Advertisement

ಭಾರತೀಯ ಕ್ರೀಡಾಪಟುಗಳಿಂದ ಮುಂದಿನ ಏಷ್ಯಾಡ್‌ನಲ್ಲಿಇನ್ನೂ ಉತ್ತಮ ಸಾಧನೆ: ಪ್ರಧಾನಿ ವಿಶ್ವಾಸ

11:16 PM Oct 10, 2023 | Team Udayavani |

ಹೊಸದಿಲ್ಲಿ: ಭಾರತೀಯ ಕ್ರೀಡಾಪಟುಗಳು ಮುಂದಿನ ಏಷ್ಯಾಡ್‌ನಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದು, ಇದಕ್ಕೆ ಬೇಕಾದ ಎಲ್ಲ ನೆರವನ್ನು ಸರಕಾರದ ಕಡೆಯಿಂದ ಕೊಡಲಾಗುತ್ತದೆ ಎಂದಿದ್ದಾರೆ.

Advertisement

ಏಷ್ಯಾಡ್‌ನಲ್ಲಿ ಪದಕ ಗೆದ್ದು ಬಂದ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಎದುರಾಗಿರುವ ಎಲ್ಲ ತೊಂದರೆಗಳನ್ನು ನಿವಾರಿಸುತ್ತೇವೆ ಎಂದು ಭರವಸೆ ನೀಡಿದರು. ಈ ಬಾರಿ 100 ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದೀರಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪದಕ ಗೆದ್ದು ಬನ್ನಿ ಎಂದರು. ಏಷ್ಯಾಡ್‌ನಂತೆಯೇ ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಉತ್ತಮ ಸಾಧನೆ ಮಾಡಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಅವರು ವಿಶೇಷವಾಗಿ ಅಭಿನಂದಿಸಿದರು. “ಅರ್ಧದಷ್ಟು ಪದಕಗಳನ್ನು ಮಹಿಳೆಯರೇ ಗೆದ್ದಿದ್ದಾರೆ. ಅವರ ಸಾಧನೆ ಮಹತ್ವದ್ದಾಗಿದೆ ಎಂದರು. ನಮ್ಮ ಕ್ರೀಡಾಪಟುಗಳು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಿದ್ದಾರೆ. ಭಾರತ ಎಂದಿಗೂ ಪ್ರತಿಭೆಗಳ ಕೊರತೆ ಅನುಭವಿಸಿಲ್ಲ. ಇವರಿಗೆ ಗೆಲುವು ಕೂಡ ಜತೆಗಿರುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next