ್ಲ, ಗೆದ್ದಿದ್ದೇವೆ. ಗ್ಯಾರಂಟಿ ಕೊಟ್ಟು ಅ ಧಿಕಾರಕ್ಕೆ ಬಂದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಲಿ ಸಂಸದರಾಗಿ ದೇವೇಂದ್ರಪ್ಪ ಇದ್ದಾರೆ. ಸದ್ಯ ಎಂಎಲ್‌ಎ ಚುನಾವಣೆಯಲ್ಲಿ ಸೋಲು ಕಂಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರೀರಾಮುಲು ಜನರ ಮಧ್ಯೆ ಇರುವ ಅಗತ್ಯವಿದೆ. ಅದಕ್ಕಾಗಿ ಎಂಪಿ ಟಿಕೆಟ್‌ ನೀಡುವುದು ಸೂಕ್ತ. ಆದರೆ, ಈ ವಿಷಯ ಅಂತಿಮವಾಗಿ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.

2024ರಲ್ಲಿ ಕೇಂದ್ರದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿ ಮೋದಿ ಅಧಿ ಕಾರ ಹಿಡಿಯಲಿದ್ದಾರೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅವರ ಹತ್ತಿರಕ್ಕೂ ಯಾರು ಸುಳಿಯಲಾರರು. ಇಂಡಿಯಾ ಸಂಘಟನೆ ಚುನಾವಣೆ ವೇಳೆಗೆ ವಿಘಟನೆಯಾಗಲಿದೆ. ದೇಶ, ಶತ್ರುಗಳಿಂದ ಮತ್ತು ಆರ್ಥಿಕವಾಗಿ ಸುಭದ್ರವಾಗಿರಬೇಕೆಂದರೆ ಬಿಜೆಪಿಗೆ ಮತ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next